ಚೆನ್ನೈನಲ್ಲೂ ಹೀಟೆಬ್ಬಿಸಲಿರುವ ತುಪ್ಪದ ಬೆಡಗಿ ರಾಗಿಣಿ

By ಜೀವನರಸಿಕ

ಚೆನ್ನೈನಲ್ಲಿ ಭಾರತೀಯ ಚಿತ್ರರಂಗದ ನೂರುವರ್ಷದ ಸಂಭ್ರಮದ ರಂಗೇರತೊಡಗಿದೆ. ಸಿನಿಪ್ರೇಮಿಗಳು ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್, ಮಾಲಿವುಡ್ ಇಷ್ಟೂ ಚಿತ್ರರಂಗಗಳ ತಾರೆಯರನ್ನ ಒಂದೇ ವೇದಿಕೆಯಲ್ಲಿ ನೋಡೋ ಕ್ಷಣಗಳು ಬಂದೇ ಬಿಟ್ಟಿದೆ.

ಇದೇ ಕ್ಷಣಕ್ಕಾಗಿ ಅದೆಷ್ಟು ಸಿನಿಪ್ರೇಮಿಗಳು ಕಾತರದಿಂದ ಕಾದಿದ್ದಾರೋ. ಇದೇ 22ರಿಂದ ಮೂರು ದಿನಗಳವರೆಗೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳು ರಂಗು ತುಂಬಿ ಕಂಗೊಳಿಸಲಿವೆ. ಸೆ.22ರಂದು ಕನ್ನಡ ಚಿತ್ರರಂಗದ ತಾರೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸನ್ಮಾನ ಸಮಾರಂಭ ಕೂಡ ನಡೆಯಲಿದೆ.

ಆದ್ರೆ ಸದ್ಯ ಎಲ್ಲರ ಕಣ್ಣು ನೆಟ್ಟಿರೋದು 25ರಂದು ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ರಂತಹ ದಿಗ್ಗಜರೆದುರು ರಾಷ್ಟ್ರಪತಿ ಪ್ರಣಬ್ ಮುಖಜರ್ಜಿ ಎದುರು ವೇದಿಕೆ ಮೇಲೆ ಮಿಂಚೋರು ಯಾರು ಅನ್ನೋದು.

ಇಲ್ಲಿ ಸ್ಯಾಂಡಲ್ವುಡ್ ನ ಟಾಪ್ ತಾರೆಯರು ಏನ್ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಕ್ರಿಯೇಟ್ ಮಾಡ್ತಿದೆ. ಇಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಗೆ ಮಿಂಚ್ತಾರೆ. ಪುನೀತ್ ಡಾನ್ಸ್ ಯಾವ ಹಾಡಿಗೆ ಅನ್ನೋ ಕ್ಯೂರಿಯಸಿಟಿ ನಿಮ್ಗೂ ಇರುತ್ತೆ.

ಪ್ರೇಮಲೋಕ ಗೀತೆಗೆ ಕ್ರೇಜಿಸ್ಟಾರ್ ಹೆಜ್ಜೆ

ಪ್ರೇಮಲೋಕ ಗೀತೆಗೆ ಕ್ರೇಜಿಸ್ಟಾರ್ ಹೆಜ್ಜೆ

ಕ್ರೇಜಿಸ್ಟಾರ್ ರವಿಚಂದ್ರನ್ 'ಪ್ರೇಮಲೋಕ' ಗೀತೆಗೆ ಹೆಜ್ಜೆಹಾಕಲಿದ್ದು, ರವಿಮಾಮನಿಗೆ ಐಂದ್ರಿತಾ ಸಾಥ್ ಕೊಡಲಿದ್ದಾರೆ. ಕ್ರೇಜಿ ಅಭಿಮಾನಿಗಳು ಹುಚ್ಚೆದ್ದು ಕುಣಿಯೋದು ಕನ್ಫರ್ಮ.

ತಲೆ ಕೆಟ್ಟ ಭಟ್ಟ ಎವುಡಾ ಸಾಂಗ್ ಗೆ ದರ್ಶನ್ ಸ್ಟೆಪ್

ತಲೆ ಕೆಟ್ಟ ಭಟ್ಟ ಎವುಡಾ ಸಾಂಗ್ ಗೆ ದರ್ಶನ್ ಸ್ಟೆಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಟ್ರು ಬರೆದ 'ಚಿಂಗಾರಿ' ಚಿತ್ರದ "ತಲೆ ಕೆಟ್ಟ ಭಟ್ಟ ಎವುಡಾ ಸಾಂಗ್ ಗೆ ಸ್ಟೆಪ್ ಹಾಕಲಿದ್ದಾರೆ.

ಕಿಚ್ಚೆಬ್ಬಿಸಲಿರುವ ಕಿಚ್ಚ ಸುದೀಪ್

ಕಿಚ್ಚೆಬ್ಬಿಸಲಿರುವ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಒನ್ ಟು ತ್ರೀ ವಿಷ್ಣುವರ್ಧನ ಅಂತ ಅಭಿಮಾನಿಗಳ ಎದೆಯಲ್ಲಿ ಕಿಚ್ಚೆಬ್ಬಿಸಲಿದ್ದಾರೆ.

ಡೇಂಜರ್ ಹಾಡಿಗೆ ಉಪೇಂದ್ರ ಹೆಜ್ಜೆ

ಡೇಂಜರ್ ಹಾಡಿಗೆ ಉಪೇಂದ್ರ ಹೆಜ್ಜೆ

ಡಿಫ್ರೆಂಟ್ ಉಪ್ಪಿ ಡೇಂಜರ್ ಟ್ವೆಂಟಿ ಟು ಥರ್ಟಿ ಡೇಂಜರ್ ಅಂತ ಟಿಪಿಕಲ್ ಡಾನ್ಸ್ ಮಾಡಲಿದ್ದಾರೆ.

ಚೆನ್ನೈನಲ್ಲೂ ತುಪ್ಪಾ ಹಾಡಿಗೆ ರಾಗಿಣಿ

ಚೆನ್ನೈನಲ್ಲೂ ತುಪ್ಪಾ ಹಾಡಿಗೆ ರಾಗಿಣಿ

ಗ್ಲಾಮರ್ ಡಾಲ್ ರಾಗಿಣಿ ತುಪ್ಪ ಬೇಕಾ ತುಪ್ಪ ಅಂತ ಚೆನ್ನೈನ ಹೀಟಿಗೆ ಮತ್ತಷ್ಟು ಹೀಟೆಬ್ಬಿಸಲಿದ್ದಾರೆ.

ವೇದಿಕೆ ಮೇಲೆ ರಾಧಿಕಾ ಕುಮಾರಸ್ವಾಮಿ ಜಿಗಿತ

ವೇದಿಕೆ ಮೇಲೆ ರಾಧಿಕಾ ಕುಮಾರಸ್ವಾಮಿ ಜಿಗಿತ

ರಾಧಿಕಾ ಕುಮಾರಸ್ವಾಮಿ ತಮ್ಮದೇ ಇನ್ನೂ ರಿಲೀಸಾಗದ ಸ್ವೀಟಿ ಹಾಡಿಗೆ ಜಿಂಕೆಮರಿಯಂತೆ ಜಿಗಿಯಲಿದ್ದಾರೆ.

ಪವರ್ ಸ್ಟಾರ್ ಪುನೀತ್ ಜಾಕಿ ಜಾಕಿ ಹಾಡು

ಪವರ್ ಸ್ಟಾರ್ ಪುನೀತ್ ಜಾಕಿ ಜಾಕಿ ಹಾಡು

ಪವರ್ ಸ್ಟಾರ್ ಪುನೀತ್ ಜಾಕಿ ಜಾಕಿ ಅಂತ ಭರ್ಜರಿ ಡಾನ್ಸ್ ಮಾಡಲಿದ್ದು ಅಭಿಮಾನಿಗಳು ಜಾಕಿಯನ್ನ ಕಣ್ತುಂಬಿಕೊಳ್ಳೋಕೆ ಕಾದಿದ್ದಾರೆ.

ರೆಬೆಲ್ ಸ್ಟಾರ್ ಅಂಬಿ ಇನ್ನೂ ಗ್ರೀಸ್ ಸಿಗ್ನಲ್ ಕೊಟ್ಟಿಲ್ಲ

ರೆಬೆಲ್ ಸ್ಟಾರ್ ಅಂಬಿ ಇನ್ನೂ ಗ್ರೀಸ್ ಸಿಗ್ನಲ್ ಕೊಟ್ಟಿಲ್ಲ

ಇನ್ನು ರೆಬೆಲ್ ಸ್ಟಾರ್ ಅಂಬಿ ಕುಣಿಯೋದು ಗ್ಯಾರಂಟಿ ಇಲ್ಲದಿದ್ರೂ ಕುಣಿದ್ರೆ ನಾನು ಯಾರು ಯಾವ ಊರು ಅನ್ನೋ ಹಾಡಿಗೆ ಸ್ಟೆಪ್ ಹಾಕೋಕೆ ಉಳಿದ ಡಾನ್ಸರ್ ಗಳು ರೆಡಿಯಾಗಿದ್ದಾರೆ.

ವೇದಿಕೆ ಮೇಲೆ ಕಾಮನಬಿಲ್ಲು

ವೇದಿಕೆ ಮೇಲೆ ಕಾಮನಬಿಲ್ಲು

ಒಟ್ಟಾರೆ 25ನೇ ತಾರೀಕು ಚೆನ್ನೈನಲ್ಲಿ ನಡೆಯಲಿರೋ ರಂಗು ತುಂಬಿದ ಕಾರ್ಯಕ್ರಮದಲ್ಲಿ ಕಣ್ಣುಗಳಿಗೆ ತಮ್ಮ ಮೆಚ್ಚಿನ ತಾರೆಯರು ಕಾಮನಬಿಲ್ಲಿನ ಹಬ್ಬ ನೀಡಲಿದ್ದಾರೆ.

More from Filmibeat

English summary
Indian Cinema Centenary Celebrations in Chennai between September 21 and 24, stars from all four south film industries will congregate to commemorate. The grand finale on September 24 will see the creme de la creme of the Kannada film industry take the stage for a special sequence choreographed by Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X