ಕರ್ನಾಟಕ ಬಂದ್: ಸಿನಿಮಾ ಪ್ರದರ್ಶನವಿಲ್ಲ, ಶೂಟಿಂಗ್ ಸ್ಥಗಿತ
ಜನವರಿ 25 ರಂದು ಕರೆ ನೀಡಲಾಗಿರುವ 'ಕರ್ನಾಟಕ ಬಂದ್'ಗೆ ಸಂಬಂಧಪಟ್ಟಂತೆ ನಾಳೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದ್ದು, ಚಿತ್ರೋಧ್ಯಮ ಬಂದ್ ಮಾಡುತ್ತಿದೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಗೆಯವರೆಗೂ ಚಿತ್ರರಂಗದ ಯಾವುದೇ ಚಟುವಟಿಕೆಗಳು, ಸಿನಿಮಾ ಶೂಟಿಂಗ್ ಹಾಗೂ ಸಿನಿಮಾ ಪ್ರದರ್ಶನವಿರುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟನೆ ನೀಡಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ್ ಮತ್ತು ಉಪಾಧ್ಯಕ್ಷ ಉಮೇಶ್ ಬಣಕಾರ್ ಈಗಾಗಲೇ ಮಾಧ್ಯಮಗಳಿಗೆ ಈ ಬಗ್ಗೆ ಖಚಿತಪಡಿಸಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಈ ಬಂದ್ ಮಾಡುತ್ತಿದ್ದು, ರೈತರ ಪರವಾಗಿ ಕನ್ನಡ ಸಿನಿಮಾರಂಗ ನಿಂತಿದೆ. ಬೆಳಿಗ್ಗೆ ಮೆಜೆಸ್ಟಿಕ್ ನಲ್ಲಿ ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ರ್ಯಾಲಿಯಲ್ಲಿ ಸಿನಿಮಾ ಕಲಾವಿದರು, ತಂತ್ರಜ್ಞರು ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ಇನ್ನು 'ಬುಕ್ ಮೈ ಶೋ' ಸೇರಿದಂತೆ ಆನ್ ಲೈನ್ ನಲ್ಲಿ ನಾಳೆಗೆ ಟಿಕೆಟ್ ಬುಕ್ಕಿಂಗ್ ಓಪನ್ ಇದೆ. ಬೆಳಿಗ್ಗೆಯಿಂದ ಸಂಜೆಯ ತನಕ ಪ್ರದರ್ಶನವಿರುವುದಿಲ್ಲ ಎಂದು ವಾಣಿಜ್ಯ ಮಂಡಳಿ ತಿಳಿಸಿದೆ. ಹೀಗಾಗಿ, ಟಿಕೆಟ್ ಬುಕ್ ಮಾಡುವುದಕ್ಕು ಮುಂಚೆ ಸರಿಯಾಗಿ ಯೋಚನೆ ಮಾಡಿ ಬುಕ್ ಮಾಡಿ.


Click it and Unblock the Notifications











