»   » ನೀಲಿ ಕಲರ್ ನಲ್ಲಿ ಮೈ...ಸೂರ ಮಲ್ಲಿಗೆ ಸ್ಕ್ಯಾಂಡಲ್

ನೀಲಿ ಕಲರ್ ನಲ್ಲಿ ಮೈ...ಸೂರ ಮಲ್ಲಿಗೆ ಸ್ಕ್ಯಾಂಡಲ್

By: ಉದಯರವಿ
Subscribe to Filmibeat Kannada

ಶರ್ಟ್ ಬಿಚ್ಚಿರುವ ನಾಯಕ, ಅರೆಬರೆ ಸ್ಥಿತಿಯಲ್ಲಿ ನಾಯಕಿ. ಹಾಗಂತ ಇದು ನೀಲಿ ಚಿತ್ರವಲ್ಲ. ಇದೊಂದು 'ಬ್ಲೂ ಮೂನ್' ಅಂದ್ರೆ ನೀಲಿ ಚಂದ್ರನ ಚಿತ್ರ. ಮೈ...ಸೂರ ಮಲ್ಲಿಗೆ ಸ್ಕ್ಯಾಂಡಲ್ ಎಂಬುದು ಈ ಚಿತ್ರದ ಶೀರ್ಷಿಕೆ ಮೇಲಿನ ಬರಹ. ಈ ಚಿತ್ರದ ಕೆಳಗಿನ ಬರಹ ಇನ್ನೂ ವಿಚಿತ್ರ. ಅದೇನೆಂದರೆ 'ಎಂ.ಎಂ.ಎಸ್'.

ಈ ರೀತಿಯ ವಿಭಿನ್ನ ಚಿತ್ರವನ್ನು ಕೈಗೆತ್ತಿಕೊಂಡಿರುವವರು ಈ ಹಿಂದೆ 'ಗನ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಂಜಯ್. 'ಬ್ಲೂ ಮೂನ್' ಚಿತ್ರ ಅವರ ಎರಡನೇ ಕಾಣಿಕೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಚಿತ್ರದ ಸ್ಟಿಲ್ಸ್ ಇವೆ. ಒಂದಕ್ಕಿಂತ ಒಂದು ರೊಮ್ಯಾಂಟಿಕ್ ಆಗಿರುವ ಈ ಚಿತ್ರದ ಫೋಟೋಗಳು ಸದ್ಯಕ್ಕೆ ಪಡ್ಡೆಗಳ ಮೈಯಲ್ಲಿ ಮಿಂಚಿನ ಸಂಚಾರ ಮಾಡುತ್ತಿವೆ.

ಈ ಚಿತ್ರದಲ್ಲಿರುವ ನಟ ನಟಿಯರೆಲ್ಲಾ ಹೊಸಬರು. ವಿಷ್ಣುವರ್ಧನ್ ಚಿತ್ರದ ನಾಯಕ ನಟ, ಬಂಗಾಳಿ ಮೂಲದ ಮೋನಿಷಾ ಚೌಧರಿ ಚಿತ್ರದ ನಾಯಕಿ. ವಿಕ್ರಂ, ಬಾಲಾಜಿ, ಪೂಜಾ ಚಿತ್ರದಲ್ಲಿರುವ ಇತರರು. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್.

ಹದಿಹರೆಯದ ಪ್ರೇಮ ಜೊತೆಗೆ ಸೆಂಟಿಮೆಂಟ್ ಸಹ ಇರುತ್ತದೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿರುವವ ಕಲಾವಿದರೆಲ್ಲಾ ಹೊಸಬರೇ ಆದರೂ ಮೈಚಳಿ ಬಿಟ್ಟು ಅಭಿನಯಿಸಿರುವುದನ್ನು ಸ್ಟಿಲ್ಸ್ ಗಳಲ್ಲಿ ಕಾಣಬಹುದು.

