For Quick Alerts
  ALLOW NOTIFICATIONS  
  For Daily Alerts

  ಅರ್ಧ ವರ್ಷದಲ್ಲಿ ಸ್ಯಾಂಡಲ್ ವುಡ್ ನ ಸೋಲು-ಗೆಲುವಿನ ಲೆಕ್ಕಾಚಾರ

  By Bharath Kumar
  |

  2017 ನೇ ಸಾಲಿನಲ್ಲಿ ಅರ್ಧ ವರ್ಷ ಮುಗಿತು. ಸುಮಾರು 75 ಕ್ಕೂ ಹೆಚ್ಚು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಅವುಗಳಲ್ಲಿ ಗೆದ್ದಿದ್ದು ಮಾತ್ರ ಬೆರಳೆಣಿಕೆಯ ಚಿತ್ರಗಳು ಮಾತ್ರ. ಸ್ಟಾರ್ಸ್ ಸಿನಿಮಾಗಳು ಅಬ್ಬರಿಸಿವೆ. ವಿಭಿನ್ನ ಚಿತ್ರಗಳು ಗಮನ ಸೆಳೆದಿವೆ.

  ಇನ್ನು ಸಾಲು ಸಾಲು ಹೊಸಬರ ಚಿತ್ರಗಳು ಪೈಪೋಟಿ ಮೇಲೆ ಬಿಡುಗಡೆಯಾಗಿವೆ. ಆದ್ರೆ, ಬಂದ ವೇಗದಲ್ಲೇ ಥಿಯೇಟರ್ ಗಳಿಂದ ಎತ್ತಂಗಡಿಯಾಗಿವೆ.

  ಹಾಗಾದ್ರೆ, ಈ ವರ್ಷದ ಇಂಟರ್ ವಲ್ ವೇಳೆಗೆ ಸ್ಯಾಂಡಲ್ ವುಡ್ ಹೇಗಿದೆ? ಎಷ್ಟು ಸಿನಿಮಾಗಳು ಗೆದ್ದವು, ಎಷ್ಟು ಸಿನಿಮಾಗಳು ಸೋತವು? ಜನವರಿಯಿಂದ ಜೂನ್ ತಿಂಗಳವರೆಗೂ ಕನ್ನಡ ಚಿತ್ರರಂಗದ ಸಂಪೂರ್ಣ ವರದಿಯನ್ನ ಮುಂದೆ ನೀಡಲಾಗಿದೆ. ಮುಂದೆ ಓದಿ.....

  'ಪುಷ್ಪಕ ವಿಮಾನ' ಚಿತ್ರದಿಂದ ವರ್ಷಾರಂಭ

  'ಪುಷ್ಪಕ ವಿಮಾನ' ಚಿತ್ರದಿಂದ ವರ್ಷಾರಂಭ

  ಜನವರಿ 6.....ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ 'ಪುಷ್ಪಕ ವಿಮಾನ' ಚಿತ್ರದ ಮೂಲಕ ಕನ್ನಡ ಚಿತ್ರರಂಗ 2017ನೇ ವರ್ಷದ ಶುಭಾರಂಭ ಮಾಡಿತ್ತು. ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆನೂ ಸಿಕ್ತು. ಹೀಗಾಗಿ, ವರ್ಷದ ಮೊದಲ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತ್ತು.

  'ವಿಮಾನ'ದ ಜೊತೆ 'ಶ್ರೀಕಂಠ'ನ ಎಂಟ್ರಿ

  'ವಿಮಾನ'ದ ಜೊತೆ 'ಶ್ರೀಕಂಠ'ನ ಎಂಟ್ರಿ

  ಇನ್ನು ಅದೇ ದಿನ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರವೂ ಬಿಡುಗಡೆಯಾಗಿತ್ತು. ಈ ಚಿತ್ರಕ್ಕು ಭರ್ಜರಿ ಯಶಸ್ಸು ಸಕ್ಕಿತ್ತು. ಈ ಮೂಲಕ ಈ ವರ್ಷದಲ್ಲಿ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗುವುದರ ಜೊತೆ ವರ್ಷಕ್ಕೆ ಚಾಲನೆ ನೀಡಲಾಯಿತು.

  'ಬ್ಯೂಟಿಫುಲ್ ಮನಸ್ಸುಗಳು' ಜಯ

  'ಬ್ಯೂಟಿಫುಲ್ ಮನಸ್ಸುಗಳು' ಜಯ

  ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಜೋಡಿ 'ಬ್ಯೂಟಿಫುಲ್ ಮನಸ್ಸುಗಳು' ರಿಲೀಸ್ ಆಗಿ ದೊಡ್ಡ ಜಯ ಗಳಿಸಿತ್ತು. ಈ ವರ್ಷದ ಮ್ಯೂಸಿಕಲ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು.

  ಶತದಿನ ಆಚರಿಸಿದ 'ಚೌಕ'

  ಶತದಿನ ಆಚರಿಸಿದ 'ಚೌಕ'

  ದ್ವಾರಕೀಶ್ ನಿರ್ಮಾಣ ಸಂಸ್ಥೆಯಿಂದ ಹೊರ ಬಂದ ಚೌಕ ಸಿನಿಮಾ ಈ ವರ್ಷ ಅತಿ ದೊಡ್ಡ ಸಕ್ಸಸ್ ಕಂಡ ಸಿನಿಮಾ. ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾದ 'ಚೌಕ' 100 ದಿನಗಳನ್ನ ಪೂರೈಸಿ ಈ ವರ್ಷದ ಮೊದಲ ಸೆಂಚುರಿ ಸಿನಿಮಾ ಎನಿಸಿಕೊಂಡಿತ್ತು.

