10ನೇ ಬೆಂಗಳೂರು ಚಿತ್ರೋತ್ಸವಕ್ಕೆ ಟಿಕೆಟ್ ಪಡೆದುಕೊಂಡ ಕನ್ನಡ ಚಿತ್ರಗಳು
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 22 ರಿಂದ ಆರಂಭವಾಗುತ್ತಿದೆ. 60 ದೇಶಗಳ ಸುಮಾರು 200 ಸಿನಿಮಾಗಳು ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದೆ.
ಇವುಗಳಲ್ಲಿ ಕನ್ನಡದ ಹಲವು ಚಿತ್ರಗಳು ಪ್ರದರ್ಶನವಾಗಲಿದೆ. ಏಷಿಯನ್ ಸಿನಿಮಾ ವಿಭಾಗ, ಭಾರತೀಯ ಸಿನಿಮಾ ವಿಭಾಗ, ಕನ್ನಡ ಸಿನಿಮಾ ವಿಭಾಗ ಹಾಗೂ ಅತ್ಯುತ್ತಮ ಮನರಂಜನೆ ಚಿತ್ರಗಳು ವಿಭಾಗಗಳಲ್ಲಿ ಸ್ಯಾಂಡಲ್ ವುಡ್ ಸಿನಿಮಾಗಳು ಅವಕಾಶ ಪಡೆದುಕೊಂಡಿವೆ.
ಈ ವರ್ಷ ಬೆಂಗಳೂರು ಚಿತ್ರೋತ್ಸವದಲ್ಲಿ ಅವಕಾಶ ಪಡೆದುಕೊಂಡಿರುವ ಕನ್ನಡ ಚಿತ್ರಗಳು ಯಾವುದು ಮತ್ತು ಯಾವ ವಿಭಾಗದಲ್ಲಿ ಅವು ಸ್ಪರ್ಧೆ ಮಾಡಲಿದೆ ಎಂಬ ಕುತೂಹಲ ಕಾಡುವುದು ಸಹಜ. ಈ ಕುತೂಹಲಕ್ಕೆ ಉತ್ತರ ಇಲ್ಲಿದೆ. 10ನೇ ಬೆಂಗಳೂರು ಫೆಸ್ಟಿವಲ್ ನಲ್ಲಿ ಯಾವೆಲ್ಲ ಸಿನಿಮಾ ಪ್ರದರ್ಶನವಾಗುತ್ತಿದೆ ಎಂಬ ಸಂಪೂರ್ಣ ವಿವರ ತಿಳಿದುಕೊಳ್ಳಿ....

ಭಾರತೀಯ ವಿಭಾಗದಲ್ಲಿ ಒಂದೇ ಕನ್ನಡ ಸಿನಿಮಾ
ಏಷಿಯನ್ ವಿಭಾಗದಲ್ಲಿ ಯಾವುದೇ ಕನ್ನಡ ಸಿನಿಮಾ ಅವಕಾಶ ಪಡೆದುಕೊಂಡಿಲ್ಲ. ಆದ್ರೆ, peddayi ಎಂಬು ತುಳು ಸಿನಿಮಾ ಸ್ಪರ್ಧೆ ಮಾಡುತ್ತಿದೆ. ಭಾರತೀಯ ಸಿನಿಮಾ ವಿಭಾಗದಲ್ಲಿ ಕನ್ನಡದ ಒಂದು ಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, 'ಹೆಬ್ಬೆಟ್ಟು ರಾಮಕ್ಕ' ಸ್ಪರ್ಧೆ ಮಾಡಿದೆ.

ಕನ್ನಡ ವಿಭಾಗದಲ್ಲಿ 12 ಸಿನಿಮಾಗಳು ಸ್ಪರ್ಧೆ
ಕನ್ನಡ ಸಿನಿಮಾ ವಿಭಾಗದಲ್ಲಿ ಒಟ್ಟು 12 ಕನ್ನಡ ಸಿನಿಮಾಗಳು ಸ್ಪರ್ಧೆ ನಡೆಸಲಿದೆ. ಟಿ.ಎಸ್ ನಾಗಾಭರಣ ನಿರ್ದೇಶನದ 'ಅಲ್ಲಮ', ಪಿ ಶೇಷಾದ್ರಿ ನಿರ್ದೇಶನ 'ಬೇಟಿ', ಶ್ರೀನಾಥ್ ವಸಿಷ್ಠ ನಿರ್ದೇಶನದ 'ಡಾ ಸುಖನ್ಯ', ನಂಜುಂಡೇ ಗೌಡ ನಿರ್ದೇಶನ 'ಹೆಬ್ಬೆಟ್ಟು ರಾಮಕ್ಕ', ಹಾಗೂ 'ಮೂಕ ಹಕ್ಕಿ', 'ಮೂಕ ನಾಯಕ', 'ಮಾರ್ಚ್ 22', 'ಮೂಡಲ ಸೀಮೆಯಲ್ಲಿ', 'ನೀರು ತಂದವರು', 'ರಿಸರ್ವೇಶನ್', 'ಶುದ್ಧಿ' ಹಾಗೂ 'ನೇಮೊದ ಬೂಳ್ಯ' (ತುಳು) ಸಿನಿಮಾ ಸ್ಥಾನ ಪಡೆದುಕೊಂಡಿದೆ.

ಸ್ಟಾರ್ ಗಳ ಚಿತ್ರಗಳು ಇವೆ
ಇನ್ನು ಮನರಂಜನ ಸಿನಿಮಾಗಳ ವಿಭಾಗದಲ್ಲಿ 8 ಕನ್ನಡ ಸಿನಿಮಾಗಳು ಸ್ಥಾನ ಪಡೆದುಕೊಂಡಿದೆ. ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ', ಸುದೀಪ್ 'ಹೆಬ್ಬುಲಿ', ದರ್ಶನ್ 'ತಾರಕ್', ಧ್ರುವ ಸರ್ಜಾ 'ಭರ್ಜರಿ', ಗಣೇಶ್ 'ಚಮಕ್', ಶಿವಣ್ಣ-ಶ್ರೀಮುರಳಿ 'ಮಫ್ತಿ', 'ಕಾಲೇಜ್ ಕುಮಾರ', ಹಾಗೂ 'ಒಂದು ಮೊಟ್ಟೆಯ ಕಥೆ' ಚಿತ್ರಗಳು ರೇಸ್ ನಡೆಸಲಿವೆ.

ಜಾಗತಿಕ ಚಿತ್ರಗಳ ಜೊತೆ ಪ್ರದರ್ಶನ
ಈ ಎಲ್ಲ ಚಿತ್ರಗಳು ಕಾಂಪಿಟೇಶನ್ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿದೆ. ಈ ಚಿತ್ರಗಳಷ್ಟೇ ಅಲ್ಲದೇ, ಜಗತ್ತಿನ ನೂರಾರು ಚಿತ್ರಗಳು ಚಲನಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿವೆ. ಬೇರೆ ಬೇರೆ ದೇಶದ, ಬೇರೆ ಬೇರೇ ಭಾಷೆಯ ಚಿತ್ರಗಳನ್ನ ಕೂಡ ನೋಡಬಹುದು.


Click it and Unblock the Notifications











