twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್ ಭೀತಿ, ಚಿತ್ರಮಂದಿರ ಬಂದ್: ಚಿತ್ರೋದ್ಯಮಕ್ಕೆ ಭಾರಿ ನಷ್ಟ

    |

    ಕೊರೊನಾ ವೈರಸ್ ಸೋಂಕು ವ್ಯಾಪಕವಾಗ ಹರಡುವ ಭೀತಿಯಿಂದ ಸರ್ಕಾರದ ಸೂಚನೆಯಂತೆ ಮಾಲ್ ಮತ್ತು ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ದೇಶದಾದ್ಯಂತ ಎಲ್ಲ ಕಡೆಯೂ ಪ್ರದರ್ಶನ ರದ್ದು ಮಾಡಿರುವುದಾಗಿ ಪಿವಿಆರ್ ಸಿನಿಮಾಸ್ ತಿಳಿಸಿತ್ತು.

    ಚಿತ್ರತಂಡಗಳು ಎಂದಿನಂತೆ ಚಿತ್ರೀಕರಣ ಮುಂದುವರಿಸಲು ನಿರ್ಧರಿಸಿವೆ. ಆದರೆ ಶೂಟಿಂಗ್‌ಗೆ ಅಗತ್ಯ ಸೌಲಭ್ಯಗಳ ಕೊರತೆ ಎದುರಾಗುವುದರಿಂದ ಅನೇಕ ಚಿತ್ರಗಳ ಶೂಟಿಂಗ್‌ಗೆ ತೊಂದರೆಯಾಗುವ ಸಾಧ್ಯತೆ ಇದೆ. ಇನ್ನು ಕೆಲವು ಚಿತ್ರತಂಡಗಳು ಈಗಾಗಲೇ ಚಿತ್ರೀಕರಣ ಸ್ಥಗಿತಗೊಳಿಸಿವೆ. ವಿದೇಶಗಳ ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ. ಚಿತ್ರೀಕರಣ ಸ್ಥಗಿತಗೊಳಿಸುವಂತೆ ವಾಣಿಜ್ಯ ಮಂಡಳಿ ಕಡೆಯಿಂದ ಯಾವುದೇ ಸೂಚನೆ ನೀಡಿಲ್ಲ.

    ಉದ್ಯಮ ನಂಬಿದವರ ಗತಿ...?

    ಉದ್ಯಮ ನಂಬಿದವರ ಗತಿ...?

    ಕಲಾವಿದರು, ತಂತ್ರಜ್ಞರು, ಸಹಾಯಕರು, ಬರಹಗಾರರು, ಪ್ರದರ್ಶಕರು ಸೇರಿದಂತೆ ಬೃಹತ್ ಸಂಖ್ಯೆಯ ಸಮುದಾಯ ಚಿತ್ರೋದ್ಯಮವನ್ನು ಜೀವನಕ್ಕೆ ಅವಲಂಬಿಸಿದ್ದಾರೆ. ಆದರೆ ಇಡೀ ಉದ್ಯಮದ ಚಟುವಟಿಕೆಯೇ ಬಹುತೇಕ ಸ್ಥಗಿತಗೊಳ್ಳುವುದರಿಂದ ಅವರ ಆದಾಯದ ಮೂಲವೇ ಬಂದ್ ಆಗುತ್ತಿದೆ. ಇದರಿಂದ ದಿನಗೂಲಿ ಹಾಗೂ ಕಡಿಮೆ ಭತ್ಯೆ ಪಡೆದುಕೊಳ್ಳುವ ಉದ್ಯಮದ ಸಿಬ್ಬಂದಿ ಪರಿಸ್ಥಿತಿ ಶೋಚನೀಯವಾಗುವ ಅಪಾಯ ಎದುರಾಗಿದೆ.

