ಮೈಸೂರು ಬ್ಯಾಂಕ್ ವೃತ್ತದಲ್ಲಿ ತಾರೆ ಜಮೀನ್ ಪರ್

By Rajendra

ಡಬ್ಬಿಂಗ್ ವಿರುದ್ಧ ಕನ್ನಡ ಸಿನಿಮಾ ತಾರೆಗಳು ಭೂಮಿಗಿಳಿಯುವ ಸಮಯ ಮತ್ತೆ ಬಂದಿದೆ. ಸೋಮವಾರ (ಜ.27) ಹಮ್ಮಿಕೊಂಡಿರುವ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆಯ ಕಾವು ರಾಜ್ಯದಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನಕ್ಕೆ ಬೃಹತ್ ಮೆರವಣಿಗೆ ಸಾಗಲಿದೆ.

ಈ ಬಂದ್ ಗೆ ಚಲನಚಿತ್ರ, ಕಿರುತೆರೆ ನಟ ನಟಿಯರು, ತಂತ್ರಜ್ಞರು, ಕಾರ್ಮಿಕರು, ನಿರ್ದೇಶಕರು, ಕನ್ನಡಪರ ಹೋರಾಟಗಾರರು ಹಾಗೂ ಇಡೀ ಚಿತ್ರೋದ್ಯಮ ಭಾಗಿಯಾಗಿದೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಂದ ಈ ಬಂದ್ ಗೆ ತಟಸ್ಥ ಧೋರಣೆ ವ್ಯಕ್ತವಾಗಿದೆ.

Actor Shivrajkumar
ಕರ್ನಾಟಕ ಚಲನಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಡಬ್ಬಿಂಗ್ ಪರ ನಿಂತಿದ್ದಾರೆ. ಬಂದ್ ಕಾರಣ ಚಿತ್ರ ಪ್ರದರ್ಶನ, ಚಿತ್ರೀಕರಣ ಸೇರಿದಂತೆ ಒಟ್ಟಾರೆ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತವಾಗಿವೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವ ವಹಿಸಿದ್ದಾರೆ.

ನಟ ಜಗ್ಗೇಶ್, ರವಿಚಂದ್ರನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಸಾ.ರಾ.ಗೋವಿಂದು, ಭಾರತಿ ವಿಷ್ಣುವರ್ಧನ್, ಪೂಜಾಗಾಂಧಿ, ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕುಟದ ಅಧ್ಯಕ್ಷ ಅಶೋಕ್, ಶ್ರೀನಾಥ್, ಶಶಿಕುಮಾರ್, ಶರಣ್, ಯಶ್, ಸುಧಾರಾಣಿ, ಶ್ರುತಿ, ಹೇಮಾ ಚೌಧರಿ ಬಂದ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)

More from Filmibeat

English summary
The Kannada film industry extended support to the bandh call given by Kannada organisations on Monday (Jan 27th) opposing dubbing of other language films and television serials to Kannada. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X