twitter
    For Quick Alerts
    ALLOW NOTIFICATIONS  
    For Daily Alerts

    ಪುಸ್ತಕ ಮತ್ತು ಡಿವಿಡಿ ರೂಪದಲ್ಲಿ ಶ್ರೇಷ್ಠ ಚಿತ್ರ ಘಟಶ್ರಾದ್ಧ

    By Rajendra
    |

    A still from Ghatashraddha
    ಜಾಗತಿಕ ಚಿತ್ರರಂಗದ ಗಮನಸೆಳೆದ ಶತಮಾನದ ಶ್ರೇಷ್ಠ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಿರೀಶ್ ಕಾಸರವಳ್ಳಿ ಅವರ 'ಘಟಶ್ರಾದ್ಧ' (1977) ಡಿವಿಡಿ ರೂಪದಲ್ಲಿ ಹೊರಬಂದಿದೆ. ಕನ್ನಡಕ್ಕೆಂದೇ ಮೀಸಲಾದ 'ಟೋಟಲ್ ಕನ್ನಡ' ಮಳಿಕೆ 'ಘಟಶ್ರಾದ್ಧ' ಚಿತ್ರವನ್ನು ಡಿವಿಡಿ ರೂಪದಲ್ಲಿ ಹೊರತಂದಿದ್ದು, ಇದರ ಬಿಡುಗಡೆ ಸಮಾರಂಭ ಆಗಸ್ಟ್ 30, 2012ರ ಸಂಜೆ 6 ಗಂಟೆಗೆ ನಡೆಯಲಿದೆ.

    ಇದರ ಜೊತೆಗೆ 'ಕುಬಿ ಮತ್ತು ಇಯಾಲ' (1990) ಹಾಗೂ 'ಗುಡ್ಡದ ಭೂತ' (ಜನಪ್ರಿಯ ಧಾರಾವಾಹಿ) ಡಿವಿಡಿಗಳೂ ಲೋಕಾರ್ಪಣೆಯಾಗುತ್ತಿವೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಟೋಟಲ್ ಕನ್ನಡ ಸಂಯುಕ್ತ ಆಶ್ರಯದಲ್ಲಿ ಡಿವಿಡಿಗಳನ್ನು ಹೊರತರಲಾಗಿದೆ.

    ಘಟಶ್ರಾದ್ಧ ಕತೆ, ಚಿತ್ರಕತೆ, ಚಿತ್ರ ಲೇಖನ ಇರುವ ಪುಸ್ತಕದ ಬಿಡುಗಡೆ ಕೂಡ ಮಾಡಲಾಗುತ್ತಿದೆ. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಯು.ಆರ್. ಅನಂತಮೂರ್ತಿ ಅವರು ವಹಿಸುತ್ತಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಿ.ಆರ್. ಸಿಂಹ, ಡಾ.ಕೆ. ಪುಟ್ಟಸ್ವಾಮಿ, ಸದಾನಂದ ಸುವರ್ಣ ಹಾಗೂ ಗಿರೀಶ್ ಕಾಸರವಳ್ಳಿ ಆಗಮಿಸುತ್ತಿದ್ದಾರೆ.

    ಘಟಶ್ರಾದ್ಧ ಚಿತ್ರದ ವಿಶೇಷಗಳು: ಚಿತ್ರದ ಬಜೆಟ್ ಒಂದೂಮುಕ್ಕಾಲು ಲಕ್ಷ. ಜಗತ್ತಿನ ಅತ್ಯುತ್ತಮ ನೂರು ಚಿತ್ರಗಳಲ್ಲಿ ಒಂದಾಗಿದೆ. ಭಾರತದ ಅತ್ಯುತ್ತಮ ಇಪ್ಪತ್ತು ಚಿತ್ರಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ಯು.ಆರ್. ಅನಂತಮೂರ್ತಿ ಅವರ ಸಣ್ಣಕಥೆ ಆಧಾರಿತ ಚಿತ್ರವಿದು.

    ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಗಿರೀಶ್ ಕಾಸರವಳ್ಳಿ ಅವರು ಡಿಪ್ಲೊಮಾ ಪಡೆದು ಹೊರಬಂದ ಬಳಿಕ ನಿರ್ದೇಶಿಸಿದ ಮೊದಲ ಚಿತ್ರ ಇದಾಗಿದೆ. 'ಸ್ವರ್ಣಕಮಲ' ಪ್ರಶಸ್ತಿ ಪುರಸ್ಕೃತ ಚಿತ್ರ. ಡಿವಿಡಿ ಬಿಡುಗಡೆ ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ.

    ಕಪ್ಪು ಬಿಳುಪು ಚಿತ್ರವಾದ 'ಘಟಶ್ರಾದ್ಧ' 1977ರಲ್ಲಿ ತೆರೆಕಂಡಿತ್ತು. ಮೀನಾ, ಅಜಿತ್, ನಾರಾಯಣ ಭಟ್, ರಾಮಕೃಷ್ಣ, ಬಿ ಸುರೇಶ್ ಮತ್ತು ಶಾಂತಾ ಅವರು ಚಿತ್ರದಲ್ಲಿ ಅಭಿನಯಿಸಿದ್ದರು. ಬಿ ವಿ ಕಾರಂತರ ಸಂಗೀತ ಸಂಯೋಜನೆ ಮತ್ತು ಎಸ್ ರಾಮಚಂದ್ರ ಅವರ ಛಾಯಾಗ್ರಹಣ ಘಟಶ್ರಾದ್ಧ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)

    English summary
    Girish Kasaravalli's debut film Ghatashraddha (1977) based on the novel by Jnanapeeth Award winner Dr U R Ananthamurthy is now releasing in book and DVD format. Total Kannada will be releasing the book which is based on the script along with the film in DVD format on 8th September 2012 at Kannada Saahithya Parishath, Bangalore at 6pm.
    Thursday, August 30, 2012, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X