ಕಾನ್ ಚಿತ್ರೋತ್ಸವದಲ್ಲಿ ಕನ್ನಡದ 'ಡೇವಿಡ್' ಸಿನಿಮಾ
ಕಾನ್ ಚಿತ್ರೋತ್ಸವ ಜಗತ್ತಿನ ಪ್ರಸಿದ್ಧ ಸಿನಿಮೋತ್ಸವದಲ್ಲಿ ಪ್ರಮುಖವಾದದ್ದು. ಪ್ರಾನ್ಸ್ ನಲ್ಲಿ ಪ್ರತೀ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿಮಾಸಕ್ತರು ಭಾಗಿಯಾಗುತ್ತಾರೆ. ಈಗಗಾಲೆ ಕಾನ್ ಫಿಲ್ಮ್ ಫೆಸ್ಟಿವಲ್ ಪ್ರಾರಂಭವಾಗಿದ್ದು ಮೇ 14ರಿಂದ ಮೇ 25ರ ವರೆಗೆ ನಡೆಯಲಿದೆ.
ಪ್ರತಿಯೊಬ್ಬ ಸಿನಿಮಾ ನಿರ್ದೇಶಕನಿಗೂ ತನ್ನ ಸಿನಿಮಾ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಬೇಕು ಎನ್ನುವ ಕನಸು ಕಂಡಿರುತ್ತಾರೆ. ಆ ಕನಸೀಗ ಕನ್ನಡದ 'ಡೇವಿಡ್' ಸಿನಿಮಾ ನಿರ್ದೇಶಕರ ಪಾಲಿಗೆ ನನಸಾಗಿದೆ. 'ಡೇವಿಡ್' ಕನ್ನಡದ ಸಿನಿಮಾ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಈಗ ಕಾನ್ ಚಿತ್ರೋತ್ಸವದ ಪರದೆಮೇಲೆ ರಾರಾಜಿಸಲು ಸಜ್ಜಾಗಿದೆ.
ಅಂದ್ಹಾಗೆ 'ಡೇವಿಟ್' ಭಾರ್ಗವ್ ಯೋಗಂಭರ್ ನಿರ್ದೇಶನದ ಸಿನಿಮಾ. ಕಷ್ಟಪಟ್ಟು ಇಷ್ಟಪಟ್ಟು ಪ್ರೀತಿಯಿಂದ ಮಾಡಿದ 'ಡೇವಿಡ್' ಸಿನಿಮಾ ಈಗ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಆಗುತ್ತಿರುವುದು ಇಡೀ ಚಿತ್ರತಂಡದ ಸಂತಸ ಹೇಳತೀರದಾಗಿದೆ. ಈ ಸಂತಸವನ್ನು ನಿರ್ದೇಶಕ ಭಾರ್ಗವ್ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.

"ಇದು ಕೇವಲ ಕನಸಲ್ಲ. ಕಲ್ಪನೆಗೂ ಮೀರಿದ್ದು, ಬೆಂಗಳೂರಿನಿಂದ ಕಾನ್ ಚಿತ್ರೋತ್ಸವಕ್ಕೆ ಎಂಟ್ರಿಯಾಗಿದ್ದೀವಿ. ಸಿನಿಮಾ ಪ್ರಪಂಚದಲ್ಲಿ ಅತೀ ದೊಡ್ಡ ಚಿತ್ರೋತ್ಸವವಿದು. ಇಲ್ಲಿ ಸಿನಿಮಾ ಪ್ರದರ್ಶನ ವಾಗಬೇಕು ಎನ್ನುವುದು ದೊಡ್ಡ ಕನಸಾಗುತ್ತು. ಆದ್ರೀಗ ಡೇವಿಡ್ ಸಿನಿಮಾ ಮೂಲಕ ಕನಸು ನನಸಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಭಾರ್ಗವ್ ನಿರ್ದಶನದ ಚೊಚ್ಚಲ ಚಿತ್ರವೆ ಕಾನ್ ಫೆಸ್ಟಿವಲ್ ಗೆ ಎಂಟ್ರಿ ಕೊಟ್ಟಿದೆ. ಚಿತ್ರದಲ್ಲಿ ಶ್ರೇಯಸ್ ಚಿಂಗ, ಅವಿನಾಶ್ ಯಳಂದೂರು, ರಾಕೇಶ್ ಅಡಿಗ, ಕಾವ್ಯಾ ಶಾ, ರಮ್ಯಾ ರಮೇಶ್ ಸೇರಿದಂತೆ ಅನೇಕರು ಬಣ್ಣ ಹಚಿಚ್ದಿದ್ದಾರೆ.
ಕಾನ್ ಸಿನಿಮೋತ್ಸವದಲ್ಲಿ ಸಿನಿಮಾ ಪ್ರದರ್ಶನದ ಜೊತೆಗೆ ನಟಿಮಣಿಯರ ಕ್ಯಾಟ್ ವಾಕ್ ಕೂಡ ಅಷ್ಟೆ ಆಕರ್ಷಕವಾಗಿರುತ್ತೆ. ಗಜತ್ತಿನ ಬೇರೆ ಬೇರೆ ದೇಶದ ಟಾಪ್ ನಟಿಮಣಿಯರು ರೆಡ್ ಕಾರ್ಪೆಟ್ ಮೇಲೆ ಬೆಕ್ಕಿನ ನಡಿಗೆ ಹಾಕಿ ಗಮನ ಸೆಳೆಯುತ್ತಾರೆ. ಬಾಲಿವುಡ್ ನಿಂದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಸೋನಂ ಕಪೂರ್ ಭಾಗಿಯಾಗಿದ್ದಾರೆ.


Click it and Unblock the Notifications











