For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರಗಳ ಮರೆಯಲಾಗದ ಚುಂಬನ ದೃಶ್ಯಗಳು

  By ರವಿಕಿಶೋರ್
  |

  ಕೇವಲ ಬಾಲಿವುಡ್, ಹಾಲಿವುಡ್‌ನಲ್ಲಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನಲ್ಲೂ ಬಿಸಿಬಿಸಿ ಚುಂಬನ ದೃಶ್ಯಗಳು ಪ್ರೇಕ್ಷಕರ ಹೃದಯವನ್ನು ಬೆಚ್ಚಗೆ ಮಾಡಿವೆ. ಅಂತಹ ಕಾಮಪ್ರಚೋದಕ, ಮಾದಕ ಚುಂಬನಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ. ಕೆಲವರು ಯಾವುದೇ ಮುಜುಗರವಿಲ್ಲದೆ ತುಟಿಗೆ ತುಟಿಗಳನ್ನು ಒತ್ತಿದ್ದರೆ, ಇನ್ನೂ ಕೆಲವರು ಮುಳ್ಳಿಗೆ ಮುತ್ತಿಕ್ಕಿದಂತೆ ತುಟಿ ಮಾಡಿದ್ದಾರೆ.

  ಚುಂಬನ ವಿದ್ಯೆಯಲ್ಲಿ ಇಮ್ರಾನ್ ಹಸ್ಮಿ, ಹೃತಿಕ್ ರೋಷನ್, ಮಲ್ಲಿಕಾ ಶೆರಾವತ್‌ನಷ್ಟು ಗಾಂಧಿನಗರ ತಾರೆಗಳು ಪಳಗಿರದಿದ್ದರೂ ಪ್ರೇಕ್ಷಕರಿಗೆ ಮತ್ತೇರಿಸುವಲ್ಲಿ ಮಾತ್ರ ವಿಫಲವಾಗಿಲ್ಲ.

  ಕನ್ನಡದಲ್ಲಿ ವೀಣಾ ಮಲಿಕ್ ಹಾಕಿದ ಹಾಟ್ ಬಾಂಬ್

  ಕನ್ನಡದಲ್ಲಿ ವೀಣಾ ಮಲಿಕ್ ಹಾಕಿದ ಹಾಟ್ ಬಾಂಬ್

  ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಚಿತ್ರದಲ್ಲಿ ಪಾಕ್ ತಾರೆ ವೀಣಾ ಮಲಿಕ್ ಹಾಟ್ ದೃಶ್ಯಗಳಿವೆ. ಚಿತ್ರದ ನಾಯಕ ನಟ ಅಕ್ಷಯ್ ಹಾಗೂ ವೀಣಾ ನಡುವಿನ ಹಾಟ್ ಚುಂಬನ ದೃಶ್ಯಗಳು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಸೆನ್ಸಾರ್ ಮಂಡಳಿ ಏನಾದರೂ ಕ್ಯಾತೆ ತೆಗೆದರೆ ಟ್ರಿಬ್ಯುನಲ್ ಮಂಡಳಿ ಮೆಟ್ಟಿಲೇರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

  ಹೂ ಚಿತ್ರದಲ್ಲಿ ನಮಿತಾ, ಕ್ರೇಜಿಸ್ಟಾರ್ ರಸಮಯ ಕ್ಷಣಗಳು

  ಹೂ ಚಿತ್ರದಲ್ಲಿ ನಮಿತಾ, ಕ್ರೇಜಿಸ್ಟಾರ್ ರಸಮಯ ಕ್ಷಣಗಳು

  ನೀಲಕಂಠ ಚಿತ್ರದಲ್ಲಿ ರವಿಚಂದ್ರನ್ ಅಮಿತವಾಗಿ ನಮಿತಾಳ ಮೇಲೆ ಹಾವಿನಂತೆ ಹರಿದಾಡಿದ್ದನ್ನು ಕನ್ನಡಿಗರು ಮರೆತಿಲ್ಲ. ಇದಾದ ಬಳಿಕ ಬಂದ ಹೂ ಚಿತ್ರದಲ್ಲೂ ಇಬ್ಬರು ಮದಗಜಗಳಂತೆ ರೊಮ್ಯಾನ್ಸ್ ಮಾಡಿದ್ದರು. ಚಿತ್ರ ತೋಪಾಯಿತು ಎಂಬುದನ್ನು ಬಿಟ್ಟರೆ ನಮಿತಾ ಅಭಿಮಾನಿಗಳಿಗೆ ಈ ಚಿತ್ರ ರಸದೌತಣ ನೀಡಿತ್ತು.

  ದುನಿಯಾ ವಿಜಯ್, ಸ್ಮಿತಾ ಪ್ರಣಯ ಪ್ರಸಂಗ

  ದುನಿಯಾ ವಿಜಯ್, ಸ್ಮಿತಾ ಪ್ರಣಯ ಪ್ರಸಂಗ

  ದುನಿಯಾ ವಿಜಯ್ ಮತ್ತು ನಟಿ ಸ್ಮಿತಾ ನಡುವಿನ ಚುಂಬನ ದೃಶ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ 'ಅಕ್ಕ' ಕಾದಂಬರಿ ಆಧಾರಿತ ಚಿತ್ರ 'ಅವ್ವ'. ಈ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಸ್ಮಿತಾ ನಡುವಿನ ಪ್ರಣಯ ಪ್ರಸಂಗ ಪಡ್ಡೆಗಳ ಮೈ ಬೆಚ್ಚಗೆ ಮಾಡುವಲ್ಲಿ ಯಶಸ್ವಿಯಾಗಿತ್ತು.
  ಈ ದೃಶ್ಯದಿಂದ ಚಿತ್ರ ಕೆಟ್ಟ ವಿಮರ್ಶೆಗಳಿಗೆ ಗುರಿಯಾಗಬೇಕಾಯಿತು. ದುನಿಯಾ ವಿಜಯ್ ಸ್ಮಿತಾ ತುಟಿಗೆ ತುಟಿ ಹಚ್ಚಿ ಲಿಪ್‌ಲಾಕ್ ಮಾಡುವ ಸನ್ನಿವೇಶ ಕತೆಗೆ ಪೂರಕವಾಗಿದ್ದರೂ ಅಸಹಜವೆನಿಸುವಷ್ಟರ ಮಟ್ಟಿಗೆ ಈ ದೃಶ್ಯವಿತ್ತು.

