For Quick Alerts
  ALLOW NOTIFICATIONS  
  For Daily Alerts

  ಯುಗಾದಿ ಹಬ್ಬಕ್ಕೆ ಸಿನಿ ತಾರೆಯರ ಸ್ಪೆಷಲ್ ವಿಶ್

  |
  ವಿಧ ವಿಧವಾಗಿ ಶುಭಾಶಯ ತಿಳಿಸಿದ ಸ್ಯಾಂಡಲ್‍ವುಡ್ ತಾರೆಯರು

  ಇಂದು ದೇಶದಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ನಾಡಿನ ಜನತೆ ಬೇವು ಬೆಲ್ಲ ಸವಿದು ಸಂತಸ ಪಡುತ್ತಿದ್ದಾರೆ. ಹಬ್ಬ ಅಂದ್ರೆ ಎಲ್ಲರಿಗೂ ಸಡಗರ. ಸಿನಿ ತಾರೆಯರು ಸಹ ಬೇವು ಬೆಲ್ಲ ಸವಿದು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

  ಹಬ್ಬದ ಪ್ರಯುಕ್ತ ಸಾಕಷ್ಟು ಚಿತ್ರಗಳ ಹೊಸ ಲುಕ್, ಟೀಸರ್, ಹಾಡುಗಳು ರಿಲೀಸ್ ಆಗಿವೆ. ಅಲ್ಲದೆ ವಿಶೇಷವಾಗಿ ಕಿಚ್ಚ ಸುದೀಪ್ ಕಡೆಯಿಂದ ಯೂಟ್ಯೂಬ್ ಚಾನಲ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೂಡ ಸಿಕ್ಕಿದೆ.

  ಇದರ ಜೊತೆಗೆ ನೆಚ್ಚಿನ ತಾರೆಯರು ಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮೇಶ್ ಅರವಿಂದ್, ಶರಣ್ ಸೇರಿದಂತೆ ಸಾಕಷ್ಟು ಕಲಾವಿದರು ಹಬ್ಬದ ವಿಶ್ ಮಾಡಿದ್ದಾರೆ.ಮುಂದೆ ಓದಿ..

  ಪ್ರಿಯಾ ಸುದೀಪ್ ಯೂಟ್ಯೂಬ್ ಚಾನಲ್ ಬಿಡುಗಡೆ, ಮೊದಲ ವಿಡಿಯೋ ಇದೆ

  ನಾಡಿನ ಜನತೆಗೆ ದರ್ಶನ್ ಹಬ್ಬದ ವಿಶ್

  "ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೇವು-ಬೆಲ್ಲ ತಿಂದು ಒಳ್ಳೆ ಮಾತಾಡಿ. ಹೊಸ ವರ್ಷದ ಈ ಹುರುಪಿನಲ್ಲಿ ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ"

  ವಿಶೇಷವಾಗಿ ಶುಭಾಶಯ ತಿಳಿಸಿದ ಸುದೀಪ್

  "ಎಲ್ಲಾ ಸ್ನೇಹಿತರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯಾರಿಗೆ ಸಹಾಯದ ಅಗತ್ಯವಿದೆಯೋ ಅವರೊಂದಿಗೆ ಹಬ್ಬ ಮಾಡಿ, ದಾನ ಮಾಡಿ, ಅವರ ಮುಖದಲ್ಲಿ ನಗು ತರಿಸುವ ಮೂಲಕ ಯುಗಾದಿ ಹಬ್ಬವನ್ನು ಸಂಭ್ರಮಿಸಿ"

  ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?

  ರಮೇಶ್ ಅರವಿಂದ್ ಯುಗಾದಿ ವಿಶ್

  "ನಿರಂತರವಾಗಿ ಬೆಲ್ಲದ ಜೊತೆ ಬೇವು free, ಬೇವಿನ ಜೊತೆ ಬೆಲ್ಲ free-ಎಂದು ಅಂಗಡಿಯವನು board ಹಾಕ್ಕಿದ್ದಾನೆ. ಸಂತೋಷವಾಗಿ ತೂಗಿ. ಶುಭ ಯುಗಾದಿ"

  ಕನ್ನಡ ಬಂಧುಗಳಿಗೆ ಜಗ್ಗೇಶ್ ಶುಭಾಶಯ

  "ನಲ್ಮೆಯ ನನ್ನ ಕನ್ನಡ ಬಂಧುಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು"

  ಸಿಹಿ ಇರಲಿ ಜೀನದಲ್ಲಿ ಎಂದ ಶರಣ್

  "ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮ್ಮ ಎಲ್ಲರ ಜೀವನದಲ್ಲಿ ಬೇವಿನ ಕಹಿಗಿಂತಾ, ಬೆಲ್ಲದ ಸಿಹಿ ನಿಮ್ಮ ಜೀವನದಲ್ಲಿ ಇರಲಿ. ಎಲ್ಲರನ್ನು ಭಗವಂತ ಸುಖ ಶಾಂತಿ ನೆಮ್ಮದಿ ಎಲ್ಲ ಕೊಟ್ಟು ಕಾಪಾಡಲಿ"

  English summary
  kannada film stars actor darshan, actor sudeep, actor ramesh aravind are special wish to fans for ugadi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X