ಆಗಸ್ಟ್ 9ಕ್ಕೆ 'ಕುರುಕ್ಷೇತ್ರ' ಎರಡೇ ಭಾಷೆಯಲ್ಲಿ ರಿಲೀಸ್
ಬಹು ನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಇದೆ ತಿಂಗಳು ವರಮಹಾಲಕ್ಷ್ಮಿ ದಿನದ ದಿನ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಬಹು ಭಾಷೆಯಲ್ಲಿ ತೆರೆಗೆ ಬರಲು ಪ್ಲಾನ್ ಮಾಡಿದ್ದ ಚಿತ್ರತಂಡವೀಗ, ಮೊದಲು ಎರಡೇ ಭಾಷೆಯಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿದೆ.
ಈ ಮೊದಲು ಕುರುಕ್ಷೇತ್ರ ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ ಎಂದು ಹೇಳಿ ಪ್ಲಾನ್ ರಿಲೀಸ್ ಗೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿತರಕ ರಾಕ್ ಲೈನ್ ವೆಂಕಟೇಶ್ ಆಗಸ್ಟ್ 9ಕ್ಕೆ ಕುರುಕ್ಷೇತ್ರ ಎರಡೇ ಭಾಷೆಯಲ್ಲಿ ತೆರೆಗೆ ಬರುತ್ತಿದೆ ಎಂದು ಹೇಳಿದ್ದಾರೆ.
ಅಂದ್ಹಾಗೆ ವರಮಹಾಲಕ್ಷ್ಮಿಗೆ ಕನ್ನಡ ಮತ್ತು ತೆಲುಗು ಭಾಷೆಯ ಕುರುಕ್ಷೇತ್ರ ಮಾತ್ರ ತೆರೆಗೆ ಬರುತ್ತಿದೆ. ಇನ್ನು ಉಳಿದಂತೆ ತಮಿಳು ಮತ್ತು ಮಲಯಾಳಂ ವರ್ಷನ್ ನ ಕುರುಕ್ಷೇತ್ರ ಒಂದು ವಾರದ ನಂತರ ತೆರೆಗೆ ತರಲು ಪ್ಲಾನ್ ಮಾಡಿದೆ ಚಿತ್ರತಂಡ. ಇನ್ನು ಹಿಂದಿ ವರ್ಷನ್ ನ ಕುರುಕ್ಷೇತ್ರ ಮತ್ತಷ್ಟು ತಡವಾಗುವ ಸಾಧ್ಯತೆ ಇದೆಯಂತೆ.

ಹಿಂದಿ ವಿತರಕರ ಸೂಚನೆ ಮೇರೆಗೆ ಹಿಂದಿಯಲ್ಲಿ ತಡವಾಗಿ ದರ್ಶನವಾಗಲಿದೆ ಕುರುಕ್ಷೇತ್ರ. ಅಂದ್ರೆ ಆಗಸ್ಟ್ ತಿಂಗಳ ಕೊನೆಯಲ್ಲಿ ಹಿಂದಿ ಕುರುಕ್ಷೇತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ಅಭಿಮಾನಿಗಳ ಒತ್ತಾದಯ ಮೇರೆಗೆ ಆನ್ ಲೈನ ನಲ್ಲಿ ಕುರುಕ್ಷೇತ್ರ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಈಗಾಗಲೆ ಬುಕ್ಕಿಂಗ್ ಆರಂಭವಾಗಿದ್ದು ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ.


Click it and Unblock the Notifications