twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದ 'ಅಯೋಗ್ಯ' ನಿರ್ಮಾಪಕ ಚಂದ್ರಶೇಖರ್‌

    |

    ಕನ್ನಡದ ಖ್ಯಾತ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಪಿಹೆಚ್‌ಡಿ ಪದವಿ ಪಡೆದ ಚಂದ್ರಶೇಖರ್‌ ಅವರು ಮೈಸೂರು ವಿಶ್ವವಿದ್ಯಾಲಯದ 100ನೇ ವಾರ್ಷಿಕ ಘಟಿಕೋತ್ಸವ ಪದವಿ ಸ್ವೀಕರಿಸಿರು.

    ಈ ಸಂತಸವನ್ನು ಸ್ವತಃ ಟಿಆರ್ ಚಂದ್ರಶೇಖರ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಪ್ರಧಾನಮಂತ್ರಿಗಳ ಉದ್ಘಾಟನೆಯ, ಹಾಗೂ ಘನತೆವೆತ್ತ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ತಾ.19.10.2020 ರಂದು ನಡೆದ, ಮೈಸೂರು ವಿಶ್ವವಿದ್ಯಾಲಯದ ಹೆಮ್ಮೆಯ 100ನೇ ವಾರ್ಷಿಕ ಘಟಿಕೋತ್ಸವ ದಲ್ಲಿ ನನ್ನ ವಿದ್ಯಾರ್ಥಿ ಜೀವನದ, ಬಹುನಿರೀಕ್ಷಿತ ಕನಸಿನ ರಾಜ್ಯಶಾಸ್ತ್ರ ವಿಭಾಗದಲ್ಲಿ, ಪಿಹೆಚ್_ಡಿ ಪದವಿಯನ್ನು ಪಡೆದ ಸಂಭ್ರಮದ ಕ್ಷಣ'' ಎಂದು ಖುಷಿಯಾಗಿದ್ದಾರೆ.

    'ರಾಬರ್ಟ್' ಚಿತ್ರದ ಸಂಭಾಷಣೆಕಾರ ಈಗ ಸ್ಟಾರ್ ನಟನ ಚಿತ್ರಕ್ಕೆ ಡೈರೆಕ್ಟರ್'ರಾಬರ್ಟ್' ಚಿತ್ರದ ಸಂಭಾಷಣೆಕಾರ ಈಗ ಸ್ಟಾರ್ ನಟನ ಚಿತ್ರಕ್ಕೆ ಡೈರೆಕ್ಟರ್

    ಈ ಪೋಸ್ಟ್‌ ಜೊತೆಗೆ ಡಾಕ್ಟರೇಟ್ ಪಡೆಯುತ್ತಿರುವ ಫೋಟೋ, ಪದವಿ ಪ್ರಮಾಣಪತ್ರ, ಘಟಿಕೋತ್ಸವದಲ್ಲಿ ಭಾಗಿಯಾದ ಫೋಟೋ ಹಾಗೂ ಆಮಂತ್ರಣ ಪತ್ರಿಕೆಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

    Kannada Film Producer Chandrashekar TR got doctorate of Philosophy in Political Science

    ಟಿಆರ್ ಚಂದ್ರಶೇಖರ್ ಅವರು ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ ಹಾಗೂ ನಿರ್ಮಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾಗೆ ಬಂಡವಾಳ ಹಾಕಿದ್ದು ಇದೇ ಚಂದ್ರಶೇಖರ್.

    Recommended Video

    ಕೊರೊನ ಭಯ ಇಲ್ದೆ ಸಿಂಗಲ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡಬಹುದ..? | Filmibeat Kannada

    ಅದಾದ ಬಳಿಕ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ 'ಅಯೋಗ್ಯ' ಸಿನಿಮಾ ನಿರ್ಮಿಸಿದ್ದು ಇವರೇ. ಇದರ ಜೊತೆ 'ಬೀರ್‌ಬಲ್', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಸಹ ಮಾಡಿದ್ದಾರೆ. ಉಪೇಂದ್ರ ನಟನೆಯ 'ಬುದ್ದಿವಂತ-2' ಚಿತ್ರಕ್ಕೂ ಇವರೇ ನಿರ್ಮಾಪಕರು. ಕೋಮಲ್ ಜೊತೆಯೂ ಒಂದು ಸಿನಿಮಾ ಮಾಡ್ತಿದ್ದಾರೆ.

    English summary
    Chamak Movie Producer Chandrashekar TR got doctorate of Philosophy in Political Science from Mysore university.
    Tuesday, October 20, 2020, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X