»   » ಕನ್ನಡ ಸಿನಿಮಾ 'ತಿಥಿ' ಗೆ ಸ್ವಿಟ್ಜರ್ಲೆಂಡಿನಲ್ಲಿ ಆದರಾತಿಥ್ಯ

ಕನ್ನಡ ಸಿನಿಮಾ 'ತಿಥಿ' ಗೆ ಸ್ವಿಟ್ಜರ್ಲೆಂಡಿನಲ್ಲಿ ಆದರಾತಿಥ್ಯ

Posted By:
Subscribe to Filmibeat Kannada

ನಿರ್ದೇಶಕ ರಾಮ್ ರೆಡ್ಡಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಾಸ್ಯಮಯ ಕನ್ನಡ ಚಿತ್ರ 'ತಿಥಿ' ಇದೀಗ ಸ್ವಿಜರ್ಲೆಂಡ್ ನಲ್ಲಿ ನಡೆದ ಲೊಕಾರ್ನೋ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 2 ಪ್ರಶಸ್ತಿ ತನ್ನದಾಗಿಸಿಕೊಂಡಿದೆ..

ಸುಮಾರು 8 ವರ್ಷಗಳ ನಂತರ ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ 'ತಿಥಿ' ಚಿತ್ರಕ್ಕೆ ಸಲ್ಲುತ್ತದೆ. ಮಾತ್ರವಲ್ಲದೇ ಈ ಸಿನಿಮಾದಲ್ಲಿ ಯಾವುದೇ ವೃತ್ತಿಪರ ಕಲಾವಿದರು ನಟಿಸಿಲ್ಲ ಅನ್ನೋದು ಈ ಚಿತ್ರದ ವಿಶೇಷ.

Kannada film 'Thithi' Bags Two Awards at the Locarno film festival

ಈ ಮೊದಲು ಪಾಡೋಡೊರೊ ಸಿನಿಯಾಸ್ತಿ ಡೆಲ್ ಪ್ರೆಸೆಂಟೆ ಪ್ರಿಮಿಯೊ ನೆಸೆನ್ಸ್ ಹಾಗೂ ಸ್ವಾಚ್ ಫಸ್ಟ್ ಫೀಚರ್ ಪ್ರಶಸ್ತಿಗಳು ರಾಮ್ ರೆಡ್ಡಿ ಅವರ 'ತಿಥಿ' ಚಿತ್ರಕ್ಕೆ ಸಂದಿವೆ.

ಸೆಂಚುರಿ ಗೌಡ ಎಂಬ 101 ವರ್ಷದ ವೃದ್ಧ ಸ್ಥಳೀಯವಾಗಿ ಹೆಸರುವಾಸಿಯಾಗಿರುತ್ತಾನೆ, ಆತ ನಿಧನ ಹೊಂದಿದಾಗ ಸೆಂಚುರಿಗೌಡರ ಮೂರು ಪೀಳಿಗೆಯ ಮಕ್ಕಳು ಅದ್ಯಾವ ರೀತಿ ವರ್ತಿಸುತ್ತಾರೆ ಹಾಗೂ 'ತಿಥಿ' ಯ ಸಂದರ್ಭದಲ್ಲಿ ಯಾವ ರೀತಿ ಒಟ್ಟಾಗುತ್ತಾರೆ ಎಂಬುದನ್ನ ಬಹಳ ಕಾಮಿಡಿಯಾಗಿ ತೋರಿಸಲಾಗಿದೆ.

ದೆಹಲಿಯ ಸೈಂಟ್ ಸ್ಟೆಫೆನ್ಸ್ ಕಾಲೇಜಿನಲ್ಲಿ ಆರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿರುವ ನಿರ್ದೇಶಕ ರಾಮ್ ರೆಡ್ಡಿ ಅವರು ಈ ಮೊದಲು 'ಇಕಾ' ಎನ್ನುವ ಕಿರು ಚಿತ್ರವೊಂದನ್ನು ರಚಿಸಿದ್ದರು.

ಮಂಡ್ಯ ಜಿಲ್ಲೆಯ ಸುತ್ತಮುತ್ತಲ ಕೆಲವೆಡೆ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ವೃತ್ತಿಯಲ್ಲಿ ಕಲಾವಿದರಲ್ಲದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

English summary
Kannada film 'Thithi' Bags Two Awards at the Locarno internationa film festival. The movie is directed by Ram Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada