Just In
Don't Miss!
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- News
5 ಮಂತ್ರಿಗಳು ಸೇರಿ ಜಿಲ್ಲೆಯ, ರಾಜ್ಯದ ಅಭಿವೃದ್ಧಿ ಮಾಡುತ್ತೇವೆ
- Sports
ಐಎಸ್ಎಲ್: ಹೈದರಾಬಾದ್ಗೆ ಬಲಿಷ್ಠ ಮುಂಬೈ ಸಿಟಿ ಎಫ್ಸಿ ಸವಾಲು
- Education
KIOCL Recruitment 2021: ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು' ಅಭಿಯಾನಕ್ಕೆ ಕಲಾವಿದರ ಬೆಂಬಲ
ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ ಎನ್ನುವ ಕಾರಣಕ್ಕೆ ಉತ್ತಮ ಆಸ್ಪತ್ರೆಗಾಗಿ ಅಭಿಯಾನ ಶುರುವಾಗಿದೆ. ಈಗಾಗಲೆ ಈ ಅಭಿಯಾನ ದೊಡ್ಡ ಮಟ್ಟಕ್ಕೆ ಚರ್ಚೆಯಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ಸಾಕಷ್ಟು ಜನ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಈ ಮೂಲಕ ಸರ್ಕಾರ ಹಾಗು ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ.
ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಬೆಂಬಲ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಯಾವುದೆ ಹೋರಟ, ಸಮಸ್ಯೆಗಳಾದಾಗ ಕಲಾವಿದರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಉದಾಹರಣೆಗೆ ಕಾವೇರಿ ಹೋರಾಟ, ಪ್ರಕೃತಿ ವಿಕೋಪ ಮುಂತಾದ ಸಂದರ್ಭಗಳಲ್ಲಿ ಕಲಾವಿದರು ಜನಪರವಾಗಿ ನಿಂತಿರುತ್ತಾರೆ.
ಲಾರ್ಡ್ಸ್ ನಲ್ಲಿ ಕ್ರಿಕೆಟ್ ಪಂದ್ಯ ಗೆದ್ದು ಅಗಲಿದ ಸ್ನೇಹಿತನಿಗೆ ಗೆಲುವು ಅರ್ಪಿಸಿದ ಸುದೀಪ್
ಈಗ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಕನ್ನಡ ಚಿತ್ರರಂಗ ಧ್ವನಿ ಎತ್ತಿದೆ. ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ಸ್ ಕೈ ಜೋಡಿಸಿದ್ದಾರೆ. ಸುದೀಪ್, ರಶ್ಮಿಕಾ, ಶಿವರಾಜ್ ಕುಮಾರ್, ಪುನೀತ್ ಸೇರಿದಂತೆ ಅನೇಕ ಕಲಾವಿದರು ಬೆಂಬಲ ಸೂಚಿಸಿದ್ದಾರೆ. ಮುಂದೆ ಓದಿ..

ಆಸ್ಪತ್ರೆ ಅಭಿಯಾನಕ್ಕೆ ಪುನೀತ್ ಸಾಥ್
ಕೊಡಗಿಗೆ ಸುಸಜ್ಜಿತವಾದ ಆಸ್ಪತ್ರೆ ಬೇಕು ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. "ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತದೆ. ನಮ್ಮ ಕೈಯಲ್ಲಿ ಏನಾಗುತ್ತದೆ, ಅದನ್ನು ನಾವು ಮಾಡುತ್ತೇವೆ. ಕನ್ನಡಿಗನಾಗಿ ಈ ದೇಶದ ಪ್ರಜೆಯಾಗಿ ಇದು ನಮ್ಮ ಕರ್ತವ್ಯ" ಎಂದು ಹೇಳುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಯುವರತ್ನ ಸೆಟ್ ನಲ್ಲಿ ಮಹಿಳಾ ಅಭಿಮಾನಿಗಳಿಂದ ಪುನೀತ್ ಗೆ ಉಡುಗೊರೆ

