»   » ಮುಂದಿನ 6 ತಿಂಗಳು ಇವರದ್ದೇ ಅಬ್ಬರ: ಇವರ ಮುಂದೆ ನಿಲ್ಲೋರು ಯಾರು?

ಮುಂದಿನ 6 ತಿಂಗಳು ಇವರದ್ದೇ ಅಬ್ಬರ: ಇವರ ಮುಂದೆ ನಿಲ್ಲೋರು ಯಾರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅರ್ಧ ವರ್ಷ ಮುಗಿಯಿತು. ನಿರೀಕ್ಷೆ ಹುಟ್ಟಿಸಿದ್ದ ಬಹುತೇಕ ಚಿತ್ರಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಕೆಲವು ಯಶಸ್ಸು ಗಳಿಸಿದ್ರೆ, ಮತ್ತೆ ಕೆಲವು ಮಕಾಡೆ ಮಲಗಿದವು.

ಈಗ 2017ನೇ ವರ್ಷದ ಸೆಕೆಂಡ್ ಹಾಫ್ ಟೈಮ್. ಮುಂದಿನ ಆರು ತಿಂಗಳಲ್ಲಿ ಮತ್ತಷ್ಟು ದೊಡ್ಡ ದೊಡ್ಡ ಸಿನಿಮಾ ತೆರೆಕಾಣಲಿದೆ. ಸ್ಟಾರ್ ಗಳ ಮುಂದೆ ಹೊಸಬರು ಮಿಂಚಲು ಸಿದ್ದವಾಗಿದ್ದಾರೆ.

ಹಾಗಿದ್ರೆ, ಯಾವೆಲ್ಲಾ ಚಿತ್ರಗಳು ವರ್ಷದ ದ್ವಿತೀಯಾರ್ಧದಲ್ಲಿ ಅಬ್ಬರಿಸಲು ಸಜ್ಜಾಗಿದೆ. ಯಾವ ನಟ 2017 ನೇ ವರ್ಷದ ಬಾಕ್ಸ್ ಆಫೀಸ್ ಕಿಂಗ್ ಆಗಿ ಹೊರ ಹೊಮ್ಮಲಿದ್ದಾರೆ ಎಂಬುದನ್ನ ಮುಂದೆ ಓದಿ.....

ಪವರ್ 'ಅಂಜನಿ ಪುತ್ರ'

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಸದ್ಯದಲ್ಲೇ ಶತದಿನದ ಸಂಭ್ರಮವನ್ನ ಆಚರಿಸಲಿದೆ. ಅಷ್ಟರಲ್ಲೇ ಪುನೀತ್ ಕಡೆಯಿಂದ 'ಅಂಜನಿಪುತ್ರ' ಸಿದ್ದವಾಗುತ್ತಿದ್ದು ಈ ವರ್ಷವೇ ತೆರೆಕಾಣಲಿದೆ. ಈ ಚಿತ್ರಕ್ಕೆ ಹರ್ಷ.ಎ ಆಕ್ಷನ್ ಕಟ್ ಹೇಳಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

'ತಾರಕ್' ದರ್ಶನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಇದೇ ವರ್ಷ ಬಿಡುಗಡೆಯಾಗಿತ್ತು. ಈಗ ದರ್ಶನ್ ಅಭಿನಯದಲ್ಲಿ 'ತಾರಕ್' ಚಿತ್ರವೂ ಇದೇ ವರ್ಷ ತೆರೆಕಾಣಲು ಸಜ್ಜಾಗುತ್ತಿದೆ. ಮಿಲನ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಸ್ತವ್ ನಾಯಕಿ ಆಗಿದ್ದಾರೆ.

