ಸ್ಟಾರ್ ಹಿಂದಿನ ಶಕ್ತಿ ಅವರ ಅಮ್ಮಂದಿರು
ಅಮ್ಮ ಎಂದರೆ ಏನೋ ಹರುಷ, ದಿನ ಪೂರ್ತಿ ಬೈದರು, ರೇಗಾಡಿದರು ಎಂದಿಗೂ ಬೇಸರ ಮಾಡಿಕೊಳ್ಳದ ಏಕೈಕ ಜೀವ ಅಮ್ಮ. ತನ್ನಾಸೆಯನ್ನೆಲ್ಲಾ ಬದಿಗಿಟ್ಟು ಕೇವಲ ಮಗುವಿನ ಆಸೆ, ಆಕಾಂಕ್ಷೆಗೆ ಮಾತ್ರ ಬೆಲೆ ಕೊಡುತ್ತಾ ಜೀವನ ಸವೆಸುವ ತಾಯಂದಿರ ದಿನ ಇಂದು.
ಸಿನಿಮಾರಂಗದಲ್ಲಿನ ಸ್ಟಾರ್ ಗಳ ಅಪ್ಪ ಅಮ್ಮ ಯಾರು? ಅವರು ಹೇಗಿದ್ದಾರೆ? ಕಲಾವಿದರು ಸ್ಟಾರ್ ಪಟ್ಟ ಪಡೆದುಕೊಳ್ಳಲು ಅವರೆಷ್ಟು ಮುಖ್ಯವಾಗಿದ್ದರು? ಎನ್ನುವುದನ್ನ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ.
ಕೆಲ ಸ್ಟಾರ್ ಗಳ ಪೋಷಕರು ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುತ್ತಾರೆ ಅದರಲ್ಲೂ ತಾಯಂದಿರು ಹಾಗಾಗ ಶೂಟಿಂಗ್ ಸೆಟ್ ನಲ್ಲಿ ಪ್ರತ್ಯಕ್ಷ ಆಗ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳ ಕಾವಲಿಗೆ ಸದಾ ಇರುತ್ತಾರೆ. ಆದರೆ ಇನ್ನು ಕೆಲವರು ಎಂದಿಗೂ ಯಾರಿಗೂ ಗೊತ್ತಾಗದಂತೆ ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲೆ ಮುಳುಗಿ ಹೋಗಿರುತ್ತಾರೆ. ಅಂತಹ ಅಮ್ಮದಿರನ್ನ ಪರಿಚಯಿಸುವ ಕೆಲಸವನ್ನ ನಾವು ಮಾಡುತ್ತಿದ್ದೇವೆ. ತೆರೆ ಮೇಲೆ ಮಿಂಚುವ ಸ್ಟಾರ್ ಗಳ ಶಕ್ತಿ ಆಗಿರುವ ಅವರ ಅಮ್ಮಂದಿರ ಅಪರೂಪದ ಫೋಟೋಗಳು ಇಲ್ಲಿವೆ ಮುಂದೆ ಓದಿ

ಡಾಲಿ ಅಂದರೆ ಅಮ್ಮನಿಗೆ ಪ್ರೀತಿ
ನಟ ರಾಕ್ಷಸ, ಸ್ಪೆಷಲ್ ಸ್ಟಾರ್ ಧನಂಜಯ ಅವರಿಗೆ ಅಮ್ಮ ಅಂದರೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಅಲ್ಲದೆ ಎಲ್ಲರಿಗೂ ತಿಳಿದಿರುವಂತೆ ಇಂದಿಗೂ ಡಾಲಿ ಊರಿಗೆ ಹೋದಾಗ ಅಮ್ಮನಿಗೆ ಅಡುಗೆ ಮನೆಯ ಕೆಲಸ ಮಾಡಲು ನೆರವಾಗುತ್ತಾರೆ. ಧನಂಜಯ ಡಾಲಿ ಆಗಿ ಪ್ರಖ್ಯಾತಿಗಳಿಸಲು ತಾಯಿ ಸಾವಿತ್ರಮ್ಮ ಅವರ ಕೊಡುಗೆ ಹೆಚ್ಚಾಗಿದೆ.

ಸಾವಿತ್ರಮ್ಮನ ಮಗ ಚಂದನ್
ಕಿರುತೆರೆ, ಬೆಳ್ಳಿತೆರೆ, ರಿಯಾಲಿಟಿ ಶೋ ಹಾಗೂ ಕ್ರಿಕೆಟ್ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಸ್ಮಾರ್ಟ್ ಹೀರೋ ಚಂದನ್ ತಾಯಿ ಕೂಡ ಅವರಂತೆಯೇ ಮುಂದ್ದಾಗಿದ್ದಾರೆ.

ಸಂಗೀತ ಭಟ್ ಎಂದರೆ ಪ್ರಪಂಚ ಎನ್ನುವ ತಾಯಿ
ಮಕ್ಕಳು ಅಂದರೆ ತಾಯಂದಿರಿಗೆ ಪ್ರಪಂಚ. ಅದೇ ಸಾಲಿಗೆ ಸೇರುವವರು ಸಂಗೀತ ಭಟ್ ಅವರ ತಾಯಿ ಮಂಜುಳ ಭಟ್. ಮಗಳ ಖುಷಿಗೆ ಏನು ಬೇಕಾದರು ಮಾಡುವೆ ಎನ್ನುವ ಪ್ರೀತಿಯ ಅಮ್ಮ ಇವರು.

ಅಮ್ಮನೇ ಸ್ನೇಹಿತೆ
ನಟಿ ಹರಿಪ್ರಿಯಾ ಅವರ ತಾಯಿ ಲಲಿತಾ ಮಗಳ ಏಳಿಗೆಗಾಗಿ ಶ್ರಮಿಸುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಹರಿಪ್ರಿಯಾ ಜೊತೆ ಅವರ ತಾಯಿ ಕಾವಲಾಗಿಯೇ ಇರುತ್ತಾರೆ.

ನಿಂಗಮ್ಮನ ಮಗ ಚಿಕ್ಕಣ್ಣ
ಸಿನಿಮಾ ಪ್ರೇಮಿಗಳನ್ನ ನಗಿಸುತ್ತಾ ಖುಷಿ ಪಡುವ ನಟ ಚಿಕ್ಕಣ್ಣ ಅವರ ತಾಯಿಯನ್ನ ಸಾಮಾನ್ಯವಾಗಿ ಯಾರು ನೋಡಿರಲು ಸಾಧ್ಯವಿಲ್ಲ. ಅಮ್ಮಂದಿರ ದಿನಾಚರಣೆ ಅಂಗವಾಗಿ ಚಿಕ್ಕಣ್ಣ ತಮ್ಮ ತಾಯಿಯ ಫೋಟೊವನ್ನ ಇನ್‌ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಅಂದ್ಹಾಗೆ ಚಿಕ್ಕಣ್ಣ ನಿಂಗಮ್ಮ ಅವರ ಮುದ್ದಿನ ಮಗ.

ಮಗಳಂತೆ ಬ್ಯೂಟಿ ಗೀತಾ ಪಾಟೀಲ್
ನಟಿ ನೇಹಾ ಪಾಟೀಲ್ ಅವರ ತಾಯಿಯನ್ನ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಮಕ್ಕಳನ್ನ ಸ್ನೇಹಿತರಂತೆ ನೋಡಿಕೊಳ್ಳುವ ಗೀತಾ ಪಾಟೀಲ್ ತನ್ನ ಮಗಳಂತೆ ಸಖತ್ ಸ್ಮಾರ್ಟ್ ಅಂಡ್ ಬ್ಯೂಟಿ.

ಅಮ್ಮಾಜಿ ಅವರ ಹಾರೈಕೆಯಲ್ಲಿ ಧ್ರುವ ಸುಖಿ
ನಟ ಧ್ರುವ ಸರ್ಜಾ ಚಿತ್ರರಂಗದಲ್ಲಿ ತುಂಬಾ ಶ್ರದ್ಧೆ ಇರುವ ಕಲಾವಿದ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಧ್ರುವ ಇಂದು ಆಕ್ಷನ್ ಪ್ರಿನ್ಸ್ ಆಗಿರುವುದಕ್ಕೆ ಮೂಲ ಕಾರಣ ಅವರ ತಾಯಿ ಅಮ್ಮಾಜಿ.

ಹೆಸರಿನಂತೆ ವಿನಯವಂತೆ
ನಟಿ ಹಾಗೂ ಬಿಗ್ ಬಾಸ್ ನ ಸ್ಪರ್ಧಿ ನಟಿ ತೇಜಸ್ವಿನಿ ಅವರ ತಾಯಿ ಕೂಡ ತುಂಬಾ ಸುಂದವಾಗಿದ್ದಾರೆ ವಿನಯ ಎನ್ನುವ ಹೆಸರಿಗೆ ತಕ್ಕಂತೆ ಇರುವ ಈಕೆ ಮಗಳ ಸಾಧನೆಗೆ ಬೆನ್ನೆಲುಬು.

ಸಾಧನೆಯ ಎಲ್ಲಾ ಪಾಲು ಅಮ್ಮನದೇ
ಚಂದನವನದ ಕೆಂಡಸಂಪಿಗೆಯ ಅಮ್ಮ ಸುಜಾತ. ಫೋಟೋ ನೋಡಿದರೆ ಮಾನ್ವಿತಾ ಅಮ್ಮನನ್ನೇ ಹೋಲುತ್ತಾರೆ. ಇಂದು ಮಾನ್ವಿತಾ ಉತ್ತಮ ಸ್ಥಾನದಲ್ಲಿದ್ದಾರೆ ಎಂದರೆ ಅದಕ್ಕೆ ಸುಜಾತ ಅವರೇ ಕಾರಣ,

ಚಿಕ್ಕತಾಯಮ್ಮನ ದೊಡ್ಡ ಪ್ರೀತಿ
ನಟ ಸತೀಶ್ ನಿನಾಸಂ ಅವರ ತಾಯಿಯನ್ನು ಸಾಮಾನ್ಯವಾಗಿ ಯಾರು ನೋಡಿಲ್ಲ. ಹೆಸರು ಮಾತ್ರ ಚಿಕ್ಕತಾಯಮ್ಮ ಆದರೆ ಅವರು ಮಗನ ಮೇಲಿಟ್ಟಿರುವ ಪ್ರೀತಿ ಮಾತ್ರ ಬೆಟ್ಟಕ್ಕಿಂತಲೂ ದೊಡ್ಡದು ಎನ್ನುವದೇ ಸತೀಶ್ ಅವರಿಗೆ ಹೆಮ್ಮೆಯ ವಿಚಾರ.

ಸುಂದರವಾಗಿದ್ದಾರೆ ನಭಾ ನಟೇಶ್ ತಾಯಿ
ಚಿತ್ರರಂಗದಲ್ಲಿ ಪಟಾಕ ಅಂತ ಫೇಮಸ್ ಆಗಿರು ನಭಾ ಅವ್ರ ಪಾಲಿನ ಭಾಗ್ಯಲಕ್ಷ್ಮೀ ಅವರ ತಾಯಿ. ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದು ಬೆಂಬಲ ನೀಡುವ ಅಮ್ಮ ಭಾಗ್ಯಲಕ್ಷ್ಮೀ

ಮಗಳಂತೆ ಅಮ್ಮನೂ ಸುಂದರಿ
ನಟಿ ಮಿಲನಾ ಎಲ್ಲರಿಗೂ ತಿಳಿದಿರುವಂತೆ ತುಂಬಾ ಸುಂದರವಾಗಿದ್ದಾರೆ. ತೆಳ್ಳಗೆ, ಬೆಳ್ಳಗ್ಗೆ ಬೊಂಬೆಯಂತಿರುವ ಮಿಲನಾ ಅವರ ತಾಯಿ ಚಂದ್ರಕಲಾ ಕೂಡ ಅಷ್ಟೇ ಸುಂದವಾಗಿದ್ದಾರೆ.

ಅಮ್ಮನೇ ಭಾಗ್ಯ
ನಟಿ ಅನುಷಾ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟಿ. ತನ್ನ ವೃತ್ತಿ ಜೀವನದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿರುವ ಅನುಷಾ ಅವರಿಗೆ ಸದಾ ಜೊತೆಯಲ್ಲಿದ್ದು ಯಶಸ್ಸು ತಂದು ಕೊಡುತ್ತಿರುವವರು ಅವರ ತಾಯಿ ಭಾಗ್ಯ.

ಡಾಕ್ಟರ್ ಮಗಳು ಪ್ರಣಿತಾ
ಕನ್ನಡ ಸಿನಿಮಾರಂಗ ಸೇರಿದಂತೆ ಬೇರೆ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ನಟಿ ಪ್ರಣಿತಾ ಅವರ ತಾಯಿ ಡಾಕ್ಟರ್ .ತನ್ನ ವೃತ್ತಿಯಲ್ಲಿ ಬ್ಯುಸಿ ಆಗಿರುವ ಡಾ ಜಯಶ್ರೀ ಮಗಳ ಕಾಳಜಿ ಮಾಡುವುದರಲ್ಲಿಯೂ ಮುಂದಿರುತ್ತಾರೆ.


Click it and Unblock the Notifications











