ಕೊಲೆ ಪ್ರಕರಣದಲ್ಲಿ 20 ವರ್ಷಗಳ ಬಳಿಕ ಸಿಸಿಬಿ ಬಲೆಗೆ ಬಿದ್ದ ಕನ್ನಡ ಚಿತ್ರ ನಿರ್ದೇಶಕ

ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಪರಾಧಿಗಳು ತಪ್ಪಿಸಿಕೊಂಡು ತಲೆ ಮರೆಸಿಕೊಳ್ಳುವ ದೃಶ್ಯಗಳನ್ನು ನೋಡಿರುತ್ತೇವೆ. ನಿಜ ಜೀವನದಲ್ಲೂ ಸಾಕಷ್ಟು ಪ್ರಕರಣಗಳ ಆರೋಪಿಗಳು ತಪ್ಪಿಸಿಕೊಂಡಿರುವ ಉದಾಹರಣಗಳಿವೆ.

ಬರೋಬ್ಬರಿ 20 ವರ್ಷಗಳ ಬಳಿಕ ಕೊಲೆ ಆರೋಪಿಯನ್ನು ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ಗಜೇಂದ್ರ ಕೆಲ ವರ್ಷಗಳ ಹಿಂದೆ ಒಂದೆರಡು ಸಿನಿಮಾ ನಿರ್ದೇಶ ಮಾಡಿದ್ದ. ಆದರೆ 2004ರಲ್ಲಿ ವಿಲ್ಸನ್ ಗಾರ್ಡನ್ ರೌಡಿ ಶೀಟರ್ ಕೊತ್ತರವಿ ಎಂಬಾತನ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಚಂದ್ರ್ಪ, ಅಲ್ಯೂಮಿನಿಯಂ ಬಾಬು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ಗಜೇಂದ್ರ ಶಿಕ್ಷೆ ಅನುಭವಿಸಿದ್ದ

Kannada film Director Gajendra Arrested In Murder Case

ಬಳಿಕ ಜಾಮೀನು ಪಡೆದು ಹೊರಬಂದಿದ್ದ ಗಜೇಂದ್ರ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಸಿಕೊಂಡಿದ್ದ ಎಂದು ವರದಿಯಾಗಿದೆ. ಬರೋಬ್ಬರಿ 20 ವರ್ಷಗಳ ಬಳಿಕ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. 'ಪುಟಾಣಿ ಪವರ್' ಹಾಗೂ 'ರುದ್ರ' ಎನ್ನುವ 2 ಸಿನಿಮಾಗಳನ್ನು ಗಜೇಂದ್ರ ನಿರ್ದೇಶನ ಮಾಡಿದ್ದ.

ಅರಸಯ್ಯನ ಶಿಷ್ಯನಾಗಿದ್ದ ಗಜೇಂದ್ರ ಅಲಿಯಾಸ್​ ಗಜ ತಮಿಳಿನಲ್ಲಿ ಕೂಡ ಸಿನಿಮಾ ನಿರ್ದೇಶನ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದನು. ಜಾಮೀನು ಪಡೆದ ಬಳಿಕ ಕಾನೂನು ನಿಯಮಗಳನ್ನು ಪಾಲಿಸಬೇಕು. ಆದರೆ ಏಕಾಏಕಿ ಗಜೇಂದ್ರ ಕಾಣಿಯಾಗಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

More from Filmibeat

English summary
CCB arrests film Director Gajendra for Alleged Role In Murder after 20 years
Read more about: sandalwood case kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X