ಶರ್ಟ್ ಬಿಚ್ಚಿರುವ ನಾಯಕ, ಅರೆಬರೆ ಸ್ಥಿತಿಯಲ್ಲಿ ನಾಯಕಿ

ಚಿತ್ರದ ಒಂದೊಂದು ಸ್ಟಿಲ್ಸ್ ನೀಲಿ ಚಂದ್ರನನ್ನು ನೆನಪಿಸುವಂತಿವೆ. ಶರ್ಟ್ ಬಿಚ್ಚಿರುವ ನಾಯಕ ನಟ, ಅರೆಬರೆ ಸ್ಥಿತಿಯಲ್ಲಿರುವ ನಟಿ. ಆಕೆಯ ಕಾಲು ಹಿಡಿದು ಎಳೆದುಕೊಂಡು ಹೋಗುತ್ತಾ ತುಂಟ ನಗೆ ಬೀರುತ್ತಿರುವುದನ್ನು ನೋಡಿ.

ಬ್ಲೂ ಮೂನ್ ಧ್ಯಾನದಲ್ಲಿ ಇಬ್ಬರೂ ತಲ್ಲೀನ

ಈ ದೃಶ್ಯದಲ್ಲಂತೂ ಇಬ್ಬರೂ ತಲ್ಲೀನರಾಗಿ ಹೋಗಿದ್ದಾರೆ. ಈ ಚಿತ್ರದಲ್ಲಿ ಇರುವುದು ಕೇವಲ ಇದೇ ರೀತಿಯ ಸೀನ್ ಗಳೇ ಎಂಬ ಸಣ್ಣ ಅನುಮಾನವೂ ಸುಳಿಯುತ್ತದೆ. ಮುಂದಿವೆ ನೋಡಿ ಇನ್ನೂ ವಿಭಿನ್ನ ಚಿತ್ರಗಳು.

ಬೆಚ್ಚಗೆ ಅಪ್ಪುಗೆಯಲ್ಲಿ ಕಣ್ಣು ಮುಚ್ಚಿದ ನಾಯಕಿ

ನಾಯಕ ನಟನ ಬೆಚ್ಚನೆ ಅಪ್ಪುಗೆಯಲ್ಲಿ ನಾಯಕಿ ಹಾಗೆಯೇ ಕಣ್ಣುಮುಚ್ಚಿ ಒಂಥರಾ ಎಕ್ಸ್ ಪ್ರೆಶನ್ ಕೊಟ್ಟಿದ್ದಾರೆ. ಇದನ್ನು ನೋಡುತ್ತಾ ನೋಡುತ್ತಾ ಪ್ರೇಕ್ಷಕರು ಏನಾಗುತ್ತಾರೋ ಏನೋ ಎಂಬ ಚಿಂತೆ ಕಾಡುತ್ತಿದೆ.

ಸ್ವಲ್ಪ ರಿಲ್ಯಾಕ್ಸ್ ಆದ ಪ್ರೇಮಿಗಳು

ಇಷ್ಟೆಲ್ಲಾ ರೊಮ್ಯಾನ್ಸ್ ಆದ ಮೇಲೆ ಪ್ರೇಮಿಗಳು ಒಂಚೂರು ಕಷ್ಟ ಸುಖ ಹೇಳಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಹರಿಪ್ರಸಾದ್ ಅವರ ಸಂಗೀತ, ಪ್ರಸನ್ನ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಶಿ ಆರ್ ದೇವ್ ಅವರ ಸಂಭಾಷಣೆ ಚಿತ್ರಕ್ಕಿದೆ.

ಆತ್ಮದ ಕುರಿತಾದ ಚಿತ್ರ ಇದಂತೆ

ಈ ಚಿತ್ರದ ನಿರ್ಮಾಪಕರು ಹರಿಪ್ರಸಾದ್ ಮಾವಳ್ಳಿ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ ನಿರ್ದೇಶಕ ಬಿ.ಎಸ್.ಸಂಜಯ್. ಆತ್ಮದ ಕುರಿತು ಹೆಣೆದ ಕಥೆ ಇದೆ ಎನ್ನುತ್ತಾರೆ ನಿರ್ದೇಶಕರು. ಶೀಘ್ರದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು ಜುಲೈ ತಿಂಗಳಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತಿಸಲಾಗಿದೆ.

English summary
Kannada film 'Blue Moon' romantic scenes. The film directed by BS Sanjay, earlier he directed 'Gun' movie in Kannada. Vishnuvardhan and Monisha Chowdari are in lead roles.
Please Wait while comments are loading...