  ಸುದೀಪ್ 'ಹೆಬ್ಬುಲಿ'

  ಸುದೀಪ್ 'ಹೆಬ್ಬುಲಿ'

  ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಯಶಸ್ವಿ 50 ದಿನಗಳನ್ನ ಪೂರೈಸಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಬಿಸ್ ನೆಸ್ ಮಾಡಿತ್ತು. ದಾಖಲೆಯ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು.

  ಯಶಸ್ಸಿನ 'ರಾಜಕುಮಾರ'

  ಯಶಸ್ಸಿನ 'ರಾಜಕುಮಾರ'

  ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ 2017 ನೇ ಸಾಲಿನ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಆಗಿದ್ದ ಈ ಚಿತ್ರವನ್ನ ಕನ್ನಡ ಪ್ರೇಕ್ಷಕರು ಎರಡು ಕೈಗಳಿಂದ .ಅಪ್ಪಿಕೊಂಡರು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸಿದ ಈ ಚಿತ್ರ 100 ನೇ ದಿನದತ್ತ ಸಾಗಿದೆ.

  ಅಬ್ಬರಿಸಿದ 'ಚಕ್ರವರ್ತಿ'

  ಅಬ್ಬರಿಸಿದ 'ಚಕ್ರವರ್ತಿ'

  ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದರು, ದುಡ್ಡು ಮಾಡುವುದರಲ್ಲಿ ಸಿನಿಮಾ ಹಿಂದೆ ಬಿದ್ದಿಲ್ಲ. ಇನ್ನು ಮಧ್ಯರಾತ್ರಿ 12 ಗಂಟೆಗೆ ಪ್ರದರ್ಶನ ಶುರುಮಾಡಿ ಕನ್ನಡದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.

  'ಬಂಗಾರದ ಮನುಷ್ಯ'ನಿಗೆ ಜೈಕಾರ

  'ಬಂಗಾರದ ಮನುಷ್ಯ'ನಿಗೆ ಜೈಕಾರ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ರಾಜ್ಯಾದ್ಯಂತ ಅದ್ಬುತ ಸ್ವಾಗತ ಸಿಕ್ಕಿದೆ. ರೈತರ ಪರ ಕಥೆ ಹಣೆಯಲಾಗಿದ್ದ ಈ ಚಿತ್ರ ರಾಜಕೀಯ ನಾಯಕರು ಸೇರಿದಂತೆ ರೈತರ ಮನ ಗೆಲ್ಲುವಲ್ಲಿ ಯಶಸ್ಸಾಗಿದೆ.

  ಗಮನ ಸೆಳೆದ ಚಿತ್ರಗಳು

  ಗಮನ ಸೆಳೆದ ಚಿತ್ರಗಳು

  ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ', ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ 'ಶುದ್ದಿ', ಮಹಿಳಾ ಪ್ರಧಾನ ಚಿತ್ರ 'ಊರ್ವಿ', 'ರಾಗ', 'ಅಲ್ಲಮ', 'ಹ್ಯಾಪಿ ನ್ಯೂ ಇಯರ್', 'ಬಿಬಿ5', 'ಮನಸು ಮಲ್ಲಿಗೆ' ಅಂತಹ ಸಿನಿಮಾ ವಿಭಿನ್ನ ಕಥೆ ಮತ್ತು ಮೇಕಿಂಗ್ ವಿಚಾರಕ್ಕೆ ಗಮನ ಸೆಳೆದಿವೆ.

  ನಿರಾಸೆಗೊಳಿಸಿದ ಚಿತ್ರಗಳು

  ನಿರಾಸೆಗೊಳಿಸಿದ ಚಿತ್ರಗಳು

  ಸುಮಂತ್ ಶೈಲೇಂದ್ರ ಅಭಿನಯದ 'ಲೀ', 'ಮೇಲುಕೋಟೆ ಮಂಜ', 'ಸ್ಮೈಲ್ ಪ್ಲೀಸ್', ಪೂಜಾಗಾಂಧಿಯ 'ಜೀಲೆಬಿ', ವಿಜಯ ರಾಘವೇಂದ್ರ ಅವರ 'ಎರಡು ಕನಸು', ರೋಗ್', 'ಮಾಸ್ತಿಗುಡಿ', 'ಪಟಾಕಿ', 'ಬೆಂಗಳೂರು ಅಂಡರ್ ವರ್ಲ್ಡ್' ಸೇರಿದಂತೆ ಹಲವು ಚಿತ್ರಗಳು ಸಾಧಾರಣ ಯಶಸ್ಸು ಕಂಡರು ಜನರ ನಿರೀಕ್ಷೆಯನ್ನ ತಲುಪಲಿಲ್ಲ.

  ಮುಂದಿನ ಅರ್ಧವರ್ಷ 'ಮಾರಿಹಬ್ಬ'

  ಮುಂದಿನ ಅರ್ಧವರ್ಷ 'ಮಾರಿಹಬ್ಬ'

  ಸದ್ಯ, 2017ನೇ ಅರ್ಧ ವರ್ಷದಲ್ಲಿ ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಂದಿವೆ. ಮುಂದಿನ ಅರ್ಧವರ್ಷದಲ್ಲಿ ಮತ್ತಷ್ಟು ಬಿಗ್ಗೆಸ್ಟ್ ಸಿನಿಮಾಗಳು ತೆರೆಕಾಣಲು ಸಜ್ಜಾಗಿದೆ.

  English summary
  First Half of 2017 was surprising to see so many content based and commercial oriented movies released. Here we have listed out the best Kannada movies of 2017 january to june.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X