ಆಸ್ಪತ್ರೆ ಅಭಿಯಾನಕ್ಕೆ ಸುದೀಪ್ ಬೆಂಬಲ
ಕಿಚ್ಚ ಸುದೀಪ್ ಕೂಡ ಕೊಡಗು ಜನರ ಪರ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸುದೀಪ್ "ಕೊಡಗು ಸ್ನೇಹಿತರು ಮತ್ತು ಕುಟುಂಬದವರ ಬೆಂಬಲಕ್ಕೆ ಯಾವಾಗಲು ಇರುತ್ತೇನೆ. ನಾನು ಖಂಡಿತವಾಗಿ ಈ ಅಭಿಯಾನಕ್ಕೆ ಸಹಾಯ ಮಾಡುತ್ತೇನೆ. ನನ್ನ ಸಹಾಯ ಯಾವಾಗಲು ನನ್ನ ಜನತೆಗೆ ಇರುತ್ತೆ" ಎಂದು ಹೇಳಿದ್ದಾರೆ.

ಅಭಿಯಾನಕ್ಕೆ ಶಿವರಾಜ್ ಕುಮಾರ್ ಸಾಥ್
'ಕೊಡಗು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು. ನಮ್ಮ ದೇಶ ಕಾಯುವ ಎಷ್ಟೋ ಯೋಧರು ಕೊಡಗುದವರಾಗಿದ್ದಾರೆ. ಅಲ್ಲಿನ ಜನರಿಗೆ ಆಸ್ಪತ್ರೆಯ ವ್ಯವಸ್ಥೆ ಬಹಳ ಕಡಿಮೆ ಇದೆ ಎಂದು ಕೇಳಿಪಟ್ಟೆ. ಅಲ್ಲಿ ಆಸ್ಪತ್ರೆ ವ್ಯವಸ್ಥೆಗಳು ಆಗಲಿ ಎಂದು ಚಿತ್ರರಂಗದ ಪರವಾಗಿ ನಾನು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಾವು ನಿಮ್ಮ ಜೊತೆಗೆ ಇದ್ದೇವೆ.'' ಎಂದು ಹೇಳಿದ್ದಾರೆ.

ಆಸ್ಪತ್ರೆಗಾಗಿ ರಶ್ಮಿಕಾ ಮನವಿ
"ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಸ್ಪತ್ರೆ ನಮ್ಮ ಕೊಡಗಿನಲ್ಲಿ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರದ ನಗರಗಳಿಗೆ ಹೋಗಬೇಕಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾದಲ್ಲಿ, ಕೊಡಗಿನ ಜನತೆಗೆ ಅನುಕೂಲವಾಗಲಿದೆ. ದಯವಿಟ್ಟು ಸ್ಪಂದಿಸಿ" ಎಂದು ಮುಖ್ಯಮಂತ್ರಿಗಳಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಶಿವಣ್ಣ ಬೆಂಬಲ

ಅಭಿಯಾನದ ಪರ ಧ್ವನಿ ಎತ್ತಿದ ಹರ್ಷಿಕಾ
ಹರ್ಷಿಕಾ ಪೂಣಚ್ಚ ಮೂಲತಃ ಕೊಡಗಿನ ಕುವರಿ. ಸುಸಜ್ಜಿತ ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಹರ್ಷಿಕಾ "ಇತ್ತೀಚಿಗೆ ನಮ್ಮ ತಂದೆಗೆ ಆರೋಗ್ಯ ಸಮಸ್ಯೆ ಎದುರಾಯಿತು. ನಾನು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಬೇಕಾಯಿತು. ಈ ಪರಿಸ್ಥಿತಿ ಯಾರಿಗು ಬರಬಾರದು. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆ ಇದೆ. ಕೊಡಗಿಗೆ ಎಮರ್ಜನ್ಸಿ ಆಸ್ಪತ್ರೆ ಬೇಕೆ ಬೇಕು" ಎಂದು ಹೇಳಿದ್ದಾರೆ.