For Quick Alerts
  ALLOW NOTIFICATIONS  
  For Daily Alerts

  ಮಲ್ಟಿಫ್ಲೆಕ್ಸ್ ಗಳಲ್ಲಿ ಮಾತ್ರ ಮನಿ ಹನಿ ಶನಿ ತೆರೆಗೆ

  By Rajendra
  |

  ಬಹುಮುಖಿ ರಾಜೇಶ್ ಮೂರ್ತಿ ಅವರು 'ಮನಿ ಹನಿ ಶನಿ' ಚಿತ್ರವನ್ನು ಅಂದುಕೊಂಡಂತೆಯ ಮುಗಿಸಿ ಪ್ರದರ್ಶನದ ವ್ಯವಸ್ಥೆಯನ್ನು ಹಾಕಿದ ನಿಯಮದಂತೆ ಮಾಡುತ್ತಿದ್ದಾರೆ. 'ಮನಿ ಹನಿ ಶನಿ' ಕೇವಲ ಮಲ್ಟಿ ಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮಾತ್ರ ಈ ವಾರ (ಜು.19) ಬಿಡುಗಡೆ ಆಗುತ್ತಿದೆ.

  ಬೆಂಗಳೂರಿನಲ್ಲಿ 10 ಮಲ್ಟಿ ಫ್ಲೆಕ್ಸ್ ಗಳಲ್ಲಿ ಹಾಗೂ ಮಂಗಳೂರು ಹಾಗೂ ಮೈಸೂರು ತಲಾ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಭಾಗ್ಯ ಈ ವಾರ ಕಾಣುತ್ತಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ತಯಾರಾದ ಚಿತ್ರವೂ ಡಿಜಿಟಲ್ ವ್ಯವಸ್ಥೆಯಲ್ಲೇ ಪ್ರದರ್ಶನಗೊಳಿಸಬೇಕು ಎಂಬುದು ರಾಜೇಶ್ ಮೂರ್ತಿ ಅವರ ಹಂಬಲ ಆಗಿತ್ತು.

  ಕಥೆ, ಚಿತ್ರಕಥೆ, ಸಂಗೀತ, ಆರು ಹಾಡುಗಳಿಗೆ ಸಾಹಿತ್ಯ, ಸಂಕಲನ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ರಾಜೇಶ್ ಮೂರ್ತಿ ಅವರು ಕೇವಲ ಐದು ಪಾತ್ರಗಳನ್ನು ಇಟ್ಟುಕೊಂಡು ಕೆಲವು ಸಂಧರ್ಭಗಳನ್ನು ಹಲವು ಕೋನಗಳಲ್ಲಿ ಹಾಸ್ಯದ ಜೊತೆ ವಿವರಿಸುತ್ತಾ ಹೋಗುವುದು ಅವರು ಮಾಡಿರುವ ಹೊಸ ಪ್ರಯೋಗ.

  ಶೀಘ್ರವಾಗಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವವರು ರಾಜು, ಪ್ರಮೋದ್ ಹಾಗೂ ಕುಮಾರ್. ಹೆಸರಾಂತ ಎಚ್ ಎಂ ಕೆ ಮೂರ್ತಿ ಅವರ ಪುತ್ರ ರಾಜೇಶ್ ಮೂರ್ತಿ ಕಳೆದ 20 ವರ್ಷಗಳಿಂದ ಓಂ ಶ್ರೀ ಡಿಜಿ ಆಡಿಯೋ, ಮೀಡಿಯಾ ಸಂಸ್ಥೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

  ಮೋನಿಶ್ ನಾಗರಾಜ್, ಭಾವನಾ ರಾವ್, ಕಂಚನ್ ರಾಂಪ್ರಸಾದ್, ಆರ್ ಜೆ ಪೃಥ್ವಿ (ರೇಡಿಯೊ ಒನ್) ಹಾಗೂ ವಾಸು ದೀಕ್ಷಿತ್ 'ಮನಿ ಹನಿ ಶನಿ' ತಾರಾಗಣದಲ್ಲಿ ಇದ್ದಾರೆ. ಈ ಚಿತ್ರಕ್ಕೆ ರಾಜೇಶ್ ಮೂರ್ತಿ, ಜೋನ್ಸ್ ಅವರ ಸಂಗೀತವಿದೆ. (ಒನ್ಇಂಡಿಯಾ ಕನ್ನಡ)

  English summary
  Kannada movie Money Honey Shani, is all set to hit screens on July 19. The movie is directed and produced by Rajesh Murthy and has Bhavana Rao, Kanchan, Vasu Dixit, RJ Prtithvi and Mohnish Nagaraj in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X