Don't Miss!
- News
Breaking; ಹಾಲಿ ಶಾಸಕನಿಗೆ ಟಿಕೆಟ್ ನೀಡದಂತೆ ಎಚ್ಡಿಕೆಗೆ ಮನವಿ!
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪರ ಊರಿನತ್ತ ಪಯಣ ಬೆಳೆಸಿದ ಕನ್ನಡ ಚಿತ್ರಗಳು
ಇತ್ತೀಚೆಗೆ ಎಲ್ಲಾ ಕಡೆ ಕನ್ನಡ ಚಿತ್ರಗಳದೇ ಅಬ್ಬರ ಆರಂಭವಾದಂತಿದೆ. ಜೊತೆಗೆ ಸಿನಿಮೋತ್ಸವಗಳಲ್ಲಿ ಕೂಡ ಕನ್ನಡದ ಕಲರ್ ಫುಲ್ ಚಿತ್ರಗಳು ಪ್ರದರ್ಶನವಾಗುತ್ತಿವೆ. ಇತ್ತೀಚೆಗಷ್ಟೇ ಅದ್ದೂರಿ ಕನ್ನಡ ಚಲನಚಿತ್ರೊತ್ಸವ ಹಬ್ಬಕ್ಕೆ ದೆಹಲಿಯಲ್ಲಿ ತೆರೆಬಿದ್ದ ಬೆನ್ನಲ್ಲೇ ಇದೀಗ ಚೆನ್ನೈನಲ್ಲಿ ಕಲರ್ ಫುಲ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಚಲನಚಿತ್ರೋತ್ಸವ ನಿರ್ದೇಶನಾಲಯ ಜಂಟಿಯಾಗಿ ಹಮ್ಮಿಕೊಂಡಿರುವ 'ಕನ್ನಡ ಚಲನಚಿತ್ರೋತ್ಸವ ಹಬ್ಬ, ಚೆನ್ನೈನಲ್ಲಿ ಜುಲೈ 28 ರಿಂದ ಆರಂಭವಾಗುತ್ತಿದ್ದು, ಜುಲೈ 31 ಕ್ಕೆ ಅಂತ್ಯಗೊಳ್ಳಲಿದೆ.[ದೆಹಲಿ ಕನ್ನಡ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ]
ಜುಲೈ 28 ರಂದು ಸಂಜೆ 5 ಗಂಟೆಗೆ ಕನ್ನಡ ಸಿನಿಮಾ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಚೆನ್ನೈನ "ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್" ಸಭಾಂಗಣದಲ್ಲಿ ಗ್ರ್ಯಾಂಡ್ ಆಗಿ ನಡೆಯಲಿದೆ. (ವಿಳಾಸ: ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್, 74, ಕಸ್ತೂರಿ ರಂಗ ರಸ್ತೆ, ಆಲುವಾರ್ ಪೇಟ್ ಚೆನ್ನೈ).
ಭಾರತೀಯ ಚಲನಚಿತ್ರ ರಂಗದ ಹಿರಿಯ ಕಲಾವಿದೆ ಪದ್ಮಭೂಷಣ ಡಾ. ಬಿ. ಸರೋಜಾ ದೇವಿ ಉದ್ಘಾಟಿಸಲಿದ್ದು, ಖ್ಯಾತ ಕಲಾವಿದೆ ಸುಹಾಸಿನಿ ಮಣಿರತ್ನಂ ವಿಶೇಷ ಭಾಷಣ ಮಾಡಲಿದ್ದಾರೆ.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]
ಅಂದಹಾಗೆ ಈ ಅದ್ದೂರಿ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡ ಚಿತ್ರಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

'ಹರಿವು'
ನಿರ್ದೇಶಕ ಮನ್ಸೂರೆ (ಮಂಜುನಾಥ ಸೋಮಶೇಖರ ರೆಡ್ಡಿ) ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ರಾಷ್ಟ್ರಪ್ರಶಸ್ತಿ ವಿಜೇತ 'ಹರಿವು' ಚಿತ್ರ ಜುಲೈ 29, ಶುಕ್ರವಾರ, 11 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಈ ಚಿತ್ರದಲ್ಲಿ ನಟ ಸಂಚಾರಿ ವಿಜಯ್, ಶ್ವೇತಾ ದೇಸಾಯಿ, ಮಧುಶ್ರೀ, ಮಾಸ್ಟರ್ ಶೋಭಿ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದರು.