    70 ಕೋಟಿ ರೂ. ನಷ್ಟ

    70 ಕೋಟಿ ರೂ. ನಷ್ಟ

    ರಾಜ್ಯದಲ್ಲಿ ಸರ್ಕಾರದ ಆದೇಶದಂತೆ ಎಲ್ಲ ಕಡೆ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನ ರದ್ದುಗೊಳಿಸುತ್ತಿವೆ. ಇನ್ನೂ ಒಂದು ವಾರ ಎಲ್ಲ ಚಿತ್ರಮಂದಿರಗಳನ್ನೂ ಸ್ಥಗಿತ ಮಾಡುವಂತೆ ಸರ್ಕಾರ ಸೂಚಿಸಿದೆ. ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ಸುಮಾರು 70 ಕೋಟಿ ರೂ. ನಷ್ಟವಾಗಲಿದೆ.

    ಚಿತ್ರ ಬಿಡುಗಡೆ ಮಾಡುವಂತಿಲ್ಲ

    ಚಿತ್ರ ಬಿಡುಗಡೆ ಮಾಡುವಂತಿಲ್ಲ

    ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್‌ಗಳನ್ನು ಹೊರತುಪಡಿಸಿ ಸುಮಾರು 650 ಏಕ ಪರದೆಯ ಚಿತ್ರಮಂದಿರಗಳಿವೆ. ಹಾಗೆಯೇ 60ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಿವೆ. ಇವೆಲ್ಲವನ್ನೂ ಈಗ ಬಂದ್ ಮಾಡಲಾಗಿದೆ. ಕನ್ನಡದಲ್ಲಿ ಪ್ರತಿ ವಾರ ಸರಾಸರಿ 4-5 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈಗ ಬಿಡುಗಡೆಯಾಗಿರುವ ಚಿತ್ರಗಳ ಪ್ರದರ್ಶನ ರದ್ದಾಗಿದ್ದರೆ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಹಲವು ದಿನಗಳವರೆಗೆ ಕಾಯುವುದು ಅನಿವಾರ್ಯ.

    ಸರ್ಕಾರಗಳಿಗೂ ತೆರಿಗೆ ನಷ್ಟ

    ಸರ್ಕಾರಗಳಿಗೂ ತೆರಿಗೆ ನಷ್ಟ

    ಚಿತ್ರಮಂದಿರಗಳ ಸ್ಥಗಿತದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೂ ಆದಾಯ ನಷ್ಟ ಉಂಟಾಗಲಿದೆ. ಒಂದು ಟಿಕೆಟ್ ಮಾರಾಟದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಶೇ 18ರಷ್ಟು ಜಿಎಸ್‌ಟಿ ಪಾವತಿಯಾಗುತ್ತದೆ. ಈಗ ಚಿತ್ರಮಂದಿರಗಳನ್ನು ಬಂದ್ ಮಾಡಿರುವುದರಿಂದ ಪ್ರತಿ ದಿನ ಸರ್ಕಾರಗಳಿಗೆ 15 ಲಕ್ಷಕ್ಕೂ ಹೆಚ್ಚು ತೆರಿಗೆ ನಷ್ಟವಾಗುವ ಸಾಧ್ಯತೆ ಇದೆ.

    ಮಾಲೀಕರಿಗೆ ನಷ್ಟ

    ಮಾಲೀಕರಿಗೆ ನಷ್ಟ

    ಚಿತ್ರಮಂದಿರಗಳು ಕಾರ್ಯನಿರ್ವಹಿಸದ ಕಾರಣ ಚಿತ್ರ ಪ್ರದರ್ಶಕರಿಗೆ ತೀವ್ರ ನಷ್ಟ ಉಂಟಾಗಲಿದೆ. ವಾರಕ್ಕೆ ಒಂದು ಚಿತ್ರಮಂದಿರದಿಂದ 60 ಸಾವಿರದಿಂದ 1 ಲಕ್ಷದವರೆಗೂ ನಷ್ಟ ಉಂಟಾಗಲಿದೆ. ನಿರ್ಮಾಪಕರು, ಚಿತ್ರ ವಿತರಕರು ಕೂಡ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    English summary
    Kannada film industry may face about Rs 70 crore in a week due to shut down of theatres.
    Saturday, March 14, 2020, 15:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X