  ಐ ಯಾಮ್ ಸಾರಿ ಮತ್ತೆ ಬನ್ನಿ ಚುಂಬಿಸೋಣ

  ಐ ಯಾಮ್ ಸಾರಿ ಮತ್ತೆ ಬನ್ನಿ ಚುಂಬಿಸೋಣ

  ನೆನಪಿರಲಿ ಪ್ರೇಮ್ ಹಾಗೂ ಕರಿಷ್ಮಾ ತನಾ ನಡುವಿನ ಬಿಸಿಬಿಸಿ ದೃಶ್ಯಗಳು ಬಿಡುಗಡೆಯಾಗಿದ್ದೇ ತಡ ಒಂದು ವರ್ಗದ ಪ್ರೇಕ್ಷಕರು ತುಟಿ ಸವರಿಕೊಂಡಿದ್ದರು. ಆದರೆ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಚಿತ್ರದಲ್ಲಿ ತುಟಿ ತುಟಿ ಚುಂಬನ ಇದೆ ಎಂದ ಕೂಡಲೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದರು.
  'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇದೆಯಂತೆ. ಅದು ಹಾಗಂತೆ ಹೀಗಂತೆ ಎಂಬುದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ತರ್ಲೆ ಮಾಡಿತ್ತು. ಆ ದೃಶ್ಯ ಇದೆ.

  ನಟ ರಾಹುಲ್ , ಕೀರ್ತಿ ನಡುವಿನ ಚೊಚ್ಚಲ ಚುಂಬನ

  ನಟ ರಾಹುಲ್ , ಕೀರ್ತಿ ನಡುವಿನ ಚೊಚ್ಚಲ ಚುಂಬನ

  ಇದು ನನ್ನುಸಿರೇ ಚಿತ್ರದ ಸ್ಟಿಲ್. ಈ ಚಿತ್ರ ತೆರೆಕಂಡದ್ದು ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ 1, 2008ರಲ್ಲಿ. ವಿಶೇಷ ಎಂದರೆ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಲುಪ್ರಿಯನ್ ಎಂಬ ಇಬ್ಬರು ನಿರ್ದೇಶಕರು. ಚಿತ್ರ ಒಂದೇ ವಾರಕ್ಕೆ ತೋಪಾಗಿದ್ದು ಬೇರೆ ವಿಷಯ. ಆದರೆ ಚಿತ್ರದಲ್ಲಿನ ಚುಂಬನ ದೃಶ್ಯ ಮಾತ್ರ ಅಚ್ಚಳಿಯದೆ ಪಡ್ಡೆಗಳ ಹೃದಯ ತಂದಾನ ಹಾಡುವಂತೆ ಮಾಡಿತ್ತು.
  ನಟ ರಾಹುಲ್ ಹಾಗೂ ಕೀರ್ತಿ ನಡುವಿನ ಕೆಲವು ಸನ್ನಿವೇಶಗಳು ಕಾರ್ನರ್ ಸೀಟುಗಳಲ್ಲಿ ಅಂಟಿಕುಳಿತ್ತಿದ್ದ ಜೋಡಿ ಹಕ್ಕಿಗಳಿಗೆ ತಕ್ಕಮಟ್ಟಿಗೆ ವರ್ಕ್‌ಔಟ್ ಆಯಿತಷ್ಟೆ! ಉಳಿದಂತೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶಗಳು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗಲ್ಲ. ಹೊಸಬರ ಚುಂಬನ ಪ್ರಯತ್ನ ಫಲಕಾರಿಯಾಗಲಿಲ್ಲ ಎಂಬುದಂತೂ ಸತ್ಯ.


  ಪ್ರೇಕ್ಷಕರೇನೋ ಇಂತಹ ಹಸಿಬಿಸಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಸಿನಿಮಾ ತಾರೆಗಳೇ ಯಾಕೋ ಏನೋ ತುಟಿಗೆ ತುಟಿ ಬೆರೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕಾಮೆಂಟುಗಳು ಕೇಳಿಬರುತ್ತಿವೆ.

  ಕೆಲವರು ಒಂದೇ ಟೇಕ್‌ಗೆ ಓಕೆ ಎಂಬಂತೆ ಚುಂಬಿಸುತ್ತಾರೆ. ಇನ್ನು ಕೆಲವರು ಹತ್ತುಹನ್ನೆರಡು ಬಾರಿ ಚುಂಬಿಸಿದರೂ ಟೇಕ್ ಓಕೆ ಆಗಲ್ಲ. ಕನ್ನಡ ಚಿತ್ರಗಳಲ್ಲಿ ಬಂದಂತಹ ಕೆಲವು ಹಾಟ್ ಚುಂಬನ ದೃಶ್ಯಗಳು ಇಲ್ಲಿವೆ.

  English summary
  Love Making Scenes, lip lock scenes from Kannada Movies. Actress Namitha and Crazy Star Ravichandran, Duniya Vijay and Smitha, Veena Malik Kannada Dirty Picture, Love Star Prem, Rahul and Keerthi hot kissing scenes from Kannada films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X