ರಸಪ್ರಶ್ನೆ: ಈ 10 ಕನ್ನಡ ನಟರ ಪ್ರಥಮ ಚಿತ್ರ ಯಾವುದು? ಸರಿಯಾದ ಉತ್ತರ ನೀಡಬಲ್ಲಿರಾ?
ಕನ್ನಡ ಚಿತ್ರರಂಗ ಈ ವರ್ಷದ ಅತಿ ಯಶಸ್ವಿ ಚಿತ್ರರಂಗ ಎಂಬ ಖ್ಯಾತಿಯನ್ನು ಗಳಿಸಿದೆ. ವರ್ಷದ ಆರಂಭದಲ್ಲಿ ಶುರುವಾದ ಕನ್ನಡ ಚಿತ್ರಗಳ ಯಶಸ್ಸಿನ ಓಟ ವರ್ಷದುದ್ದಕ್ಕೂ ಮುಂದುವರಿದಿದೆ. ಸ್ಟಾರ್ ನಟರ ಚಿತ್ರಗಳು ಮಾತ್ರವಲ್ಲದೆ ಯುವ ನಟರ ಚಿತ್ರಗಳೂ ಸಹ ಈ ವರ್ಷ ಸದ್ದು ಮಾಡಿವೆ.
ಭಿನ್ನ ವಿಭಿನ್ನ ಕಥಾಹಂದರವನ್ನೊಳಗೊಂಡ ಚಿತ್ರಗಳನ್ನು ನೀಡಿದ ಕನ್ನಡ ಚಿತ್ರರಂಗ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರರಂಗವೆನಿಸಿಕೊಂಡಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್, ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777, ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿವೆ. ಯಶ್ ಅಭಿನಯದ ಕೆಜಿಎಫ್ 2 ಚಿತ್ರ 1200+ ಕೋಟಿ ಗಳಿಸಿ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾವಾಗಿ ಹೊರಹೊಮ್ಮಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಕಾಂತಾರ ಚಿತ್ರದ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಮುನ್ನೂರು ಕೋಟಿ ಕ್ಲಬ್ ಸೇರಿರುವ ಕಾಂತಾರ ಮತ್ತೊಮ್ಮೆ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ.

ಹೀಗೆ ಈ ವರ್ಷ ಚಂದನವನದ ಚಿತ್ರಗಳು ಅಬ್ಬರಿಸುತ್ತಿದ್ದು, ರಾಜ್, ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್ ಸಮಯದಲ್ಲಿ ಮಿಂಚುತ್ತಿದ್ದ ಹಾಗೆ ಕನ್ನಡ ಚಿತ್ರರಂಗ ಈ ವರ್ಷವೂ ಹೆಸರು ಮಾಡಿದೆ. ಹೀಗೆ ಸದ್ಯ ಅಬ್ಬರಿಸುತ್ತಿರುವ ಕನ್ನಡ ಚಿತ್ರರಂಗದ ಈ ತಲೆಮಾರಿನ ನಟರು 'ತೆರೆ ಮೇಲೆ ಕಾಣಿಸಿಕೊಂಡ' ಮೊದಲ ಚಿತ್ರ ಯಾವುದು ಎಂಬುದನ್ನು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ತಿಳಿಸಲು ಪ್ರಯತ್ನಿಸಿ..


Click it and Unblock the Notifications











