For Quick Alerts
  ALLOW NOTIFICATIONS  
  For Daily Alerts

  ಇದು ಹೆಂಗ್ ಹೆಂಗೋ ಆಡುವ ಹುಚ್ಚುಡುಗ್ರ ಕಥೆ

  By Rajendra
  |

  ಈ 'ಹುಚ್ಚು' ಪದಕ್ಕೂ ನಮ್ಮ ಕನ್ನಡ ಚಿತ್ರರಂಗಕ್ಕೂ ಒಂಥರಾ ಬಿಡಿಸಲಾಗದ ನಂಟು. ಈಗ ನಂಟು ಈಗ 'ಹುಚ್ಚುಡುಗ್ರು' ಚಿತ್ರಕ್ಕೂ ಅಂಟಿಕೊಂಡಿದೆ. ಹಾಕಿಕೊಂಡ ಯೋಜನೆಯಂತೆ ಇದೀಗ ಮಾತಿನ ಬಾಗದ ಚಿತ್ರೀಕರಣ ಮುಗಿಸಿದ್ದಾರೆ ಹುಚ್ಚುಡುಗ್ರು.

  ಯುವ ತಂಡ 'ಭಗವತಿ ಪಿಕ್ಚರ್ಸ್' ಅಡಿಯಲ್ಲಿ ಶಿಸ್ತಿನಿಂದಲೇ ಮಾತುಗಳನ್ನು ಮುಗಿಸಿ ಇನ್ನುಳಿದ ಚಟುವಟಿಕೆಗಳನ್ನು ಶುರು ಮಾಡಿಕೊಂಡಿದೆ. ಈ ಚಿತ್ರದಲ್ಲಿ ನಾಲ್ಕು ನಾಯಕರುಗಳಿಗೆ ಶಿವನ ಪರ್ಯಾಯ ಹೆಸರುಗಳಿಂದ ಸಂಭೋದಿಸಲಾಗುವುದು. ಚಿತ್ರಿಕರಣವೂ ಸಹ ಮೈಸೂರು ಹಾಗೂ ನಂಜನಗೂಡು ಆಸುಪಾಸಿನಲ್ಲೆ ಮಾಡಲಾಗಿರುವುದು ವಿಶೇಷ.

  ವೇದಮೂರ್ತಿ ಹಾಗೂ ರೋಹಿಣಿ ಅವರು ಈ ಚಿತ್ರದ ನಿರ್ಮಾಪಕರುಗಳು. ರೇಡಿಯೋ ಜಾಕೀ ಆರ್ ವಿ ಪ್ರದೀಪ್ ಈ 'ಹುಚ್ಚುಡುಗರು' ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಯಂಗ್ ಹುಡುಗರು ಹೆಂಗ್ ಹೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ.

  ನಿರ್ದೇಶಕ ಪ್ರೇಮ್ ಅವರ ಬಳಿ 'ಕರಿಯ' ಸಿನಿಮಾದಿಂದ 'ರಾಜ್ ದಿ ಶೋಮನ್' ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಕಥೆ, ಚಿತ್ರಕಥೆ, ನಿರ್ಮಾಣದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡುತ್ತಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತ್ರ ಅವರು ಚಿತ್ರಕ್ಕೆ ಒದಗಿಸಿದ್ದಾರೆ.

  'ಹುಚ್ಚುಡುಗರು' ಚಿತ್ರದ ಶೀರ್ಷಿಕೆ ಗೀತೆ ನಿರ್ದೇಶಕ ಪ್ರೇಮ್ ಹಾಡು ಹೇಳುವುದರೊಂದಿಗೆ ಚಾಲನೆ ಸಿಕ್ಕಿದೆ ? 'ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗರು...ಎಂಬುವ ಹಾಡನ್ನು ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರು ಧ್ವನಿ ಮುದ್ರಿಸಿ ಕೊಂಡಿದ್ದಾರೆ.

  ಈ ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ, ಅದಿತಿ ರಾವು, ರವಿಶಂಕರ್ ಹಾಗೂ ಇತರರು ಇದ್ದಾರೆ. ಜೋಶ್ವ ಶ್ರೀಧರ್ ಸಂಗೀತ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada film Huchchudugru song recording held recently. Harakalu Angi, Thyaape Chaddi, Kuruchalu Gadda, Loosu Thale....is the song recorded in the voice of director by Joshua Sridhar. Raghu Hassan has written story, screenplay and looking after production designing for this film besides writing lyrics with Anandapriya, Kalyan and Sudarshan in the team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X