ಇದು ಪ್ರೇಮ್ ಕಹಾನಿ ಅಲ್ಲ ನಾಕು ಕಂಬನಿಗಳ ಕಹಾನಿ

By Rajendra

ಹಾಗೆಂದು ತಾಜ್ ಮಹಲ್ ಚಂದ್ರು ಷರಾ ಬರೆದಿದ್ದಾರೆ. ಈ ವಾರ ಅವರ ಮತ್ತೊಂದು ಪ್ರೇಮ್ ಕಹಾನಿ ಚಿತ್ರ ಬಿಡುಗಡೆಯಾಗುತ್ತಿದೆ. ಆದರಿದು "ನಾಕು ಕಂಬನಿಗಳ ಕಹಾನಿ" ಎಂದು ಅವರೇ ಸಬ್ ಟೈಟಲ್ ಇಡುವ ಮೂಲಕ ಕಥೆ ಇದೊಂದು ಸೆಂಟಿಮೆಂಟ್ ಚಿತ್ರ ಎಂಬ ಸುಳಿವು ನೀಡಿದ್ದಾರೆ.

ತಮ್ಮ ಚಿತ್ರದ ಬಗ್ಗೆ ಇತ್ತೀಚೆಗೆ ಅವರೊಂದು ಜಾಹೀರಾತು ನೀಡಿದ್ದಾರೆ. "ನಿಮ್ಮ ಹಳೆ ಲವ್ ಗಳು, ನಿಮ್ಮ ಹಳೇ ಡವ್ ಗಳು....ಫೆಬ್ರವರಿ 8ನೇ ತಾರೀಖು ಬಿಡುಗಡೆ ಆಗ್ತಾಯಿರೋ ನನ್ನ ಸಿನಿಮಾದಲ್ಲಿ ನೆನಪಾದ್ರೆ ಅದಕ್ಕೆ ನಾನು ಜವಾಬ್ದಾರನಲ್ಲ". ಇಂತಿ ನಿಮ್ಮ ಪ್ರೀತಿಯ ಆರ್ ಚಂದ್ರು ಎಂದು ಸಹಿ ಹಾಕಿದ್ದಾರೆ.

ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ಹರಿ ಅವರ ಸಂಗೀತ ಹಾಗೂ ಗುರುಕಿರಣ್ ಹಿನ್ನೆಲೆ ಸಂಗೀತವಿದೆ. ತಾಜ್ ಮಹಲ್', 'ಪ್ರೇಮ್ ಕಹಾನಿ', 'ಮೈಲಾರಿ', 'ಕೋಕೋ' ಚಿತ್ರಗಳ ನಂತರ ಆರ್.ಚಂದ್ರು 'ಚಾರ್ ಮಿನಾರ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಆರ್.ಚಂದ್ರು ಈ ಚಿತ್ರದ ನಿರ್ಮಾಪಕರು ಹೌದು.

ಚಿತ್ರದ ನಾಯಕರಾಗಿ ಲವ್ಲಿಸ್ಟಾರ್ ಪ್ರೇಮ್ ಅಭಿನಯಿಸಿದ್ದಾರೆ. ಮೇಘನಾ ಗಾಂವ್ಕರ್, ಕುಮುದ ನಾಯಕಿಯರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ವಿದ್ಯಾಮೂರ್ತಿ, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ. ಇಮ್ರಾನ್, ಹರ್ಷ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Kannada director R Chandru's one more love subject Charminar slated for release on 8th February. The film featuring Prem Kumar and Meghana Gaonkar in the lead roles. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X