»   » ಮಲೇಶಿಯಾಗೆ ಹಾರಿದ ಕನ್ನಡದ 'ಬುಲ್ದೋಜರ್'

ಮಲೇಶಿಯಾಗೆ ಹಾರಿದ ಕನ್ನಡದ 'ಬುಲ್ದೋಜರ್'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅತ್ಯಾಪ್ತ ಅಣಜಿ ನಾಗರಾಜ್ ನಿರ್ಮಾಣದ 'ಬುಲ್ಡೋಜರ್' ಚಿತ್ರತಂಡ ಸದ್ಯದಲ್ಲಿಯೇ ಮಲೇಶಿಯಾಗೆ ಹಾರಲಿದೆ. ಆಗಸ್ಟ್ 12 ರಿಂದ ಮಲೇಶಿಯಾದಲ್ಲಿ ಇಪ್ಪತ್ತೈದು ದಿನಗಳ ಕಾಲ 'ಬುಲ್ಡೋಜರ್' ಚಿತ್ರದ ಚಿತ್ರೀಕರಣ ನಡೆಯಲಿದೆ.

ನಾಯಕ ರೂಪೇಶ್, ನಾಯಕಿ ಪ್ರಜ್ವಲ್ ಪೂವಯ್ಯ ಹಾಗೂ ಅನೇಕ ಹಾಸ್ಯ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

Kannada Film 'Bulldozer' to shoot in Malaysia

'ಬುಲ್ಡೋಜರ್' ಚಿತ್ರಕ್ಕೆ ಪ್ರಜ್ವಲ್ ಶೆಟ್ಟಿ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೂಪೇಶ್ ಈಗಾಗಲೇ 'ಸಾರಿ ಕಣೆ', 'ಧೂಳಿಪಟ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಎ.ಟಿ.ರವೀಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಣಜಿ ನಾಗರಾಜ್ ಅವರ ಛಾಯಾಗ್ರಹಣವಿದೆ. ಶಿವರಾಜ್ ಮೇಹು ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನವಿದೆ.

English summary
Kannada Film 'Bulldozer' team is all set to fly to Malaysia for Shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada