For Quick Alerts
  ALLOW NOTIFICATIONS  
  For Daily Alerts

  'ಪಾತರಗಿತ್ತಿ' ಗಿರಿನಗರ ಬೆಟ್ಟದ ಮೇಲೆ ಚಿತ್ರಣ

  By Rajendra
  |

  ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.... ಇದು ದ ರಾ ಬೇಂದ್ರೆ ಅವರ ಜನಪ್ರಿಯ ಗೀತೆ. ನಿಲ್ಲೆ ನಿಲ್ಲೆ ಪತಂಗ.... ಸಹ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಜನಪ್ರಿಯ ಗೀತೆ. ಆದರೆ ಚಿಟ್ಟೆಯಂತಹ ಮನಸ್ಸು? ಚಂಚಲತೆಯ ಪ್ರತಿರೂಪ ಎಂದು 'ಪಾತರಗಿತ್ತಿ' ಚಿತ್ರ 40 ಭಾಗದಷ್ಟು ಚಿತ್ರೀಕರಣ ಮುಗಿಸಿ ಒಂದು ಹಾಡನ್ನು ಗಿರಿನಗರದ ಬೆಟ್ಟದ ಮೇಲೆ ಹಾಕಲಾದ ಸೆಟ್ ಅಲ್ಲಿ ಚಿತ್ರೀಕರಣ ಮಾಡಲಾಗಿದೆ.

  "ನೀನಂದ್ರೆ ಇಷ್ಟ ಕ್ಯಾಚ್ ಹಾಕೋಡು ಕಷ್ಟ" ಎಂಬುದು ಚಿತ್ರದ ಟ್ಯಾಗ್ ಲೈನ್. ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. 'ಪಾತರಗಿತ್ತಿ' ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು.

  ಕಳೆದ ಹತ್ತು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಈಗ ಸ್ವತಂತ್ರ ನಿರ್ದೇಶಕರಾಗುವತ್ತ ದಾಪುಗಾಲು ಹಾಕಿದ್ದಾರೆ. ಬದಲಾವಣೆ ಜಗತ್ತಿನ ನಿಯಮ. ಇದನ್ನೇ ಹೆಣ್ಣಿನ ದೃಷ್ಟಿಯಲ್ಲಿ ಇಟ್ಟುಕೊಂಡು ಹಲವಾರು ರೀತಿಯ ಬದಲಾವಣೆಯನ್ನು ತೆರೆಯಮೇಲೆ ಹೇಳಲು ಹೊರಟಿದ್ದಾರೆ. ಹೆಣ್ಣಿನ ಮನಸ್ಸು ಚಂಚಲ. ಚಿಟ್ಟೆಯಂತೆ ಹಾರಾಡುತ್ತಲೆ ಇರುತ್ತದೆ ಎಂದು ಸೂಚ್ಯವಾಗಿ ನಿರ್ದೇಶಕರು ಹೇಳಲಿದ್ದಾರೆ.

  'ಪಾತರಗಿತ್ತಿ' ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಪೂರೈಸಿ ಚಿರನಿದ್ರೆಗೆ ಜಾರಿದರು. ಆದ ಕಾರಣ ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಮಾಡಲಿದ್ದಾರೆ. ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.

  ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಲಕ್ಕಿ ಶಂಕರ್, ರಾಜು ತಾಳಿಕೋಟೆ, ಲಯೇಂದ್ರ, ಮಿತ್ರ, ಬುಲ್ಲೆಟ್ ಪ್ರಕಾಶ್, ನಾಗರಾಜ್, ಬ್ರಹ್ಮಾವರ್, ಶಾಂತಮ್ಮ, ಚಿಕ್ಕಣ್ಣ, ಕುರಿ ಪ್ರತಾಪ್, ರಾಮನಯಕ್, ನೀಲಕಂಠಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ.

  ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ, ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

  English summary
  Kannada movie Pataragitti shooting in brisk progressing at Girinagara hill, which has Srikanth and Praju Pooviah in the lead roles. The movie is directed by K Eshwar. The film also has Shanthamma, Lucky Shankar, Tabla Nani, Bullet Prakash and Lyendra in significant roles. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X