For Quick Alerts
  ALLOW NOTIFICATIONS  
  For Daily Alerts

  ದೀಪಾವಳಿಗೆ ಸ್ಯಾಂಡಲ್ ವುಡ್ಡಲ್ಲಿ ಪಟಾಕಿ ಸೌಂಡಿಲ್ಲ

  By ಜೀವನರಸಿಕ
  |

  ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ ಎರಡು ಮೂರು ಸಿನಿಮಾಗಳು ರಿಲೀಸಾಗುತ್ತವೆ. ಅದರಲ್ಲೂ ಹಬ್ಬ ಹರಿದಿನ ಅಂದ್ರೆ ಸ್ಟಾರ್ ಸಿನಿಮಾಗಳು ರಿಲೀಸಾಗೋದು ಗ್ಯಾರಂಟಿ. ಆದರೆ ಈ ಬಾರಿ ಯಾಕೋ ಸ್ಯಾಂಡಲ್ ವುಡ್ ಸಾಲು ಸಾಲು ಸ್ಟಾರ್ ಸಿನಿಮಾಗಳಿಲ್ಲದೆ ದೀಪಾವಳಿ ಡಲ್ಲು ಹೊಡೀತಿದೆ.

  ದೀಪಾವಳಿ ಅಂದ್ರೆ ಆನೆಪಟಾಕಿಯ ತರಹ ಸಿಡಿಯುತ್ತಿದ್ದ ಸಿನಿಮಾಗಳು ತೆರೆಗೆ ಬರ್ತಿಲ್ಲ. ಸಾಮಾನ್ಯವಾಗಿ ಸಾಲು ಸಾಲು ರಜೆಗಳು ಬಂದಿದ್ದರೂ ಕನ್ನಡ ಚಿತ್ರಗಳು ಮಾತ್ರ ಯಾಕೋ ಏನೋ ಠುಸ್ ಪಟಾಕಿಯಂತಾಗಿವೆ.

  ರಜೆಗಳಿಲ್ಲದಿದ್ದಾಗ ವಾರಕ್ಕೆ ಮೂರು ನಾಲ್ಕು ಚಿತ್ರಗಳು ತೆರೆಕಾಣುತ್ತಿದ್ದವು. ಒಮ್ಮೆಮ್ಮೆ ಚಿತ್ರಮಂದಿರಗಳೇ ಸಿಗದೆ ಒದ್ದಾಡುವ ಪರಿಸ್ಥಿಯೂ ಉದ್ಭವವಾಗುತ್ತಿತ್ತು. ಈಗ ರಜೆಗಳಿದ್ದರೂ ಚಿತ್ರಗಳಿಲ್ಲ. ಇದೇನು ಕಥೆಯೋ ಏನೋ. ಸದ್ಯಕ್ಕೆ ತೆರೆಗೆ ಬರೋ ನಿರೀಕ್ಷೆ ಮೂಡಿಸಿದ ಸಿನಿಮಾಗಳನ್ನೊಮ್ಮೆ ನೋಡ್ತಾ ಹೋಗೋಣ.

  ರಾಜಾಹುಲಿ ಮಾತ್ರ ಸ್ಟಾರ್ ಚಿತ್ರ

  ರಾಜಾಹುಲಿ ಮಾತ್ರ ಸ್ಟಾರ್ ಚಿತ್ರ

  ದೀಪಾವಳಿ ಹಬ್ಬಕ್ಕೆ ಯಶ್ ಅಭಿನಯದ ರಾಜಾಹುಲಿ ಚಿತ್ರ ಮಾತ್ರ ಸ್ಟಾರ್ ಚಿತ್ರ.

  ಮಯೂರ್ ಚಿತ್ರಕ್ಕೆ ಅಂತಹಾ ನಿರೀಕ್ಷೆ ಏನೂ ಇಲ್ಲ

  ಮಯೂರ್ ಚಿತ್ರಕ್ಕೆ ಅಂತಹಾ ನಿರೀಕ್ಷೆ ಏನೂ ಇಲ್ಲ

  ಇನ್ನು ಮಯೂರ್ ಪಟೇಲ್ ಅಭಿನಯದ 'ಸ್ಲಂ' ಚಿತ್ರ ರಿಲೀಸಾಗ್ತಿದ್ರು ಚಿತ್ರ ಅಂತಹಾ ನಿರೀಕ್ಷೆಯನ್ನೇನೂ ಮೂಡಿಸಿಲ್ಲ.

  ಶಿವರಾಜ್ ಕುಮಾರ್ ಚಿತ್ರವೂ ಇಲ್ಲ

  ಶಿವರಾಜ್ ಕುಮಾರ್ ಚಿತ್ರವೂ ಇಲ್ಲ

  ಶಿವಣ್ಣ ಅಭಿನಯದ ಭಜರಂಗಿ ರಿಲೀಸಾಗಿದ್ರೆ ಚನ್ನಾಗಿರ್ತಿತ್ತು ಅನ್ನೋ ಅಭಿಮಾನಿಗಳ ಆಸೆಯೂ ಮಣ್ಣುಪಾಲಾಗಿದೆ.

  ಸ್ವೀಟಿ ಚಿತ್ರ ಯಾಕೋ ಸ್ವಲ್ಪ ತಡವಾಯಿತು

  ಸ್ವೀಟಿ ಚಿತ್ರ ಯಾಕೋ ಸ್ವಲ್ಪ ತಡವಾಯಿತು

  ರಾಧಿಕಾ ಕುಮಾರಸ್ವಾಮಿ ಹಾಗೂ ಆದಿತ್ಯ ಜೋಡಿಯ 'ಸ್ವೀಟಿ' ಬರ್ಬೇಕಿತ್ತೂ ಆದರೂ ಯಾಕೋ ಹಬ್ಬ ಮುಗಿದಮೇಲೆ ಸ್ವೀಟಿ ಬರ್ತಿದೆ.

  ಅಗ್ರಜ ಚಿತ್ರವೂ ದೀಪಾವಳಿಗೆ ಸಿಡಿಯುತ್ತಿಲ್ಲ

  ಅಗ್ರಜ ಚಿತ್ರವೂ ದೀಪಾವಳಿಗೆ ಸಿಡಿಯುತ್ತಿಲ್ಲ

  ಜಗ್ಗೇಶ್ ಅಭಿನಯದ, ಚಾಲೆಂಜಿಂಗ್ ಸ್ಟಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಗ್ರಜ ಕೂಡ ದೀಪಾವಳಿಗೆ ಸಿಡಿಯುತ್ತಿಲ್ಲ.

  ಅಂಬರ ಕೂಡ ತೆರೆಗೆ ಬರೋ ಲಕ್ಷಣಗಳಿಲ್ಲ

  ಅಂಬರ ಕೂಡ ತೆರೆಗೆ ಬರೋ ಲಕ್ಷಣಗಳಿಲ್ಲ

  ಯೋಗಿ ಅಭಿನಯದ ಅಂಬರದ ಅಬ್ಬರವಾದ್ರೂ ಇರುತ್ತಾ ಅಂದುಕೊಂಡ್ರೆ ಅಂಬರ ಕೂಡ ತೆರೆಗೆ ಬರೋ ಲಕ್ಷಣಗಳಿಲ್ಲ.

  English summary
  This Deepavali festival season is dull business for Kannada movies. Only one Kannda movie is releasing on 1st November Kannada Rajyotsava day. Though the series of holidays the Kannada movie business is dull. One Yash starrer Raja Huli is releasing this Diwali festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X