'ಮಾರಿಕೊಂಡವರು'
ನಿರ್ದೇಶಕ ಕೆ.ಶಿವರುದ್ರಯ್ಯ ನಿರ್ದೇಶನದ ಪ್ರಶಸ್ತಿ ವಿಜೇತ 'ಮಾರಿಕೊಂಡವರು' ಶುಕ್ರವಾರದಂದು ಮಧ್ಯಾಹ್ನ 2.30ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್, ನಟ ಸಂಚಾರಿ ವಿಜಯ್, ನಟ ದಿಲೀಪ್ ಮುಂತಾದವರು ಮಿಂಚಿದ್ದರು.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು'
ನವ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದ ಹಿಟ್ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಶುಕ್ರವಾರದಂದು ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ, ನಟಿ ಶ್ರುತಿ ಹರಿಹರನ್, ಅನಂತ್ ನಾಗ್ ಮುಂತಾದವರು ಪ್ರಮುಖ ಪಾತ್ರ ಮಾಡಿದ್ದರು.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

'ರಂಗಿತರಂಗ'
ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಜುಲೈ 30, ಶನಿವಾರ 11 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಟ ನಿರುಪ್ ಭಂಡಾರಿ, ನಟಿಯರಾದ ರಾಧಿಕಾ ಚೇತನ್ ಮತ್ತು ಅವಂತಿಕಾ ಶೆಟ್ಟಿ ಮತ್ತು ಸಾಯಿ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

'ಇಷ್ಟಕಾಮ್ಯ'
ಕನ್ನಡದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದ 'ಇಷ್ಟಕಾಮ್ಯ' ಶನಿವಾರ ಮಧ್ಯಾಹ್ನ 2.30ಕ್ಕೆ ಪ್ರದರ್ಶನಗೊಳ್ಳಲಿದೆ. ನಟ ವಿಜಯ್ ಸೂರ್ಯ, ನಟಿ ಮಯೂರಿ ಮತ್ತು ನಟಿ ಕಾವ್ಯ ಶೆಟ್ಟಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು.[ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ]

'ಕರ್ವ'
ನವನೀತ್ ಶೆಟ್ಟಿ ಹಾಗೂ '6-5=2' ಚಿತ್ರತಂಡದ ಅಪರೂಪದ ಪ್ರಯೋಗ ಹಾರರ್-ಥ್ರಿಲ್ಲರ್ 'ಕರ್ವ' ಶನಿವಾರ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಹೊಸ ಪ್ರತಿಭೆಗಳ ಜೊತೆಗೆ ನಟ ತಿಲಕ್ ಮತ್ತು ಆರ್ ಜೆ ರೋಹಿತ್ ನಟಿಸಿದ್ದ ಈ ಸಿನಿಮಾ ಮೆಚ್ಚುಗೆ ಗಳಿಸಿತ್ತು.['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]

'ಯು-ಟರ್ನ್'
'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿರ್ದೇಶನ ಮಾಡಿರುವ ಥ್ರಿಲ್ಲರ್ ಕಥಾನಕ ಹೊಂದಿದ್ದ 'ಯು-ಟರ್ನ್' ಜುಲೈ 31, ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ನಟ ರೋಜರ್ ನಾರಾಯಣ್, ನಟಿ ಶ್ರದ್ಧಾ ಶ್ರೀನಾಥ್, ನಟಿ ರಾಧಿಕಾ ಚೇತನ್ ಮತ್ತಿತ್ತರರು ಕಾಣಿಸಿಕೊಂಡಿದ್ದ 'ಯು-ಟರ್ನ್' ಸಾಕಷ್ಟು ಮೆಚ್ಚುಗೆ ಗಳಿಸಿತ್ತು.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]

'ಫಸ್ಟ್ Rank ರಾಜು'
ನಿರ್ದೇಶಕ ನರೇಶ್ ಕುಮಾರ್ ಅವರ 'ಫಸ್ಟ್ Rank ರಾಜು' ಭಾನುವಾರ ಮಧ್ಯಾಹ್ನ 2.30 ಕ್ಕೆ ಪ್ರದರ್ಶನವಾಗಲಿದೆ. ಈ ಚಿತ್ರದಲ್ಲಿ ನಟ ಗುರುನಂದನ್, ನಟಿ ಅಪೂರ್ವ ಮುಖ ಭೂಮಿಕೆಯಲ್ಲಿ ಮಿಂಚಿದ್ದರು. ಹೊಸ ನಿರ್ದೇಶಕರು ಮಾಡಿದ ವಿನೂತನ ಪ್ರಯತ್ನಕ್ಕೆ ಕನ್ನಡ ಸಿನಿ ಪ್ರೇಮಿಗಳು ಚಪ್ಪಾಳೆ ತಟ್ಟಿದ್ದರು.

'ಮಿ.ಅಂಡ್.ಮಿಸಸ್ ರಾಮಾಚಾರಿ'
ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿದ್ದ ಬ್ಲಾಕ್ ಬಸ್ಟರ್ 'ಮಿ.ಅಂಡ್.ಮಿಸಸ್ ರಾಮಾಚಾರಿ' ಭಾನುವಾರ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರು.