'RCB ಪರ ಬಿಡ್ಡಿಂಗ್ ಕುಳಿತೋರಿಗೆ ಒಂದು ಅರ್ಜೆಂಟ್ ಮೆಸೇಜ್ ಕಳಿಸ್ಬೇಕು'- ಕವಿರಾಜ್ ಆಕ್ರೋಶ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇಂತಹ ನಶೆಯ ಲೋಕದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೇಲಾಡುತ್ತಿದೆಯಾ ಗೊತ್ತಿಲ್ಲ. ಆದರೆ ಆರ್.ಸಿ.ಬಿಯ ನಡಾವಳಿ ಕನ್ನಡಿಗರ ಆಕ್ರೋಶವನ್ನು ಹೆಚ್ಚಿಸಿದೆ.
ಹೌದು, ಅಸಲಿಗೆ ಕನ್ನಡಿಗೆ ಕೆ.ಎಲ್.ರಾಹುಲ್ ಅವರನ್ನು ಭಾನುವಾರ ಹರಾಜಿನಲ್ಲಿ ಖರೀದಿಸದೇ ಕೈ ಚೆಲ್ಲಿದ 'ರಾಯಲ್ ಚಾಲಿಂಜ್ ಬೆಂಗಳೂರು (RCB)'ಯಿಂದಾಗಿ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಮೊದಲಿನಿಂದಲೂ ಟೀಂ ಇಂಡಿಯಾದ ಉತ್ತಮ ಆಟಗಾರ ಕೆಎಲ್ ರಾಹುಲ್ ಅವರನ್ನು ಟೀಂ ಗೆ ಕರೆತರಬೇಕು. ಇದರಿಂದ ಆರ್‌ಸಿಬಿ ಟೀಂ ಬಲ ಹೆಚ್ಚಲಿದೆ ಎಂದೆಲ್ಲ ಫ್ಯಾನ್ಸ್ ಭಾವಿಸಿದ್ದರು.

ಆದರೆ. ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ನಮ್ಮ ಮನೆ ಮಗ ಕೆಎಲ್ ರಾಹುಲ್ ಶಕ್ತಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ಅವರನ್ನು ಖರೀದಿಸುವಲ್ಲಿ ಆರ್‌ಬಿಸಿ ತೋರಿದ ನಿರಾಸಕ್ತಿಯಿಂದಾಗಿ ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ ಟೀಂ ಪಾಲಾಗಿದ್ದಾರೆ. ಇದು ಕನ್ನಡಿಗರಿಗೆ ಬೇಸರ ತರಿಸಿದೆ. ನಾವು ಬೆಂಬಲಿಸುವ ಆರ್‌ಸಿಬಿ ನಮ್ಮನ್ನೆ ಕಡೆಗಣಿಸುತ್ತಿದೆಯೇ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮೂಡುವಂತಾಗಿದೆ.
ಯಾಕೆಂದರೆ ಕೆ.ಎಲ್ ರಾಹುಲ್ ಸಾಮಾನ್ಯ ಪ್ಲೇಯರ್ ಅಲ್ಲ. ಛಲದಂಕ ಮಲ್ಲ. ಕನ್ನಡಿಗ. ಆದರೂ ಕೂಡ ಸುವರ್ಣ ಅವಕಾಶವನ್ನು ಕೈ ಚೆಲ್ಲಿದ ಆರ್.ಸಿ.ಬಿ ಕೆ.ಎಲ್ ರಾಹುಲ್ ಅವರನ್ನು ₹14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟು ಕೊಟ್ಟಿದೆ. ಬಿಡ್ಡಿಂಗ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪೈಪೋಟಿ ನಡೆದಿತ್ತು ಆದರೂ ಡೆಲ್ಲಿ ಕ್ಯಾಪಿಟಲ್ಸ್ ಟೀಂ ಸೇರಲು ಅನುವು ಮಾಡಿಕೊಟ್ಟಿದೆ. ಇದರಿಂದ ಸಹಜವಾಗಿ ಎಲ್ಲರಿಗೆ ಬೇಸರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡಿಗರ ನೆಚ್ಚಿನ ಕವಿ ಕನ್ನಡ ಚಿತ್ರರಂಗದ ನೆಚ್ಚಿನ ಸಾಹಿತಿ ಕವಿರಾಜ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಲಿಬಾಲ್ ಟೀಮ್ ಕಟ್ಟುವ ಐಡಿಯಾ ಏನಾದರೂ ಇದೆಯಾ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕವಿರಾಜ್, RCB ಪರ ಬಿಡ್ಡಿಂಗ್ ಕುಳಿತೋರಿಗೆ ಒಂದು ಅರ್ಜೆಂಟ್ ಮೆಸೇಜ್ ಕಳಿಸ್ಬೇಕು . Cricket ಟೀಮ್ ಆಗೋಕೆ ಕನಿಷ್ಠ 11 ಪ್ಲೇಯರ್ಸ್ ಇರಬೇಕು ಅಂತಾ. ಯಾರಿಗೂ ಬಿಡ್ ಮಾಡ್ತಾನೆ ಇಲ್ಲ ಆರೇಳು ಪ್ಲೇಯರ್ಸ್ ಇಟ್ಕೊಂಡು ವಾಲಿಬಾಲ್ ಟೀಮ್ ಕಟ್ಟೊ ಐಡಿಯಾ ಏನಾದ್ರು ಉಂಟಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.
ಇನ್ನುಳಿದಂತೆ ಹಿಂದಿನ ಮೂರು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಚತುರ ಆಟಗಾರ 32 ವರ್ಷ ವಯಸ್ಸಿನ ಕೆ.ಎಲ್ ರಾಹುಲ್ ಅವರು ಕಳೆದ ಐಪಿಎಲ್ ವೇಳೆ ಲಕ್ನೋ ಸೂಪರ್ ಜೆಂಟ್ಸ್ ಪರ ಆಟವಾಡಿದ್ದರು. ಉತ್ತಮ ಪ್ರದರ್ಶನ ನೀಡಿದ್ದರು. ಅದಷ್ಟೇ ಅಲ್ಲದೇ ಅವರು ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಟೀಂ ಅನ್ನು ಸಹ ಪ್ರತಿನಿಧಿಸಿದ್ದರು.
ಒಟ್ನಲ್ಲಿ ಈ ಬಾರಿ ಕೆ.ಎಲ್ ರಾಹುಲ್ ಅವರನ್ನು ಹೇಗಾದರೂ ಮಾಡಿ ಆರ್‌ಸಿಬಿ ಖರೀದಿಸಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಕವಿರಾಜ್ಇ ಅವರಂತೆಯೇ ಈ ಸಲ ಕಪ್ ನಮ್ಮದು ಎಂದುಕೊಂಡಿದ್ದರು. ಆದರೆ ಎಂದಿನಂತೆ ಬೆಂಗಳೂರು ತಂಡದ ಮ್ಯಾನೆಜ್ಮೆಂಟ್ ಎಲ್ಲರನ್ನು ನಿರಾಸೆ ಮಾಡಿದೆ. ಎಂದಿನಂತೆ ತಮ್ಮ ಇಷ್ಟಾನುಸಾರ ತಂಡವನ್ನು ಆಯ್ಕೆ ಮಾಡಿದೆ. ಇನ್ನೇನಿದ್ದರೂ ಆರ್.ಸಿ.ಬಿ ತಂಡವನ್ನು ಆ ದೇವರೇ ಕಾಪಾಡಬೇಕು


Click it and Unblock the Notifications











