»   » ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ

ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ

Posted By:
Subscribe to Filmibeat Kannada

ಕನ್ನಡದ ಸಾಕಷ್ಟು ಚಿತ್ರಗಳಿಗೆ ಪ್ರಚಾರಕಲೆ ನೀಡಿರುವ ಮಣಿ ಅವರ ವಿವಾಹ ಇತ್ತೀಚೆಗೆ ಹಂಸ ಅವರೊಡನೆ ನೆರವೇರಿತು. ಮಣಿ ಅವರು ಸರಿಸುಮಾರು 200ಕ್ಕೂ ಅಧಿಕ ಚಿತ್ರಗಳಿಗೆ ಜಾಹೀರಾತು ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.

ಚಿತ್ರ ಒಂದಕ್ಕೆ ಶೀರ್ಷಿಕೆ ಎಷ್ಟು ಮುಖ್ಯವೋ ಅದನ್ನು ಆಕರ್ಷವಾಗಿ ಡಿಸೈನ್ ಮಾಡುವುದು ಅಷ್ಟೇ ಮುಖ್ಯ. ಅದೆಷ್ಟೋ ಚಿತ್ರಗಳ ಶೀರ್ಷಿಕೆಯ ಅಕ್ಷರಗಳು ಮಣಿ ಅವರ ಕೈಯಲ್ಲಿ ಬಾಗಿ, ಬಳುಕಿ ಆಕರ್ಷಕವಾಗಿ ಅರಳಿವೆ. ಅಕ್ಷರಗಳಿಗೆ ಇವರು ರಿಂಗ್ ಮಾಸ್ಟರ್ ಇದ್ದಂತೆ. ಇವರು ಹೇಳಿದಂತೆ ಅವು ಕುಣಿಯುತ್ತವೆ.

Films Ad Designer Mani

ಉದಾಹರಣೆಗೆ ಹೇಳಬೇಕು ಅಂದರೆ ಎದೆಗಾರಿಕೆ, ಲಕ್ಷ್ಮಿ, ಕಲ್ಪನ, ಶಿವ, ಗಾಡ್ ಫಾದರ್, ಕಾಲಾಯ ತಸ್ಮೈ ನಮಃ, ಕಡ್ಡಿಪುಡಿ, ಹುಡುಗರು, ರಣ, ಜೋಗಿ, ಅಣ್ಣಾಬಾಂಡ್...ಹೀಗೆ ಅದೆಷ್ಟೋ ಚಿತ್ರಗಳಿಗೆ ಪ್ರಚಾರಕಲೆ ನೀಡಿದ್ದಾರೆ ಮಣಿ.

ಇವರಿಬ್ಬರ ಮದುವೆ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 5 ಮತ್ತು 6ರಂದು ನೆರವೇರಿತು. ನಾಯಕರಾದ ಉಪೇಂದ್ರ, ಪ್ರೇಂ(ನೆನಪಿರಲಿ), ನಿರ್ಮಾಪಕರಾದ ಶ್ರೀನಿವಾಸ್, ಕೆ.ಪಿ.ಶ್ರೀಕಾಂತ್ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ವಧುವರರಿಗೆ ಶುಭಕೋರಿದರು.

ಅಂದಹಾಗೆ ಮಣಿ ಅವರ ಬಾಳಸಂಗಾತಿಯಾಗಿರುವ ಹಂಸ ಅವರು ವಾಸವಿ ವಿದ್ಯಾ ನಿಕೇತನ್ ಕಾಲೇಜಿನ ಪದವೀಧರರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ. (ಒನ್ಇಂಡಿಯಾ ಕನ್ನಡ)

English summary
Kannada films popular ad designer Mani got married to Hamsa at Vasavi Conventional Hall in Vishveswarapuram, Bangalore March 5th and 6th. He worked over 200 films as ad designer.
Please Wait while comments are loading...