'ಚಡ್ಡಿದೋಸ್ತ್'ಗಳು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ

By Rajendra

ಹಾಸ್ಯ ಚಿತ್ರಗಳ ನಿರೀಕ್ಷೆಯಲ್ಲಿರುವ ಪ್ರೇಕ್ಷಕರಿಗೆ ಈ ವಾರ ಭರ್ಜರಿ ಕಾಮಿಡಿ ಸಿಗಲಿದೆ. ಸಾಧುಕೋಕಿಲಾ ಹಾಗೂ ರಂಗಾಯಣ ರಘು ನಕ್ಕು ನಗಿಸಲು 'ಚಡ್ಡಿದೋಸ್ತ್' ಗಳ ರೂಪದಲ್ಲಿ ಬರುತ್ತಿದ್ದಾರೆ. 'ಚಡ್ಡಿದೋಸ್ತ್' ಚಿತ್ರ ಈ ವಾರ ರಾಜ್ಯದಾದ್ಯಂತೆ ತೆರೆಕಾಣುತ್ತಿದೆ.

ಸರಿಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಡ್ಡಿದೋಸ್ತ್ ಗಳು ಬಿಡುಗಡೆಯಾಗುತ್ತಿದೆ. 'ವಿಕ್ಟರಿ' ಚಿತ್ರದ ಯಶಸ್ಸಿನ ಬಳಿಕ ಎಸ್ಆರ್ ಎಸ್ ಮೀಡಿಯಾ ವಿಷನ್ ಸಂಸ್ಥೆಯ ಆನಂದ್ ಛಾಬ್ರಿಯಾ ನಿರ್ಮಿಸಿರುವ ಮತ್ತೊಂದು ಹಾಸ್ಯ ಪ್ರಧಾನ ಚಿತ್ರವಿದು.

'ಚಡ್ಡಿದೋಸ್ತ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇಬ್ಬರು ಮಧ್ಯ (ಮದ್ಯ)ವಯಸ್ಕ ಚಡ್ಡಿದೋಸ್ತ್ ಗಳು ಸುದೀರ್ಘ ಸಮಯದ ಬಳಿಕ ಭೇಟಿಯಾಗುತ್ತಾರೆ. ಆಗ ಏನೆಲ್ಲಾ ತಮಾಷೆ ಪ್ರಸಂಗಗಳು ನಡೆಯುತ್ತವೆ ಎಂಬುದೇ ಚಿತ್ರದ ಟೂ ಲೈನ್ ಸ್ಟೋರಿ.

'ನಾಯಕ' ಹಾಗೂ 'ರೋಮಿಯೋ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿಸಿ ಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು. ಆಕ್ಷನ್, ರೊಮ್ಯಾನ್ಸ್ ಬಳಿಕ ಅವರು ಈಗ ಕಾಮಿಡಿಗೆ ಹೊರಳಿದ್ದಾರೆ. ಅಶ್ವಿನಿ ಗೌಡ, ರೂಪಶ್ರೀ, ಅವಿನಾಶ್, ಮಿತ್ರಾ, ಅಮಿತ್, ಅಶೋಕ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳಲ್ಲಿ "ಅವಳು ನಕ್ಕು ಬಿಟ್ರೆ ಹಾಗೂ ರೋಡಲ್ಲಿ ಟಾರು..." ಹಾಡುಗಳು ಜನಪ್ರಿಯವಾಗಿವೆ. ಜಿ ನಟರಾಜ್ ಅವರ ಸಂಭಾಷಣೆ, ಕುಮಾರನ್ ಅವರ ಛಾಯಾಗ್ರಹಣ, ಶರವಣನ್ ಅವರ ಸಂಕಲನ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Two Kannada comedy stars Rangayana Raghu and Sadhu Kokila lead 'Chaddi Dosth' is slated for release on 29th November. The regional censor board has been given U/A certificate for the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X