'ದಿ ವಿಲನ್'

ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಿ ವಿಲನ್' ಸ್ಯಾಂಡಲ್ ವುಡ್ ನ ಬಹುದೊಡ್ಡ ಚಿತ್ರ. ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸುತ್ತಿರುವ ಮೊಟ್ಟ ಮೊದಲ ಚಿತ್ರ ಇದು. ಹೀಗಾಗಿ, ಈ ಚಿತ್ರದ ಮೇಲೆ ಸಿನಿ ದುನಿಯಾದ ಕಣ್ಣು ಬಿದ್ದಿದೆ. ಪ್ರೇಮ್ ಅವರ 'ದಿ ವಿಲನ್' ಕೂಡ ಈ ವರ್ಷವೇ ಬಿಡುಗಡೆಯಾಗಲಿದೆ.

'ಟಗರು' ಮತ್ತು 'ಲೀಡರ್'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿದೆ. ದುನಿಯಾ ಸೂರಿ ನಿರ್ದೇಶನದ 'ಟಗರು' ಮತ್ತು ಸಹನಾ ಮೂರ್ತಿ ನಿರ್ದೇಶನದ 'ಲೀಡರ್' ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದೆ.

ಶ್ರೀಮುರಳಿ 'ಮಫ್ತಿ'

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮಫ್ತಿ' ಚಿತ್ರ ಈ ವರ್ಷದ ನಿರೀಕ್ಷೆಯ ಚಿತ್ರ. 'ರಥಾವರ' ಚಿತ್ರದ ನಂತರ ಶ್ರೀಮುರುಳಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದ್ದು, ಶ್ರೀಮುರುಳಿಗೆ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

ಧ್ರುವ ಸರ್ಜಾ 'ಭರ್ಜರಿ'

'ಬಹುದ್ದೂರ್' ಚಿತ್ರದ ನಂತರ ಧ್ರುವ ಸರ್ಜಾ ಅಭಿನಯದ ಚಿತ್ರ 'ಭರ್ಜರಿ'. ಎಲ್ಲಾ ಅಂದುಕೊಂಡಂತೆ ಆಗಿದ್ದರೇ, ಇಷ್ಟೊತ್ತಿಗಾಗಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಅಂತಿಮ ಹಂತದ ಚಿತ್ರೀಕರಣದಿಂದ ವಿಳಂಬವಾಗಿತ್ತು. ಈಗ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಆಗಸ್ಟ್ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಟ್ಟರ 'ಮುಗುಳುನಗೆ'

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯ 'ಮುಗುಳುನಗೆ' ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ಭಟ್ಟರು 'ಮುಗುಳುನಗೆ' ಬೀರಲಿದ್ದಾರೆ.

ಯಶ್ 'ಕೆ.ಜಿ.ಎಫ್'

ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ಈ ವರ್ಷದ ಬಹುನಿರೀಕ್ಷೆಯ ಚಿತ್ರ. ಅದ್ದೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ.

ಉಪೇಂದ್ರ ಮತ್ತೆ ಬಾ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಮತ್ತೆ ಬಾ ಉಪೇಂದ್ರ' ಚಿತ್ರವೂ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಉಪೇಂದ್ರಗೆ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಪ್ರೇಮ ಜೊತೆಯಾಗಿದ್ದಾರೆ.

ನಿರೀಕ್ಷೆಯ ಚಿತ್ರಗಳು

ಇವಷ್ಟೇ ಅಲ್ಲದೇ, ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ', ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಸಾಹೇಬ', ಅರ್ಜುನ್ ಸರ್ಜಾ ಪುತ್ರಿ ಕನ್ನಡದಲ್ಲಿ ಅಭಿನಯಿಸಿರುವ 'ಪ್ರೇಮಬರಹ' ಚಿತ್ರಗಳು ವರ್ಷದ ಸೆಕೆಂಡ್ ಹಾಫ್ ನಲ್ಲಿ ಬಿಡುಗಡೆಯಾಗಲಿದೆ.

ಅರ್ಧ ವರ್ಷದಲ್ಲಿ ಸ್ಯಾಂಡಲ್ ವುಡ್ ನ ಸೋಲು-ಗೆಲುವಿನ ಲೆಕ್ಕಾಚಾರ

English summary
Second Half of 2017 in Sandalwood has Surprising to See So Many Big Movie in The Race. Here We have listed out the Best Upcoming Kannada movies of 2017 June To December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada