For Quick Alerts
  ALLOW NOTIFICATIONS  
  For Daily Alerts

  2022ರಲ್ಲಿ ಮೂರು ಇಂಡಸ್ಟ್ರಿ ಹಿಟ್ ಬಾರಿಸಿದ ಕನ್ನಡ ಚಿತ್ರರಂಗ; ತಮಿಳಿನಲ್ಲಿ ಎರಡು, ತೆಲುಗಿನಲ್ಲಿ ಒಂದು!

  |

  2022 ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಸಹ ಯಶಸ್ಸನ್ನು ಸಾಧಿಸಿದ ವರ್ಷವಾಗಿದೆ. ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳು ಈ ವರ್ಷ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ಪಡೆದುಕೊಂಡಿವೆ. ಒಂದೇ ವರ್ಷ ಈ ಮೂರೂ ಚಿತ್ರರಂಗಗಳೂ ಸಹ ಇಂಡಸ್ಟ್ರಿ ಹಿಟ್ ನೀಡಿ ಹಲವು ವರ್ಷಗಳೇ ಕಳೆದಿದ್ದವು. ಇನ್ನು ಕಳೆದ ವರ್ಷ ಕೊರೊನಾ ನಂತರ ಸುಧಾರಿಸಿಕೊಂಡಿದ್ದ ಚಿತ್ರರಂಗಕ್ಕೆ ಈ ವರ್ಷ ಬಿಡುಗಡೆಯಾದ ಚಿತ್ರಗಳಿಂದ ಶಕ್ತಿ ಬಂದಿದ್ದು ವಿಶೇಷವಾಗಿ ಇಂಡಸ್ಟ್ರಿ ಹಿಟ್ ಚಿತ್ರಗಳಿಂದ ಚಿತ್ರರಂಗಗಳು ಸಿಕ್ಕಾಪಟ್ಟೆ ಬಲಿಷ್ಠಗೊಂಡಿವೆ.

  ಚಿತ್ರವೊಂದು ತನ್ನ ರಾಜ್ಯದ ಈ ಹಿಂದಿನ ಚಿತ್ರದ ಗಳಿಕೆಯ ದಾಖಲೆಯನ್ನು ಮುರಿದು ತನ್ನದೇ ಆದ ಹೊಸ ದಾಖಲೆ ನಿರ್ಮಿಸಿದರೆ ಆ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎಂದು ಪರಿಗಣಿಸಲಾಗುತ್ತದೆ. ಇನ್ನು ಇತ್ತೀಚಿಗಷ್ಟೆ ಪ್ಯಾನ್ ಇಂಡಿಯಾ ಟ್ರೆಂಡ್ ದೊಡ್ಡದಾಗಿದ್ದು ಚಿತ್ರವೊಂದು ಇಂಡಸ್ಟ್ರಿ ಹಿಟ್ ಎನಿಸಿಕೊಳ್ಳಲು ಬೇರೆ ಭಾಷೆಯ ಚಿತ್ರಗಳ ದಾಖಲೆಯನ್ನೆಲ್ಲಾ ಮುರಿಯಬೇಕು ಎಂದೇನಿಲ್ಲ. ಮುಖ್ಯವಾಗಿ ಇಂಡಸ್ಟ್ರಿ ಹಿಟ್ ಅನ್ನು ರಾಜ್ಯದ ಕಲೆಕ್ಷನ್ ಮೇಲೆ ನಿರ್ಧರಿಸಲಾಗುವುದರಿಂದ ಇಂಡಸ್ಟ್ರಿ ಹಿಟ್ ಎನಿಸಿಕೊಳ್ಳಲು ಆ ಚಿತ್ರ ತನ್ನ ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದರೆ ಸಾಕು.

