»   » ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ 'ಬೊಂಬೆಯಾಟ'

ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ 'ಬೊಂಬೆಯಾಟ'

Posted By:
Subscribe to Filmibeat Kannada

'ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳ ಮುಕುಟಮಣಿ' ಎಂದೇ ಕರೆಯಲ್ಪಡುವ, ಪ್ರತಿಷ್ಟಿತ 38ನೇ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು, ಕನ್ನಡದ 'ಬೊಂಬೆಯಾಟ' ಸಿನಿಮಾ ಆಯ್ಕೆಯಾಗಿದೆ.

38ನೇ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವ ಏಕೈಕ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ 'ಬೊಂಬೆಯಾಟ' ಪಾತ್ರವಾಗಿದೆ.

kannada-film-bombeyata-participate-moscow-international-film-festival

ಜೂನ್ ತಿಂಗಳ 23 ರಿಂದ 30 ರವರೆಗೆ ಈ ಚಲನಚಿತ್ರೋತ್ಸವ ಮಾಸ್ಕೋದಲ್ಲಿ ನಡೆಯಲಿದ್ದು, 26 ನೇ ತಾರೀಖು 'ಬೊಂಬೆಯಾಟ' ಪ್ರದರ್ಶನಗೊಳ್ಳಲಿದೆ.

ಅದಾಗಲೇ, ಏಳು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನ ಕಂಡು ಮೂರು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ 'ಬೊಂಬೆಯಾಟ', ಇದೀಗ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದೆ. [ಪ್ರಣಯ ರಾಜ ಶ್ರೀನಾಥ್ 'ಸುಳಿ' ಚಿತ್ರಕ್ಕೆ ಸಿಕ್ಕ ಪ್ರಶಸ್ತಿಯ ಗರಿ]

ಅಷ್ಟಕ್ಕೂ, 'ಬೊಂಬೆಯಾಟ' ಧರ್ಮ ಸಹಿಷ್ಣುತೆ ಬಗ್ಗೆ ಸಾಮಾಜಿಕ ಸಂದೇಶ ಸಾರುವ ಸಿನಿಮಾ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಇರುವ ಮತೀಯ ಭಾವನೆ ಹಾಗೂ ದೇವರ ಬಗೆಗಿನ ತಿಳುವಳಿಕೆ ಬಿಂಬಿಸುವ ವಿಭಿನ್ನ ಕಥೆ ರಚಿಸಿ, ನಿರ್ದೇಶನ ಮಾಡಿರುವವರು ಮೋಹನ್ ಕುಮಾರ್.

ಧರ್ಮ ಅಸಹಿಷ್ಣುತೆ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಧರ್ಮ ಸಹಿಷ್ಣುತೆ ಸಾರುವ 'ಬೊಂಬೆಯಾಟ' ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ಹೆಮ್ಮೆಯೇ ಸರಿ.

-
-
-
-
-
-
-
-
English summary
Kannada Film 'Bombeyata' is selected to participate in Moscow International Film Festival, which will be held from June 23rd to June 30th. 'Bombeyata' is directed by Mohan kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada