»   » ಕೊನೆಯ ಹಂತದ ಚಿತ್ರೀಕರಣದಲ್ಲಿ 'ಜಗತ್ ಕಿಲಾಡಿ'

ಕೊನೆಯ ಹಂತದ ಚಿತ್ರೀಕರಣದಲ್ಲಿ 'ಜಗತ್ ಕಿಲಾಡಿ'

Posted By:
Subscribe to Filmibeat Kannada

ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್.ಆರ್.ರಮೇಶ್ ಬಾಬು ನಿರ್ಮಿಸುತ್ತಿರುವ 'ಜಗತ್ ಕಿಲಾಡಿ' ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತಿಂಗಳ ಹತ್ತರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಅದು ಮುಗಿದರೆ 'ಜಗತ್ ಕಿಲಾಡಿ' ಚಿತ್ರದ ಎರಡು ಹಾಡುಗಳ ಶೂಟಿಂಗ್ ಮಾತ್ರ ಬಾಕಿ.

ಒಂದು ಹಾಡಿನ ಚಿತ್ರೀಕರಣ ತಲಕಾಡಿನಲ್ಲಿ, ಮತ್ತೊಂದು ಹಾಡಿನ ಚಿತ್ರೀಕರಣ ಕೊಡಚಾದ್ರಿಯಲ್ಲಿ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Kannada Film 'Jagath Khiladi' Final schedule shooting

ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿನಾಯಕ ರಾಮ ಕಲಗಾರು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ. ವಿ.ಮನೋಹರ್ ಹಾಗೂ ಉಮೇಶ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ವಿಶ್ವ ಅವರ ಸಂಕಲನ 'ಜಗತ್ ಕಿಲಾಡಿ' ಚಿತ್ರಕ್ಕಿದೆ.

ನಿರಂಜನ್ ಕುಮಾರ್ ಶೆಟ್ಟಿ, ರಂಗಾಯಣ ರಘು, ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರು 'ಜಗತ್ ಕಿಲಾಡಿ' ಚಿತ್ರದ ತಾರಾಬಳಗದಲ್ಲಿದ್ದಾರೆ.

English summary
Kannada Film 'Jagath Khiladi' Final schedule shooting to start by 10th of August.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada