»   » ಕುಂದಾ ನಗರಿಯಲ್ಲಿ 9 ದಿನಗಳ ಸಿನಿಮಾ ಹಬ್ಬ

ಕುಂದಾ ನಗರಿಯಲ್ಲಿ 9 ದಿನಗಳ ಸಿನಿಮಾ ಹಬ್ಬ

Posted By:
Subscribe to Filmibeat Kannada

ಕುಂದಾ ನಗರಿ ಬೆಳಗಾವಿಯಲ್ಲಿ ಒಂಭತ್ತು ದಿನಗಳ ಕಾಲ ಸಿನಿಮಾ ಹಬ್ಬಕ್ಕೆ ಸಿದ್ಧತೆ ಭರದಿಂದ ಸಾಗಿದೆ. ವಾರ್ತಾ ಇಲಾಖೆ ವರಿಯಿಂದ ಆಯೋಜನೆಗೊಂಡಿರುವ ಚಿತ್ರೋತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

ಗಡಿ ಭಾಗದ ಜನರಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಜನರಿಗೆ ಅಭಿರುಚಿ ಹೆಚ್ಚಿಸಲು ಕನ್ನಡ ಸಿನಿಮಾ ಹಬ್ಬ ಆಚರಿಸಲಾಗುತ್ತಿದೆ. ವಿಶೇಷವಾಗಿ ಸದಭಿರುಚಿ ಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲಾಗುತ್ತಿದೆ.

ಆರು ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ 9 ದಿನಗಳ ಈ ಸಿನಿಮೋತ್ಸವ ಫೆ.19 ರಿಂದ ಫೆ.27 ರ ತನಕ ನಡೆಯಲಿದೆ. ಬೆಳಗಾವಿಯ ವಿವಿಧ ಚಿತ್ರಮಂದಿರಗಳಲ್ಲಿ ಬೆಳಗ್ಗೆ 8.30 ರಿಂದ ವಿಶೇಷ ಪ್ರದರ್ಶನ ಆರಂಭಗೊಳ್ಳಲಿದೆ. ಪೊಲೀಸ್ ಆಯುಕ್ತ ಎಸ್ ರವಿ ಅವರು ಫೆ.19ರಂದು ಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.

Kannada Film festival from Feb 19 in Belagavi

ಚಿತ್ರ ಪ್ರದರ್ಶನ ದಿನಾಂಕ: ಚಿತ್ರಮಂದಿರದ ಹೆಸರು ಹಾಗೂ ಚಿತ್ರದ ಹೆಸರು ಕೆಳಗಿನಂತಿದೆ

ಫೆ.19: ಸ್ವರೂಪ್ ನರ್ತಕಿ: ಇಂಗಳೆ ಮಾರ್ಗ
ಫೆ.20: ಚಿತ್ರ: ಭಾರತ್ ಸ್ಟೋರ್ಸ್
ಫೆ.21 : ಚಿತ್ರ : ತಲ್ಲಣ
ಫೆ. 22: ಚಿತ್ರ : ಇಂಗಳೆ ಮಾರ್ಗ
ಫೆ. 23: ಚಿತ್ರ : ಕುರ್ಮಾವತಾರ
ಫೆ. 24: ಪ್ರಕಾಶ್ : ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ
ಫೆ. 25: ಪ್ರಕಾಶ್ : ಪ್ರಸಾದ್
ಫೆ. 26: ಪ್ರಕಾಶ್: ಭಾರತ್ ಸ್ಟೋರ್ಸ್
ಫೆ. 27: ಪ್ರಕಾಶ್ : ಕೂರ್ಮಾವತಾರ.

English summary
Preparations are almost complete for the 9-day Kannada Film Festival commencing at Belagavi on Thursday. Cine goers are in for a treat with the Kannada Film Festival which will be held in the city from February 19 to 27 February.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada