'ವಠಾರ' ಧಾರಾವಾಹಿ ಖ್ಯಾತಿಯ ಹಾಸ್ಯನಟ ಮಲ್ಲೇಶ್ ಇನ್ನಿಲ್ಲ

By Pavithra

Recommended Video

ವಿಧಿವಶವಾದ ಹಾಸ್ಯನಟ ಮಲ್ಲೇಶ್..!! | Filmibeat Kannada

'ವಠಾರ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ವಠಾರ ಮಲ್ಲೇಶ್ ಇಂದು ಬೆಳ್ಳಿಗ್ಗೆ ವಿಧಿವಶವಾಗಿದ್ದಾರೆ. ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದಿದ್ದ ನಟ ಮಲ್ಲೇಶ್ ಅನಂತರ ಸಾಕಷ್ಟು ಚಿತ್ರಗಳಲ್ಲಿಯೂ ಹಾಸ್ಯ ನಟನಾಗಿ ಅಭಿನಯ ಮಾಡಿದ್ದರು.

ಚಿಕ್ಕ ವಯಸ್ಸಿನಿಂದಲೇ ಮರುವಿನ ಕಾಯಿಲೆಯನ್ನು ಹೊಂದಿದ್ದ ಮಲ್ಲೇಶ್ ಅವರನ್ನು ತನ್ನತ್ತ ಕರೆದುಕೊಳ್ಳುವುದನ್ನು ಮಾತ್ರ ವಿಧಿ ಮರೆಯಲಿಲ್ಲ. ಕನ್ನಡ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಪರಿಚಯವಿದ್ದ ಮಲ್ಲೇಶ್ ನಡೆದು ಬಂದ ಹಾದಿ ತುಂಬ ಕಠಿಣವಾದದ್ದು.

42 ವರ್ಷ ವಯಸ್ಸಾಗಿದ್ದ ಮಲ್ಲೇಶ್ ಸುಮಾರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ಮಲ್ಲೇಶ್ ಕಳೆದ ಇಪ್ಪತ್ತು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮುಂದೆ ಓದಿ

ವಿಧಿವಶವಾದ ಹಾಸ್ಯನಟ ಮಲ್ಲೇಶ್

ವಿಧಿವಶವಾದ ಹಾಸ್ಯನಟ ಮಲ್ಲೇಶ್

ಕನ್ನಡ ಸಿನಿಮಾರಂಗದಲ್ಲಿ ವಠಾರ ಮಲ್ಲೇಶ್ ಅಂತಾನೆ ಪ್ರಖ್ಯಾತಿ ಪಡೆದುಕೊಂಡಿದ್ದ ನಟ ಮಲ್ಲೇಶ್ ಇಂದು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸಾಕಷ್ಟು ವರ್ಷಗಳಿಂದ ಕಿಡ್ನಿ ಫೈಲುರ್ ಹಾಗೂ ಬ್ರೇನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಮಲ್ಲೇಶ್ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬನ್ನೇರುಘಟ್ಟದ ನಿವಾಸಿ ಮಲ್ಲೇಶ್

ಬನ್ನೇರುಘಟ್ಟದ ನಿವಾಸಿ ಮಲ್ಲೇಶ್

ಮಲ್ಲೇಶ್‌ ಬನ್ನೇರುಘಟ್ಟದ ಜಂಗಲಪಾಳ್ಯದವರು. ಕೃಷಿಕ ಕುಟುಂಬದ ಮಲ್ಲೇಶ್‌ ಬನ್ನೇರುಘಟ್ಟದಲ್ಲಿ ಟೆಲಿಫೋನ್‌ ಬೂತ್‌ ನಡೆಸುತ್ತಿದ್ದರು. ನಾಟಕ ಮತ್ತು ಸಿನಿಮಾಗಳ ಸಂಭಾಷಣೆಗಳನ್ನು ಅನುಕರಿಸಿ ಹೇಳುವ ಹವ್ಯಾಸ ರೂಢಿಸಿಕೊಂಡಿದ್ದರು. ಒಮ್ಮೆ ಅವರ ಟೆಲಿಫೋನ್ ಬೂತ್‌ಗೆ ಬಂದಿದ್ದ ‘ವಠಾರ' ಧಾರಾವಾಹಿ ಮ್ಯಾನೇಜರ್‌ ಮಂಜುನಾಥ್, ಮಲ್ಲೇಶ್‌ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡಿದ್ದರು ಅಲ್ಲಿಂದ ಮಲ್ಲೇಶ್ ವಠಾರ ಮಲ್ಲೇಶ್ ಆದರು.

250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯ

250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯ

ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮಲ್ಲೇಶ್ 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯ ಮಾಡಿದ್ದಾರೆ. 'ದಾನಶೂರ ವೀರ ಕರ್ಣ' ನಾಟಕದಲ್ಲಿ ಏಳು ಪಾತ್ರಗಳಲ್ಲಿ ಮಲ್ಲೇಶ್ ಅವರೊಬ್ಬರೇ ಅಭಿನಯಿಸಿದ್ದರು. ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಮಲ್ಲೇಶ್ ಪಾರ್ವತಿ ಪರಮೇಶ್ವರ', ‘ಪ್ರಿಯದರ್ಶಿನಿ', ‘ಪಾಂಡುರಂಗ ವಿಠಲ', ‘ಅಮೃತವರ್ಷಿಣಿ' ಸೇರಿದಂತೆ ಮಲ್ಲೇಶ್‌ ಸುಮಾರು 60ಕ್ಕೂ ಅಧಿಕ ಧಾರಾವಾಹಿಗಳಿಗೆ ಬಣ್ಣಹಚ್ಚಿದ್ದಾರೆ.

157 ಚಿತ್ರಗಳಲ್ಲಿ ಅಭಿನಯ

157 ಚಿತ್ರಗಳಲ್ಲಿ ಅಭಿನಯ

ನಟ ಮೋಹನ್‌ ಜುನೇಜಾ ಅವರಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮಲ್ಲೇಶ್ ‘ಸುಂಟರಗಾಳಿ', ‘ದತ್ತ', ‘ಅಭಯ್', ‘ಅಜಯ್', ‘ಚಾರ್‌ಮಿನಾರ್', ‘ಚಡ್ಡಿದೋಸ್ತ್' ಮುಂತಾದ ಸುಮಾರು 157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯ ಮಾಡಿದ್ದಾರೆ.

ನಿಜ ಜೀವನದಲ್ಲಿಯೂ ಮುಗ್ಧ ಮಲ್ಲೇಶ್

ನಿಜ ಜೀವನದಲ್ಲಿಯೂ ಮುಗ್ಧ ಮಲ್ಲೇಶ್

ತೆರೆ ಮೇಲೆ ಹೆಚ್ಚು ಮುಗ್ಧತೆ ಇರುವ ಪಾತ್ರಗಳನ್ನು ನಿರ್ವಹಿಸಿದ ಮಲ್ಲೇಶ್ ನಿಜ ಜೀವನದಲ್ಲಿಯೂ ಮುಗ್ಧರು. ಹಾಸ್ಯ ಕಲಾವಿದನಿಗೆ ಮದುವೆ ಆಗಿ ಮೂರು ಜನ ಮಕ್ಕಳಿದ್ದರು. ಬನ್ನೇರುಘಟ್ಟದ ಜಂಗಲ್ ಪಾಳ್ಯದಲ್ಲಿ ಮಲ್ಲೇಶ್ ಅವರ ಅಂತಿಮ ವಿಧಿ ವಿಧಾನದ ಕಾರ್ಯಗಳಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದು ಅಪ್ರತಿಮ ಕಲಾವಿದನ ನಿಧನಕ್ಕೆ ಕನ್ನಡ ಸಿನಿಮಾರಂಗ ಕಂಬನಿ ಮಿಡಿದಿದೆ.

More from Filmibeat

English summary
Kannada film comedian Mallesh passes away. Mallesh suffered from kidney failure and brain stroke. Mallesh take his last breath at the banglore private hospital early this morning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X