ಯಾರಿವನು? ಇವನೂ ಒಂಥರಾ ಚಿಟ್ಟೆ ಸ್ವಾಮಿನೇ

By Rajendra

ಸಾಕಷ್ಟು ವಾದ, ವಿವಾದ ಚರ್ಚೆಗೆ ಕಾರಣವಾಗಿದ್ದ 'ಯಾರಿವನು' ಚಿತ್ರ ಈ ವಾರ (ಮಾ.15) ತೆರೆಕಾಣುತ್ತಿದೆ. ಮೀಡಿಯಾ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಮದನ್ ಪಟೇಲ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಈ ಹಿಂದೆ 'ಸತ್ಯಾನಂದ' ಎಂದು ಹೆಸರಿಡಲಾಗಿತ್ತು.

ಆದರೆ 'ಸತ್ಯಾನಂದ' ಬೆಂಬಲಿಗರು ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಶೀರ್ಷಿಕೆಯನ್ನು ಬದಲಾಯಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಶೀರ್ಷಿಕೆ ಸೂಚಿಸುವಂತೆ ಪಟೇಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಕಡೆಗೆ ಯಾರಿವನು ಶೀರ್ಷಿಕೆ ಆಯ್ಕೆ ಮಾಡಲಾಗಿದೆ.

ಮದನ್ ಪಟೇಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆನಂದಪ್ರಿಯ, ಶಿವಶಂಕರ್, ದಿನಕರ್ ಸಂಭಾಷಣೆ ಬರೆದಿದ್ದಾರೆ. ರಘು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮದನ್ ಪಟೇಲ್ ಅವರೇ ಸಂಗೀತ ನೀಡಿದ್ದಾರೆ.

ನಾಗೇಂದ್ರ ಅರಸ್ ಸಂಕಲನ, ಮದನ್-ಹರಿಣಿ, ಮುರಳಿ ನೃತ್ಯ ನಿರ್ದೇಶನವಿರುವ ಯಾರಿವನು' ಚಿತ್ರಕ್ಕೆ ಮಯೂರ್ ಪಟೇಲ್ ಕಾರ್ಯಕಾರಿ ನಿರ್ಮಪಕರಾಗಿದ್ದಾರೆ. ರವಿಚೇತನ್, ಅನೂಕಿ, ನೇಹಾ, ಮಿತ್ರ, ಮಿಮಿಕ್ರಿ ದಯಾನಂದ್, ಸುರೇಶ್ಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದ ಕೆಲವು ಲೇಟೆಸ್ಟ್ ಚಿತ್ರಗಳು ಇಲ್ಲಿವೆ ನೋಡಿ.

ಕ್ರೇಜಿಸ್ಟಾರ್ ಚಿತ್ರಗಳನ್ನು ಮೀರಿಸಿದ ದೃಶ್ಯಗಳು

ಕ್ರೇಜಿಸ್ಟಾರ್ ಚಿತ್ರಗಳನ್ನು ಮೀರಿಸಿದ ದೃಶ್ಯಗಳು

ಈ ಚಿತ್ರಕ್ಕೆ ಸ್ಟಿಲ್ಸ್ ನೋಡುತ್ತಿದ್ದರೆ ಸಿಕ್ಕಾಪಟ್ಟೆ ಹಾಟ್ ಅನ್ನಿಸುತ್ತದೆ. ನಾಯಕಿ ಅನೂಕಿ ಜೊತೆ ರವಿಚೇತನ್ ಅಭಿನಯದ ಹಾಟ್ ಚಿತ್ರಗಳು ಯಾವುದೇ ಬಾಲಿವುಡ್ ಚಿತ್ರಕ್ಕಿಂತಲೂ ಕಡಿಮೆ ಇಲ್ಲ. ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳನ್ನು ಮೀರಿಸುವಂತಿವೆ ಸನ್ನಿವೇಶಗಳು.

ಆಪಲ್ ನಂತಹ ಸುಂದರಿ ಜೊತೆ ಸ್ವಾಮಿ

ಆಪಲ್ ನಂತಹ ಸುಂದರಿ ಜೊತೆ ಸ್ವಾಮಿ

ಈ ದೃಶ್ಯವನ್ನು ನೋಡಿದರೆ ಬಹುತೇಕ ವಿಡಿಯೋ ಸ್ವಾಮಿಗಳ ರಾಸಲೀಲೆಯನ್ನು ಹೋಲುವಂತಿದೆ. ಆಪಲ್ ನಂತಹ ಸುಂದರಿ ಜೊತೆ ಸ್ವಾಮಿಗಳ ರಾಸಲೀಲೆ ನೋಡಿ.

ಸುಂದರಿ ಜೊತೆ ಐಟಂ ಸಾಂಗು

ಸುಂದರಿ ಜೊತೆ ಐಟಂ ಸಾಂಗು

ಇನ್ನೂ ಏನೇನಿದೆಯೋ ಈ ಚಿತ್ರದಲ್ಲಿ ಎಂಬಂತಿದೆ ಈ ಫೋಟೋ. ಐಟಂ ಸಾಂಗ್ ಸಹ ಅಷ್ಟೇ ಸೊಗಸಾಗಿ ಚಿತ್ರೀಕರಿಸಿದ್ದಾರೆ.

ಮಳೆ ಹನಿಯಲ್ಲಿ ಮಿಂದೆದ್ದ ಜೋಡಿ

ಮಳೆ ಹನಿಯಲ್ಲಿ ಮಿಂದೆದ್ದ ಜೋಡಿ

ಸ್ವಾತಿಮುತ್ತಿನ ಮಳೆ ಹನಿಯೆ..ಮೆಲ್ಲ ಮೆಲ್ಲನೆ ಧರೆಗಿಳಿಯೆ ಎಂದು ಬಣ್ಣದ ಗೆಜ್ಜೆ ಚಿತ್ರದಲ್ಲಿನ ಹಾಡನ್ನು ನೆನಪಿಸುವಂತಿದೆ ಇವರಿಬ್ಬರ ವರಸೆ.

ಕುಣಿದು ಕುಣಿಸು ಸುಸ್ತಾದ ಸ್ವಾಮಿಗಳು

ಕುಣಿದು ಕುಣಿಸು ಸುಸ್ತಾದ ಸ್ವಾಮಿಗಳು

ಮಳೆಯಲ್ಲಿ ತೋಯ್ದು ತೊಪ್ಪೆಯಾಗಿ, ಬಳಿಕ ಕೊಂಚ ಆರಾಮವಾಗಿ ಕಾಲುಗಳನ್ನು ಚಾಚಿ ರಿಲ್ಯಾಕ್ಸ್ ಆಗುತ್ತಿರುವ ಚಿಟ್ಟೆ ಸ್ವಾಮೀಜಿಗಳು.

More from Filmibeat

English summary
Film maker Madan Patel's Kannada film Yaarivanu slated for release on 15th March 2013. A court in Bangalore gave him permission to release the film with a disclaimer that it was not about Nithyananda and a change of title. ಯಾರಿವನು? ಇವನೂ ಒಂಥರಾ ಚಿಟ್ಟೆ ಸ್ವಾಮಿನೇ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X