For Quick Alerts
  ALLOW NOTIFICATIONS  
  For Daily Alerts

  ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು

  |
  Siddaganga Swamiji : ಡಾ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆ ಚಿತ್ರೋದ್ಯಮ ಬಂದ್ | ಗಣ್ಯರ ಸಂತಾಪ

  ಕಾಯಕ ಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:44 ಕ್ಕೆ ಕೊನೆಯೂಸಿರೆಳೆದಿದ್ದಾರೆ.

  ಸಾವಿರಾರೂ ಸಂಖ್ಯೆಯ ಭಕ್ತರನ್ನು ಬಿಟ್ಟು ಶ್ರೀಗಳು ಶಿವನ ಬಳಿ ಹೋಗಿದ್ದಾರೆ. ಶ್ರೀಗಳ ಅಗಲಿಕೆಗೆ ಅವರ ಇಡೀ ಭಕ್ತ ಸಮೂಹ ಕಣ್ಣೀರು ಹಾಕುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಶ್ರೀಗಳ ನಿಧನದ ಸುದ್ದಿ ಕೇಳಿ ದುಃಖದಲ್ಲಿದ್ದಾರೆ.

  'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್

  ನಟ ದರ್ಶನ್, ಜಗ್ಗೇಶ್, ಗಣೇಶ್, ಸತೀಶ್ ನೀನಾಸಂ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪವನ್ ಒಡೆಯರ್, ಸೇರಿದಂತೆ ಅನೇಕರು ಶ್ರೀಗಳಿಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ...

  ಬಹಳ ನೋವಿನ ಸಂಗತಿ

  ''ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.''

  ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ

  ''ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ.. ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ.. ಓಂ ನಮಃ ಶಿವಾಯಃ..ಓಂ ಶಾಂತಿ..'' - ಜಗ್ಗೇಶ್, ನಟ

  ನಾಳೆ ಮಧ್ಯಾಹ್ನ 3 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ: ಎಚ್‌ಡಿಕೆ

  ದರ್ಶನ, ಹಿರಿತನ, ತಾಯ್ತನ

  ''ದರ್ಶನ, ಹಿರಿತನ, ತಾಯ್ತನ, ನಾಯಕತ್ವ, ತತ್ವನಿಷ್ಠೆ, ಧೀಮಂತಿಕೆ, ಶಿಶು ಮುಗ್ಧತೆ, ದೂರದರ್ಶಿತ್ವ ಎಲ್ಲವೂ ಕೂಡಿ ಪಡೆದವು ಅಮರತ್ವ.'' - ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

  ತುಂಬ ದುಃಖದ ಸಂಗತಿ

  ಇದು ತುಂಬ ದುಃಖದ ಸಂಗತಿ. ನಾವು ಒಂದು ಗೌರವಾನ್ವಿತ, ಮೃದು ಹೃದಯದ ಆತ್ಮವನ್ನು ಕಳೆದುಕೊಂಡಿರುವುದು ವಿಪರ್ಯಾಸ. ಜಾತಿ, ಧರ್ಮದ ಭೇದವಿಲ್ಲದೆ ಬಡ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ. ಅವರು ಎಂದೆಂದಿಗೂ ನಮ್ಮ ಹೃದಯಲ್ಲಿ ಇರುತ್ತಾರೆ.

  ಓಂ ಶಾಂತಿ

  ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

  ಮಹಾನ್ ವ್ಯಕ್ತಿ ನೀವು

  ''ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ...'' - ಸತೀಶ್ ನೀನಾಸಂ, ನಟ

  ಅವರ ಆತ್ಮವು ನಮ್ಮನ್ನೆಲ್ಲ ಆಶೀರ್ವದಿಸಲಿ

  ''ನೆಡೆದಾಡುವ ದೇವರು..ಚಿರನಿದ್ರೆಗಿಳಿದರು.. ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ .. ಪರಿಶುದ್ದತೆ ಕಾಯಕ .. ಅವರನ್ನು ದೇವರನ್ನಾಗಿಸಿತು.. ಲಿಂಗೈಕ್ಯರಾದ ಅವರ ಆತ್ಮವು ನಮ್ಮನ್ನೆಲ್ಲ ಆಶೀರ್ವದಿಸಲಿ..'' ಸುನಿ, ನಿರ್ದೇಶಕ

  English summary
  Kannada actor ganesh, darshan, jaggesh, sathish neenasam expressed condolence to shivakumara swamiji death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X