For Quick Alerts
  ALLOW NOTIFICATIONS  
  For Daily Alerts

  ಬಸವ ಜಯಂತಿ ಮತ್ತು ರಂಜಾನ್ ಹಬ್ಬಕ್ಕೆ ಸಿನಿ ಗಣ್ಯರ ಶುಭಾಶಯ

  |

  ಇಂದು ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ. ದೇಶದಾದ್ಯಂತ ಮುಸ್ಲಿಮರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಬಾಂಧವರಿಗೆ ಅನೇಕ ಗಣ್ಯರು ಸಹ ಶುಭಾಶಯ ಕೋರುತ್ತಿದ್ದಾರೆ. ರಂಜಾನ್ ಜೊತೆಗೆ ಇಂದು (ಮೇ 14) ಬಸವ ಜಯಂತಿ ಕೂಡ ಆಚರಣೆ ಮಾಡಲಾಗುತ್ತಿದೆ.

  ಸ್ಯಾಂಡಲ್ ವುಡ್ ಅನೇಕ ಗಣ್ಯರು ಮುಸ್ಲಿಂ ಬಾಂಧವರಿಗೆ ವಿಶ್ ಮಾಡುತ್ತಿದ್ದಾರೆ. ಜೊತೆಗೆ ಬಸವಜಯಂತಿಯ ಶುಭಾಶಯ ತಿಳಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್ ಮತ್ತು ಧನಂಜಯ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಜೊತೆಗೆ ಸುರಕ್ಷಿತರಾಗಿರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  ದರ್ಶನ್ ತೋಟದ ಮನೆ ಸೇರಿದ ಸುಂದರ ಗಿಣಿದರ್ಶನ್ ತೋಟದ ಮನೆ ಸೇರಿದ ಸುಂದರ ಗಿಣಿ

  'ದಯವಿಲ್ಲದ ಧರ್ಮವಿಲ್ಲ, ಕಾಯಕವೇ ಕೈಲಾಸ. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ಧಿಕ ಶುಭಾಷಯಗಳು. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿರಿ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

  ಇನ್ನು ನಟ ಧನಂಜಯ್ ಟ್ವೀಟ್ ಮಾಡಿ 'ಹೊನ್ನಿನೊಳಗೊಂದೊರೆಯ, ವಸ್ತ್ರದೊಳಗೊಂದೆಳೆಯ ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದೆಡೆ ನಿಮ್ಮಾಣೆ. ನಿಮ್ಮ ಪುರಾತರಾಣೆ. ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ. ಬಸವ ಜಯಂತಿಯ ಶುಭಾಶಯಗಳು' ಎಂದು ಹೇಳಿದ್ದಾರೆ. ಜೊತೆಗೆ ಎಲ್ಲರಿಗೂ ಈದ್ ಶುಭಾಶಯಗಳು ಎಂದಿದ್ದಾರೆ.

  ರಶ್ಮಿಕಾ ಮಂದಣ್ಣ ಕೈ ಹಿಡಿಯಲಿರುವ ತಮಿಳು ಹುಡುಗ ಯಾರು..? | Filmibeat Kannada

  'ನಾಡಿನ ಮುಸಲ್ಮಾನ ಸಹೋದರ ಸಹೋದರಿಯರಿಗೆ ಈದ್ ಮುಬಾರಕ್. inshalla. God bless all' ಎಂದು ಹೇಳಿದ್ದಾರೆ. ಸಾಕಷ್ಟು ಮಂದಿ ಶುಭಾಶಯ ಕೋರುತ್ತಿದ್ದಾರೆ. ಕೊರೊನಾ ಹಾವಳಿಯ ನಡುವೆಯೂ ಸುರಕ್ಷಿತರಾಗಿ ಹಬ್ಬ ಆಚರಿಸಿ ಎಂದು ಮನವಿ ಮಾಡುತ್ತಿದ್ದಾರೆ.

  English summary
  Kannada Film celebrities wishes to Basava Jayanti and Ramadan Mubarak.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X