  ಉದಾಹರಣೆಗೆ ತಮಿಳಿನ ಪೊನ್ನಿಯಿನ್ ಸೆಲ್ವನ್ ತಮಿಳುನಾಡು ಹೊರತುಪಡಿಸಿ ದೇಶದ ಉಳಿದೆಡೆ ದೊಡ್ಡ ಸದ್ದು ಮಾಡಲೇ ಇಲ್ಲ. ಆದರೆ ತಮಿಳುನಾಡಿನಲ್ಲಿ ಇದ್ದ ಎಲ್ಲಾ ಕಲೆಕ್ಷನ್ ದಾಖಲೆಯನ್ನು ಧೂಳೀಪಟ ಮಾಡಿದ ಈ ಚಿತ್ರ ತಮಿಳು ನಾಡಿನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಹೀಗೆ ಈ ವರ್ಷ ಕರ್ನಾಟಕಲ್ಲಿ ಮೂರು ಚಿತ್ರಗಳು ಇಂಡಸ್ಟ್ರಿ ಹಿಟ್ ಸಾಧನೆ ಮಾಡಿದರೆ, ತಮಿಳು ನಾಡಿನಲ್ಲಿ ಎರಡು ಹಾಗೂ ತೆಲುಗು ರಾಜ್ಯಗಳಲ್ಲಿ ಒಂದು ಇಂಡಸ್ಟ್ರಿ ಹಿಟ್ ದಾಖಲೆನ್ನು ಬರೆದಿವೆ. ಅವುಗಳ ವಿವರ ಈ ಕೆಳಕಂಡಂತಿದೆ..

  ಮೂರು ಇಂಡಸ್ಟ್ರಿ ಹಿಟ್ ಕೊಟ್ಟ ಕನ್ನಡ ಚಿತ್ರರಂಗ

  ಮೂರು ಇಂಡಸ್ಟ್ರಿ ಹಿಟ್ ಕೊಟ್ಟ ಕನ್ನಡ ಚಿತ್ರರಂಗ

  ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಕರ್ನಾಟಕದಲ್ಲಿ 151 ಕೋಟಿ ಕಲೆಕ್ಷನ್ ಮಾಡುವ ಮೂಲಕ ಈ ಹಿಂದೆ ರಾಜ್ಯದಲ್ಲಿ 136 ಕೋಟಿ ಗಳಿಸಿದ್ದ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಮುರಿದು ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತು. ನಂತರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಕರ್ನಾಟಕದಲ್ಲಿ 183 ಕೋಟಿ ಗಳಿಸಿ ಜೇಮ್ಸ್ ಚಿತ್ರವನ್ನು ಹಿಂದಿಕ್ಕಿ ರಾಜ್ಯದಲ್ಲಿ ಇಂಡಸ್ಟ್ರಿ ಹಿಟ್ ಆಯಿತು. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕಾಂತಾರ ಚಿತ್ರ ಕರ್ನಾಟಕದಲ್ಲಿ ಇನ್ನೂರು ಕೋಟಿಗೂ ಅಧಿಕ ಗಳಿಸುವುದರ ಮೂಲಕ ಕೆಜಿಎಫ್ ಚಾಪ್ಟರ್ 2 ಚಿತ್ರದ ದಾಖಲೆಯನ್ನು ಮುರಿದು ಕರ್ನಾಟಕದ ಮೂರನೇ ಇಂಡಸ್ಟ್ರಿ ಹಿಟ್ ಆಗಿದೆ. ಹೀಗೆ ಈ ವರ್ಷ ಕರ್ನಾಟಕದಲ್ಲಿ ಒಟ್ಟು ಮೂರು ಇಂಡಸ್ಟ್ರಿ ಹಿಟ್ ಚಿತ್ರಗಳು ಹೊರಹೊಮ್ಮಿವೆ.

