ಜುಲೈ 10ಕ್ಕೆ 'ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ. ಶೇಷಾದ್ರಿ

By Suneel

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜನೆಯ ವಿಶೇಷ ಸಂವಾದ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಗೆ ಈ ಬಾರಿ ಖ್ಯಾತ ಚಿತ್ರ ನಿರ್ದೇಶಕ ಪಿ ಶೇಷಾದ್ರಿ ರವರು ಆಗಮಿಸಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಜುಲೈ 10 ರಂದು ಸಂಜೆ 5 ಗಂಟೆಗೆ ಪಿ. ಶೇಷಾದ್ರಿ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರಿನ ಕುಮಾರ ಪಾರ್ಕ್ ರಸ್ತೆಯಲ್ಲಿನ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಜರುಗಲಿದೆ.

Kannada Film Director P.Sheshadri in Belli Hejje interact program

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದ ಪಿ ಶೇಷಾದ್ರಿ ರವರು 1980 ರಲ್ಲಿ ಬಣ್ಣದ ಬದುಕಿಗೆ ಚಿತ್ರಕಲಾವಿದರಾಗಿ ಪಾದಾರ್ಪಣೆ ಮಾಡಿದರು. ನಂತರ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ದುಡಿದಿದ್ದಾರೆ. 90 ರಲ್ಲಿ ದೃಶ್ಯ ಮಾಧ್ಯಮ ಪ್ರವೇಶಿಸಿ 95 ರಲ್ಲಿ ಸ್ವತಂತ್ರ ನಿರ್ದೇಶಕರಾಗುವ ಮೂಲಕ ಹೆಚ್ಚು ಧಾರಾವಾಹಿ-ಚಿತ್ರ ನಿರ್ದೇಶನದಲ್ಲಿಯೇ ತೊಡಗಿಕೊಂಡರು. ಇವರ ನಿರ್ದೇಶನದ ಸಿನಿಮಾಗಳಿಗೆ ಇದುವರೆಗೂ 7 ಕ್ಕೂ ಹೆಚ್ಚು ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿವೆ.

ಜುಲೈ 10 ರಂದು 'ಬೆಳ್ಳಿ ಹೆಜ್ಜೆ' ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಕಲಾವಿದರಾದ ಡಾ.ಜಯಮಾಲಾ, ಪದ್ಮಶ್ರೀ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್.ವಿಶುಕುಮಾರ್, ಕೆಎಫ್‌ಸಿಸಿ ಅಧ್ಯಕ್ಷರಾದ ಶ್ರೀ ಸಾ.ರಾ.ಗೋವಿಂದು ರವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಎಸ್.ವಿ.ರಾಜೇಂದ್ರಸಿಂಗ್ ಬಾಬು ರವರು ವಹಿಸಲಿದ್ದಾರೆ.

More from Filmibeat

English summary
'Belli - Hejje' program organized by Karnataka Chalana Chitra Academy on July 10th at 5 pm in Gandhi Bhavan Mahadev Desai Hall, Kumara Park Road Bengaluru. Kannada Film Director P.Sheshadri will be guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X