For Quick Alerts
  ALLOW NOTIFICATIONS  
  For Daily Alerts

  ಹಸ್ತಿನಾಪುರದ ಯಜಮಾನನನ್ನು ಭೇಟಿ ಮಾಡಿದ ಸಿಂಪಲ್ ಸುನಿ

  By Pavithra
  |
  ದರ್ಶನ್‌ರನ್ನು ಭೇಟಿ ಆದ ಸಿಂಪಲ್ ಸುನಿ..!! | Filmibeat Kannada

  ಕನ್ನಡ‌ ಸಿನಿಮಾರಂಗದಲ್ಲಿ ಹಸ್ತಿನಾಪುರದ ಯಜಮಾನ ಅಂದರೆ ಸದ್ಯ ನೆನಪಾಗುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು, ದರ್ಶನ್ ಕುರುಕ್ಷೇತ್ರ ಹಾಗೂ 'ಯಜಮಾನ' ಚಿತ್ರದಲ್ಲಿ ಅಭಿನಯ ಮಾಡುತ್ತಿರುವುದರಿಂದ ಎರಡು ಚಿತ್ರದ ಪಾತ್ರಗಳ ಹೆಸರನ್ನು ಸೇರಿಸಿ ನಿರ್ದೇಶಕ ಸಿಂಪಲ್ ಸುನಿ ಹೀಗೆಂದು ದರ್ಶನ್ ಅವರನ್ನು ಕರೆದಿದ್ದಾರೆ.

  ಸಿಂಪಲ್ ಸುನಿ ಇತ್ತೀಚೆಗಷ್ಟೆ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಒಬ್ಬ ನಿರ್ದೇಶಕ ಒಬ್ಬ ಸ್ಟಾರ್ ಅನ್ನು ಭೇಟಿ ಮಾಡಿದ್ರೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ ? ಎನ್ನುವ ಆಲೋಚನೆಗಳು ತಲೆಯಲ್ಲಿ ಬರುತ್ತೆ. ಆದರೆ, ಸಿಂಪಲ್ ಸುನಿ ಚಾಲೆಂಜಿಂಗ್ ಸ್ಟಾರ್ ಅನ್ನು ಭೇಟಿ ಮಾಡಿರುವ ವಿಚಾರವೇ ಬೇರೆ.

  ಮೊನ್ನೆ ಟ್ರೆಂಡಿಂಗ್, ಇವತ್ತು ಮಿಲಿಯನ್: ಇದು ದರ್ಶನ್ ಸಿನಿಮಾ ಮೊನ್ನೆ ಟ್ರೆಂಡಿಂಗ್, ಇವತ್ತು ಮಿಲಿಯನ್: ಇದು ದರ್ಶನ್ ಸಿನಿಮಾ

  ಸುನಿ ನಿರ್ದೇಶನದ 'ಬಜಾರ್' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದಲ್ಲಿ ಅಭಿನಯ ಮಾಡಿರುವ ನಾಯಕ ನಟ ಧನ್ವೀರ್ ಚಾಲೆಂಜಿಂಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿ. ಹಾಗಾಗಿ‌ ಇಬ್ಬರು ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.

  ಸದ್ಯ 'ಬಜಾರ್' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಹಾಡುಗಳ‌ ಬಿಡುಗಡೆಗೆ ತಯಾರಿ ನಡೆದಿದೆ. ಸಾಕಷ್ಟು ಹೊಸ ಕಲಾವಿದರಿಗೆ ಸಹಾಯ ಮಾಡುತ್ತಾ ಬಂದಿರುವ ಚಾಲೆಂಜಿಂಗ್ ಸ್ಟಾರ್ ಧನ್ವೀರ್ ಅಭಿನಯದ‌ ಮಾಡಿರುವ 'ಬಜಾರ್' ಚಿತ್ರದ ಆಡಿಯೋ ರಿಲೀಸ್ ಮಾಡಿಕೊಟ್ಟರು ಅನುಮಾನವಿಲ್ಲ.

  English summary
  Kannada film director Simple Suni has met actor Darshan. Simple Suni is currently directing Bazaar kannada movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X