ಬದಲಾಯ್ತು ಕನ್ನಡ ಚಿತ್ರರಂಗದ ನಡೆ: No Star War, No Cold War!
ಬದಲಾವಣೆ ಜಗದ ನಿಯಮ. ಎಲ್ಲರೂ ಒಂದಲ್ಲಾ ಒಂದು ದಿನ ಬದಲಾಗುತ್ತಾರೆ. ಈ ಮಾತು ಕನ್ನಡ ಚಿತ್ರರಂಗದಲ್ಲಿ ಅಕ್ಷರಶಃ ನಿಜವಾಗಿದೆ. ಅಷ್ಟಕ್ಕೂ ಬದಲಾವಣೆ ಆಗುವಂತಹದ್ದು ಏನಿತ್ತು ಎನ್ನುವ ಪ್ರಶ್ನೆ ಮೂಡಬಹುದು. ಸ್ವಲ್ಪ ಸಮಯ ಹಿಂದೆ ತಿರುಗಿ ನೋಡಿದರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.
Recommended Video
ಎಲ್ಲಾ ರಂಗದ ಹಾಗೆ ಕನ್ನಡ ಚಿತ್ರ ರಂಗದಲ್ಲೂ ಸ್ಪರ್ಧೆ ಇತ್ತು. ಇದು ಒಮ್ಮೊಮ್ಮೆ ಅತಿರೇಖ ಆಗಿರುವ ಉದಾಹರಣೆಗಳು ಕೂಡ ಇವೆ. ಕನ್ನಡದಲ್ಲಿ ಆಗಾಗ ಸ್ಟಾರ್‌ವಾರ್, ನಟಿಯರ ನಡುವಿನ ಕೋಲ್ಡ್ ವಾರ್ ಸದ್ದು ಮಾಡುತ್ತಲೇ ಇರುತ್ತದೆ. ಅಷ್ಟೆ ಯಾಕೆ ಇತ್ತೀಚೆಗೆ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಮೊದಲ ದಿನ ರಿಲೀಸ್ ಆಗಲೇ ಇಲ್ಲ. ಇದರ ಹಿಂದೆ ಸಿನಿಮಾ ರಂಗದವರ ಕೈವಾಡ ಇದೆ ಎನ್ನಲಾಗಿತ್ತು.
ಆದರೆ ಈಗ ಇದೆಲ್ಲವನ್ನೂ ಬಿಟ್ಟು ನಾವೆಲ್ಲ ಒಂದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಅಲ್ಲದೆ ಒಬ್ಬರ ಬೆನ್ನಿಗೆ ಮತ್ತೊಬ್ಬರು ನಿಂತು ಸಿನಿಮಾಗಳಿಗೆ, ಕಲಾವಿದರಿಗೆ ಸಾಥ್ ನೀಡುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಒಂದು ಉತ್ತಮವಾದ ಬೆಳವಣಿಗೆ ಎಂದೇ ಹೇಳಬಹುದು.

ಬಡವ ರಾಸ್ಕಲ್ ಕಾರ್ಯಕ್ರಮದಲ್ಲಿ ಕಲಾವಿದರ ದಂಡು!
ಕನ್ನಡದಲ್ಲಿ ಸದ್ಯ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಇದೇ ಹಿನ್ನೆಲೆ ಚಿತ್ರ ತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಚಿತ್ರದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಗಮನ ಚಿತ್ರದ ಕಂಟೆಂಟ್ ಅಲ್ಲ. ಕಾರ್ಯಕ್ರಮಕ್ಕೆ ಬಂದಿದ್ದ ತಾರೆಯರ ದಂಡು. ಚಿತ್ರದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಭಾಗಿ ಆಗಿದ್ದರು. ಸಾಮಾನ್ಯವಾಗಿ ಒಂದು ಚಿತ್ರದ ಕಾರ್ಯಕ್ರಮ ಅಂದರೆ ಆ ಚಿತ್ರದ ಕಲಾವಿದರು ಹಾಜರಿರುತ್ತಾರೆ. ಹೆಚ್ಚು ಅಂದರೆ ಒಬ್ಬ ವಿಶೇಷ ಅತಿಥಿ ಇರುತ್ತಾರೆ. ಆದರೆ ಈ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲಾ ಈ ಚಿತ್ರದ ಕಲಾವಿದರಲ್ಲ. ಆದರೆ ಚಿತ್ರ ತಂಡಕ್ಕೆ ತಮ್ಮ ಸಪೋರ್ಟ್ ನೀಡಲು ಹಲವರು ಬಂದಿದ್ದರು. ನಟ ಧನಂಜಯ್, ಅಮೃತಾ ಅಯ್ಯಂಗಾರ್, ತಾರಾ, ರಂಗಾಯಣ ರಘು, ಜೊತೆಗೆ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ದುನಿಯಾ ವಿಜಯ್, ನಿರ್ದೇಶಕ ಪನ್ನಗ ಭರಣ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅಷ್ಟೆ ಅಲ್ಲ ನಟ ಶಿವರಾಜ್ ಕುಮಾರ್ ಮತ್ತು ಹಂಸಲೇಖ ಅವರು ಕೂಡ ಈ ಕಾರ್ಯಕ್ರಮಕ್ಕೆ ಬಂದು 'ಬಡವ ರಾಸ್ಕಲ್' ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

'ಸಲಗ'ನಿಗೆ ಅಪ್ಪು, ಉಪ್ಪಿ, ಶಿವಣ್ಣ ಸಾಥ್!
ನಟ ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು. ಈ ಚಿತ್ರದ ನಾಯಕ ದುನಿಯಾ ವಿಜಯ್. ಆದರೆ ಅಲ್ಲು ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ನೆರೆದಿದ್ದರು. ಖುಷಿಯಿಂದ ಸಲಗ ಚಿತ್ರಕ್ಕೆ ಶುಭ ಕೋರಿದ್ದರು. ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಭಾಗಿ ಆಗಿದ್ದರು. ಇದೇ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ಪುನೀತ್ ರಾಜ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದರು. ಆಗ ಶಿವಣ್ಣ ವೇದಿಕೆ ಮೇಲೆ ಸ್ಟೈಲ್ ಆಗಿ ನಡೆದು ಬಂದಿದ್ದರು. ಈ ಕಾರ್ಯಕ್ರಮ ಹಲವು ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿ ಆಗಿತ್ತು.

ಭಜರಂಗಿ2 ಕಾರ್ಯಕ್ರಮದಲ್ಲಿ ಯಶ್, ಪುನೀತ್!
ಇನ್ನು ನಟ ಶಿವರಾಜ್‌ಕುಮಾರ್ ಅವರು ಅಭಿನಯದ ಭಜರಂಗಿ2 ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕೂಡ ಸ್ಟಾರ್ ನಟರ ದಂಡು ಮಿಂಚಿತ್ತು. ನಟ ಪುನೀರ್ ರಾಜ್‌ಕುಮಾರ್, ಯಶ್ ಭಾಗಿ ಆಗಿದ್ದರು. ವೇದಿಕೆ ಮೇಲೆ ಯಶ್, ಪುನೀತ್, ಶಿವರಾಜ್‌ಕುಮಾರ್ ಡ್ಯಾನ್ಸ್ ಮಾಡಿದ್ದು ಎಲ್ಲರಿಗೂ ಇಷ್ಟ ಆಗಿತ್ತು. ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ, ಸಂತೋಷ್ ಆನಂದ್ ರಾಮ್, ದಿನಕರ್ ತೂಗುದೀಪ್ ಕೂಡ ಭಾಗಿ ಆಗಿದ್ದರು.

'ಏಕ್ ಲವ್ ಯಾ' ವೇದಿಕೆಯಲ್ಲಿ ಒಂದಾದ ನಾಯಕಿಯರು!
ಇನ್ನು ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಬರುತ್ತಿರುವ 'ಏಕ್ ಲವ್ ಯಾ' ಚಿತ್ರದ ಕಾರ್ಯಕ್ರಮಕ್ಕೂ ಚಿತ್ರರಂಗದ ಹಲವರು ಹಾಜರಾಗಿದ್ದರು. ಇಲ್ಲಿ ಹೆಚ್ಚಾಗಿ ನಾಯಕ ನಟಿಯರು ಭಾಗಿ ಆಗಿದ್ದರು. ನಟಿಯರ ನಡುವೆ ಕೋಲ್ಡ್ ವಾರ್ ಇದೆಯೋ ಇಲ್ಲವೋ. ಆದರೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಲ್ಲರೂ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ನಟಿ ಅತಿದಿ ಪ್ರಭುದೇವ, ನಿಶ್ವಿಕಾ ನಾಯ್ಡು, ಮೇಘನಾ ಗಾವ್ಕಂರ್ ಭಾಗಿ ಆಗಿದ್ದರು.


Click it and Unblock the Notifications











