»   » ಜು.21-24 ವರೆಗೆ ಕೋಲ್ಕತ್ತಾದಲ್ಲಿ 'ಕನ್ನಡ ಚಲನಚಿತ್ರೋತ್ಸವ'

ಜು.21-24 ವರೆಗೆ ಕೋಲ್ಕತ್ತಾದಲ್ಲಿ 'ಕನ್ನಡ ಚಲನಚಿತ್ರೋತ್ಸವ'

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಭಾರತೀಯ ಚಲನಚಿತ್ರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಜುಲೈ 21 ರಿಂದ 24 ರವರೆಗೆ ಕೋಲ್ಕತ್ತಾದಲ್ಲಿ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಚಲನಚಿತ್ರೋತ್ಸವ ಕೋಲ್ಕತ್ತದ ನಂದನ್ ಸಾಂಸ್ಕೃತಿಕ ಕಟ್ಟಡದಲ್ಲಿ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯುವ ಈ ಚಿತ್ರೋತ್ಸವದಲ್ಲಿ ಅನನ್ಯಾ ಕಾಸರವಳ್ಳಿ ನಿರ್ದೇಶನದ 'ಹರಿಕಥಾ ಪ್ರಸಂಗ', ಬಿ ಎಂ ಗಿರಿರಾಜ್ ನಿರ್ದೇಶನದ 'ಅಮರಾವತಿ', ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್', ಪೃಥ್ವಿ ಕೊಣನೂರು ನಿರ್ದೇಶನದ 'ರೈಲ್ವೆ ಚಿಲ್ಡ್ರನ್', ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ', ಡಿ.ಸತ್ಯಪ್ರಕಾಶ್ ನಿರ್ದೇಶನದ 'ರಾಮಾ ರಾಮಾ ರೇ' ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Kannada Film Festival at Kolkata from July 21 to July 24

ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಹಾಗೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನಿಮಾ ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುವುದು ಎಂದು ಹೆಚ್ ಬಿ ದಿನೇಶ್ ಅವರು ತಿಳಿಸಿದ್ದಾರೆ.

English summary
'Kannada Film Festival' will be held in Kolkata at Nandan, cultural complex fromJuly 21 to 24. The four-day Festival will be held under the aegis of KarnatakaChalanachitra Academy, Department of Information and PublicRelations, Government of Karnataka in collaboration with Federationof Film societies of India, according to a release here today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada