twitter
    For Quick Alerts
    ALLOW NOTIFICATIONS  
    For Daily Alerts

    ಅಪರೂಪದ ಸಿನಿಮಾಗಳ ಕುರಿತ ಕೃತಿ 'ಗಾಂಧಿ ಸೀಟು'

    By Rajendra
    |

    'ಕನ್ನಡಪ್ರಭ' ಪತ್ರಿಕೆಯ ಸಿನಿಮಾ ವರದಿಗಾರ ಆರ್. ಕೇಶವಮೂರ್ತಿ ಅವರ ಚೊಚ್ಚಲ ಕೃತಿ 'ಗಾಂಧಿ ಸೀಟು' ಲೋಕಾರ್ಪಣೆಗೆ ಸಿದ್ಧವಾಗಿದೆ. ಕಳೆದ ಕೆಲವರ್ಷಗಳಿಂದ ಅವರು 'ಕನ್ನಡಪ್ರಭ'ದ ಸಾಪ್ತಾಹಿಕ ಪುರವಣೆ 'ಖುಷಿ'ಯಲ್ಲಿ ಬರೆದ ಲೇಖನಗಳ ಸಂಗ್ರಹ ಈಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

    ಇದೇ ಡಿಸೆಂಬರ್ 22ರ ಭಾನುವಾರ ಬೆಳಿಗ್ಗೆ 10.30ಕ್ಕೆ ಶಿವಾನಂದ ಸರ್ಕಲ್ ಬಳಿ ಇರುವ ಚಿತ್ರಕಲಾ ಪರಿಷತ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜಾಗತಿಕ ಸಿನಿಮಾ ಬರಹಗಳ ಪುಸ್ತಕ ಅಪರೂಪ ಕೃತಿ ಇದು.

    Gandhi Seetu
    ಇನ್ನು ಈ ಕೃತಿಯ ಬಗ್ಗೆ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಪುಸ್ತಕ ಓದ್ತಾ ಓದ್ತಾ ಪಾಪ್ ಕಾರ್ನ್ ಮುಗ್ದಿದ್ದೇ ಗೊತ್ತಾಗ್ಲಿಲ್ಲ. ಎಲ್ಲೂ ಇಂಟರ್ ವಲ್ ಬೇಕೆನಿಸ್ಲಿಲ್ಲ. ನಿಮ್ಮ ನೆಚ್ಚಿನ ಚಿತ್ರಗಳನ್ನು ಇಲ್ಲೂ ಓದಿ ನೋಡಬಹುದು" ಎಂದಿದ್ದಾರೆ.

    ಖ್ಯಾತ ಚಲನಚಿತ್ರ ನಟ ಮತ್ತು ನಿರ್ದೇಶಕ ಪ್ರಕಾಶ್ ರೈ ಬುಕ್ ಬಿಡುಗಡೆ ಮಾಡಿದರೆ, ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾದ ರಾಧಾಕೃಷ್ಣ ಎಸ್. ಭಡ್ತಿ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ.

    ಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ ಕೇವಲ ವರ್ಣರಂಜಿತ ಬರಹವೆಂಬ ಭಾವನೆ ಇದೆ. ಆದರೆ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ವಿವಿಧ ಆಯಾಮಗಳ ಅನುಭೂತಿ ಸಿನಿಮಾ ಬರಹದಲ್ಲೂ ಸಾಧ್ಯವೆಂದು ಈ ಕೃತಿ ರುಜುವಾತು ಮಾಡಿದೆ. ಕೃತಿ ಓದುತ್ತಾ ಹೋರಟರೆ ಜಗತ್ತಿನ ಸಿನಿಮಾಗಳಲ್ಲಿನ ಒಂದು ಪಯಣ ನಿಮಗೆ ಗ್ಯಾರಂಟಿ ಎನ್ನುತ್ತದೆ ಕೃತಿಯ ಬೆನ್ನುಡಿ.

    ದೇಶ, ವಿದೇಶಗಳ ಹತ್ತಾರು ಕ್ಲಾಸಿಕ್ ಸಿನಿಮಾಗಳ ಒಳಗೊಂಡ 'ಗಾಂಧಿ ಸೀಟು' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದೆ. ಹೋಗಿ ಬನ್ನಿ ಒಂದು, ಈ ವಾರಾಂತ್ಯವನ್ನು ಪುಸ್ತಕ ಓದುತ್ತಾ ಎಂಜಾಯ್ ಮಾಡಿ. (ಒನ್ಇಂಡಿಯಾ ಕನ್ನಡ)

    English summary
    Kannada film journalist R Keshavamurthy of Kannada Prabha is all set to release his first book 'Gandhi Seetu'. The book is a collection of his column writings which has been appearing in the Sunday supplement 'Khushi' of the newspaper for the last few years.
    Saturday, December 21, 2013, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X