twitter
    For Quick Alerts
    ALLOW NOTIFICATIONS  
    For Daily Alerts

    ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ 'ಭಾವನೆಗಳ ಬೆನ್ನೇರಿ'

    By Rajendra
    |

    ಪ್ರೊ.ಬರಗೂರು ರಾಮಚಂದ್ರಪ್ಪ ಅವರ 'ಅಂಗುಲಿಮಾಲ' ಚಿತ್ರ ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಬೆನ್ನಲ್ಲೇ ಮತ್ತೊಂದು ಕನ್ನಡ ಚಿತ್ರವೂ ಆಯ್ಕೆಯಾಗಿದೆ. ಕನ್ನಡ ಚಿತ್ರಗಳು ಭಾರತದ ಗಡಿದಾಟುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ.

    ಟಿ.ಜಿ.ರಂಗನಾಥ್ ಮತ್ತು ಬಿ.ಆರ್.ಲತಾ ನಿರ್ಮಿಸಿರುವ 'ಭಾವನೆಗಳ ಬೆನ್ನೀರಿ' ಚಿತ್ರ ಪ್ರತಿಷ್ಠಿತ ರಫೀ ಪೀರ್ ಅಂತರರಾಷ್ಟೀಯ ಚಲನಚಿತ್ರೋತ್ಸವದ ಆಯ್ಕೆಯ ಗೌರವ ಪಡೆದಿದೆ. ಬುದ್ಧಿಮಾಂದ್ಯ ಮಗುವಿನ ಭಾವನೆಗಳ ಸುತ್ತ ಕದಲುವ ಕನ್ನಡದ ವಿಶೇಷ ಚಲನಚಿತ್ರವಿದು.

    Bhavanegala Benneri still
    ಬಸವರಾಜ ವಾಲಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಉಪಾಸನಾ ಮೋಹನ್ ಸಂಗೀತ ನಿರ್ದೇಶನವಿದೆ. 'ಭಾವನೆಗಳ ಬೆನ್ನೇರಿ' ಡಿಸೆಂಬರ್ ಅಂತ್ಯದಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

    ಈ ಕುರಿತು ಸಂತಸ ಹಂಚಿಕೊಂಡ ಚಿತ್ರ ನಿರ್ದೇಶಕ ನಿಖಿಲ್ ಮಂಜು, "ವಾಣಿಜ್ಯಾತ್ಮಕ ಚಿತ್ರಗಳ ಇಂದಿನ ಸಂತೆಯಲ್ಲಿ ತಮ್ಮ ಪುಟ್ಟ ಚಿತ್ರ ಆಯ್ಕೆಯಾಗಿರುವುದು ಸಂತಸ ತಂದಿದೆ. ಬುದ್ಧಿಮಾಂದ್ಯ ಮಗುವೊಂದರ ಭಾವನಾಜಗತ್ತಿನ ಅನಾವರಣ ಮಾಡುವ ಇಂತಹ ಪ್ರಯೋಗಾತ್ಮಕ ಪುಟ್ಟ ಚಿತ್ರಗಳಿಗೆ ಸಿಗುವ ಇಂತಹ ದೊಡ್ಡ ಗೌರವ ನನ್ನಂತಹ ಇನ್ನಷ್ಟು ನಿರ್ದೇಶಕರಿಗೆ ಉತ್ತೇಜನಾಕಾರಿ" ಎಂದಿದ್ದಾರೆ.

    ಚಿತ್ರದ ನಿರ್ಮಾಪಕರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ಅರ್ಪಿಸಿರುವ ಅವರು, ಚಿತ್ರದ ಮುಖ್ಯ ಪಾತ್ರದಾರಿ ಮಾಸ್ಟರ್ ಕಾರ್ತೀಕ್ ನಿಜಜೀವನದಲ್ಲೂ ಮಾನಸಿಕವಾಗಿ, ದೈಹಿಕವಾಗಿ ವಿಶೇಷ ಮಗುವಾಗಿದ್ದರೂ ನಟನೆಯ ಸಂದರ್ಭದಲ್ಲಿ ಸ್ಪಂದಿಸಿದ ಕ್ಷಣಗಳನ್ನು ಮೆಲಕು ಹಾಕಿದರು. (ಒನ್ಇಂಡಿಯಾ ಕನ್ನಡ)

    English summary
    Director Nikhit Manju's Kannada film 'Bhavanegala Benneri' selects for Pakistan's Rafi Peer film festival, which will be held in December end at Lahore. The movie produced by TG Ranganath and BR Latha starring Master Karthik in the lead. 
    Monday, November 11, 2013, 11:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X