»   » ಜೂನ್ 27ಕ್ಕೆ GST ಕುರಿತು ಚಲನಚಿತ್ರೋದ್ಯಮ ವಿಶ್ಲೇಷಣೆ

ಜೂನ್ 27ಕ್ಕೆ GST ಕುರಿತು ಚಲನಚಿತ್ರೋದ್ಯಮ ವಿಶ್ಲೇಷಣೆ

Posted By:
Subscribe to Filmibeat Kannada

ಜೆ.ಎಸ್.ಟಿ (Goods and Services Tax) ಇದೇ ಜುಲೈ 01 ರಿಂದ ಜಾರಿಗೆ ಬರಲಿದ್ದು, ಈ ಬಗ್ಗೆ ಚಲನಚಿತ್ರೋದ್ಯಮದ ವಿಶ್ಲೇಷಣೆ ಕಾರ್ಯಕ್ರಮ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ, ಮತ್ತು ಚಲನಚಿತ್ರೋದ್ಯಮ ಈ ವಿಶ್ಲೇಷಣೆಯಲ್ಲಿ ಭಾಗಿಯಾಗಲಿವೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷರಾದ ಬಿ.ಟಿ. ಮನೋಹರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಚಿತ್ರೋದ್ಯಮದ ದೃಷ್ಟಿಯಲ್ಲಿ ಜಿ.ಎಸ್.ಟಿ. ಕುರಿತು ಮಾತನಾಡುವರು.

Kannada Film Industry Analysis about GST

ಈ ಕಾರ್ಯಕ್ರಮ ಜೂನ್ 27 ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ, ನಿರ್ದೇಶಕರ ಮತ್ತುಕಲಾವಿದರ ಸಂಘಗಳು ಸಹ ಭಾಗವಹಿಸಲಿವೆ.

English summary
Kannada Film Industry Analysis about GST (Goods and Services Tax) on 27th June.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada