ಸೆಪ್ಟೆಂಬರ್ 1 ರಂದು ನಟ ಸೃಜನ್ ಗೆ 'ಹ್ಯಾಪಿ ಜರ್ನಿ' ಎಂದು ಶುಭ ಹಾರೈಸಿ
ಮಂಗಳೂರು: 'ಶ್ರೀ ಸಾಯಿ ಕರಿಷ್ಮಾ' ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ 'ಹ್ಯಾಪಿ ಜರ್ನಿ' ಕನ್ನಡ ಸಿನೆಮಾ ಸೆಪ್ಟೆಂಬರ್ 1ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
Recommended Video

ಸೃಜನ್ ಲೋಕೇಶ್ ನಾಯಕ ನಟನಾಗಿ, ಕರಾವಳಿ ಮೂಲದ ಅಮಿತಾ ಕುಲಾಲ್ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೌಟುಂಬಿಕ, ರಂಜನೆ ನೀಡುವ ಸಸ್ಪೆನ್ಸ್ ಚಿತ್ರ ಇದಾಗಿದೆ.

ಹಾರರ್, ಆಕ್ಷನ್ ಚಿತ್ರವಾಗಿ 'ಹ್ಯಾಪಿ ಜರ್ನಿ' ಮೂಡಿಬಂದಿದೆ. ಸತ್ಯ ಘಟನೆ ಆಧಾರಿತವಾದ ಈ ಚಿತ್ರ ಮಡಿಕೇರಿ, ಸಕಲೇಶಪುರ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣಗೊಂಡು ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ.
ಕುಸಲ್ದರಸೆ ನವೀನ್ ಪಡೀಲ್ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಹರ್ಷಿಕಾ ಪೂಣಚ್ಚ, ಶಿವಧ್ವಜ್, ಕುರಿ ಪ್ರತಾಪ್, ಮನೋಜ್ ಪುತ್ತೂರು, ರಮೇಶ್ ಭಟ್, ಅರಸು ಮಹಾರಾಜ್, ಪ್ರಿಯಾಂಕಾ ಮಲ್ನಾಡ್, ರಿಯಾ ಮೇಘನಾ ತಾರಾಗಣದಲ್ಲಿದ್ದಾರೆ.
ಕರಿಷ್ಮಾ ಆರ್. ಶೆಟ್ಟಿ ಚಿತ್ರದ ನಿರ್ಮಾಪಕಿ ಆಗಿದ್ದು, ಸಿನಿಮಾದಲ್ಲಿ ಎಸ್.ಪಿ.ಚಂದ್ರಕಾಂತ್ ಸಂಗೀತ ಸಂಯೋಜಿಸಿರುವ ಹಾಡುಗಳಿವೆ. 'ಹ್ಯಾಪಿ ಜರ್ನಿ' ಸಿನಿಮಾದಲ್ಲಿ ತುಳುನಾಡಿನ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಎಲ್ಲ ಸಿನಿ ಪ್ರಿಯರು 'ಹ್ಯಾಪಿ ಜರ್ನಿ' ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂಬುದು ಚಿತ್ರತಂಡದ ಮನವಿ.


Click it and Unblock the Notifications