  ತಮಿಳಿನಲ್ಲಿ ಎರಡು ಇಂಡಸ್ಟ್ರಿ ಹಿಟ್

  ತಮಿಳಿನಲ್ಲಿ ಎರಡು ಇಂಡಸ್ಟ್ರಿ ಹಿಟ್

  ತಮಿಳುನಾಡಿನಲ್ಲಿ ಬಾಹುಬಲಿ 2 155 ಕೋಟಿ ಗಳಿಸುವ ಮೂಲಕ ತಮಿಳುನಾಡಿನಲ್ಲಿ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು. ಈ ದಾಖಲೆಯನ್ನು ಈ ವರ್ಷ ಬಿಡುಗಡೆಗೊಂಡ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರ ತಮಿಳುನಾಡಿನಲ್ಲಿ 186 ಕೋಟಿ ಗಳಿಸುವ ಮೂಲಕ ಮುರಿದುಹಾಕಿ ರಾಜ್ಯದ ಹೊಸ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತು. ಇನ್ನು ಇತ್ತೀಚೆಗಷ್ಟೆ ಪೊನ್ನಿಯಿನ್ ಸೆಲ್ವನ್ 1 ಚಿತ್ರ ಬಿಡುಗಡೆಗೊಂಡಿದ್ದು 227 ಕೋಟಿ ಗಳಿಕೆ ಮಾಡುವುದರ ಮೂಲಕ ತಮಿಳುನಾಡಿನ ನೂತನ ಇಂಡಸ್ಟ್ರಿ ಹಿಟ್ ಆಗಿ ನಿಂತಿದೆ.

  ತೆಲುಗಿನಲ್ಲಿ ಏಕೈಕ ಇಂಡಸ್ಟ್ರಿ ಹಿಟ್

  ತೆಲುಗಿನಲ್ಲಿ ಏಕೈಕ ಇಂಡಸ್ಟ್ರಿ ಹಿಟ್

  ತಮಿಳು ನಾಡಿನಲ್ಲಿ ಇಂಡಸ್ಟ್ರಿ ಹಿಟ್ ಆಗಿ ಐದು ವರ್ಷಗಳ ಕಾಲ ಉಳಿದುಕೊಂಡಿದ್ದ ಬಾಹುಬಲಿ 2 ಚಿತ್ರ ತನ್ನದೇ ರಾಜ್ಯಗಳಲ್ಲೂ ಐದು ವರ್ಷಗಳಿಂದ ಇಂಡಸ್ಟ್ರಿ ಹಿಟ್ ಆಗಿ ಉಳಿದಿತ್ತು. ಆದರೆ ಈ ವರ್ಷ ಬಿಡುಗಡೆಗೊಂಡ RRR ತೆಲುಗು ರಾಜ್ಯಗಳಲ್ಲಿ 415 ಕೋಟಿ ಗಳಿಸುವ ಮೂಲಕ ಈ ಹಿಂದೆ 327 ಕೋಟಿ ಗಳಿಸಿದ್ದ ಬಾಹುಬಲಿ 2 ಚಿತ್ರದ ದಾಖಲೆಯನ್ನು ಹಿಂದಿಕ್ಕಿ ತೆಲುಗು ರಾಜ್ಯಗಳ ನೂತನ ಇಂಡಸ್ಟ್ರಿ ಹಿಟ್ ಆಗಿದೆ.

  ಆರು ವರ್ಷ ಕಳೆದರೂ ಮಾಲಿವುಡ್‌ಗೆ ಇಂಡಸ್ಟ್ರಿ ಹಿಟ್ ಸಿಕ್ಕಿಲ್ಲ!

  ಆರು ವರ್ಷ ಕಳೆದರೂ ಮಾಲಿವುಡ್‌ಗೆ ಇಂಡಸ್ಟ್ರಿ ಹಿಟ್ ಸಿಕ್ಕಿಲ್ಲ!

  ಈ ವರ್ಷ ಮಲಯಾಳಂ ಚಿತ್ರ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಸಹ ಇಂಡಸ್ಟ್ರಿ ಹಿಟ್ ಬಾರಿಸಿವೆ. 2016ರಲ್ಲಿ ಬಿಡುಗಡೆಗೊಂಡಿದ್ದ ಮೋಹನ್‌ಲಾಲ್ ಅಭಿನಯದ ಪುಲಿಮುರುಗನ್ ಚಿತ್ರ ಕೇರಳ ರಾಜ್ಯದಲ್ಲಿ 144 ಕೋಟಿ ಗಳಿಸಿ ರಾಜ್ಯದ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರ ಕೇರಳ ರಾಜ್ಯದಲ್ಲಿ ಮಾಡಿದ ದಾಖಲೆಯನ್ನು ಇಲ್ಲಿಯವರೆಗೂ ಯಾವ ಚಿತ್ರವೂ ಹಿಂದಿಕ್ಕಲಾಗಿಲ್ಲ.

  English summary
  Kannada Film Industry delivered 3, Tamil 2 and Telugu 1 industry hits in 2022. Take a look
  Tuesday, November 22, 2022, 10:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X