twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಗೆ ಅರ್ಹತೆ ಪಡೆದ ರಂಗಿತರಂಗ, ಕೇರ್ ಆಫ್ ಫುಟ್ಪಾತ್ 2

    By ಜೇಮ್ಸ್ ಮಾರ್ಟಿನ್
    |

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಕನ್ನಡ ಎರಡು ಚಿತ್ರಗಳು ಅರ್ಹತೆ ಪಡೆದುಕೊಂಡಿವೆ. ಲ್ಯಾಟರಲ್ ಎಂಟ್ರಿ ಮೂಲಕ ಸ್ಪರ್ಧೆಗಿಳಿದಿದ್ದ ನೂರಾರು ಚಿತ್ರಗಳ ಪೈಕಿ ಅನುಪ್ ಭಂಡಾರಿ ಅವರ ರಂಗಿತರಂಗ ಹಾಗೂ ಕಿಶನ್ ಅವರ ಕೇರ್ ಆಫ್ ಫುಟ್ಪಾತ್ 2 ಆಯ್ಕೆಯಾಗಿದೆ. ಈ ಶುಭ ಸುದ್ದಿಯನ್ನು ಅನುಪ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.

    305 ಚಿತ್ರಗಳ ಪೈಕಿ ರಂಗಿತರಂಗ ಆಯ್ಕೆಯಾಗಿದೆ ಎಂದು ಅನುಪ್ ಬರೆದುಕೊಂಡಿದ್ದಾರೆ.

    ಭಾರತದಿಂದ ಅಧಿಕೃತ ಎಂಟ್ರಿ ಜೊತೆಗೆ ಲ್ಯಾಟರಲ್ ಎಂಟ್ರಿ ಮೂಲಕ ಯಾರು ಬೇಕಾದರೂ ಸ್ವತಂತ್ರವಾಗಿ ತಮ್ಮ ಚಿತ್ರವನ್ನು ಸ್ಪರ್ಧೆಗೆ ಕಳಿಸಬಹುದು. ಆಯ್ಕೆದಾರರು ಮೆಚ್ಚಿದರೆ ಲ್ಯಾಟರಲ್ ಎಂಟ್ರಿಯಾಗಿ ಸ್ಪರ್ಧಿಸಲು ಅರ್ಹತೆ ಪಡೆದುಕೊಳ್ಳುತ್ತದೆ. ಈಗ ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಚಿತ್ರ ಹಾಗೂ ರಂಗಿತರಂಗ ಕೂಡಾ ಈ ರೀತಿ ಅರ್ಹತೆ ಪಡೆದುಕೊಂಡಿದೆ. [ಆಸ್ಕರ್ ರೇಸಿಗೆ ಬಾಹುಬಲಿ ಭಾರತದಿಂದ ಸೇರ್ಪಡೆ?]

    ಆಸ್ಕರ್ ಸಮಿತಿ ಅವರು ಅಕ್ಟೋಬರ್ ತಿಂಗಳಿನಲ್ಲಿ ಕೇರ್ ಆಫ್ ಫುಟ್ ಪಾತ್ 2 ಹಾಗೂ ರಂಗಿತರಂಗ ಸೇರಿದಂತೆ ನೂರಾರು ಚಿತ್ರಗಳನ್ನು ವೀಕ್ಷಿಸಿದ್ದರು. ಈ ಪೈಕಿ ಕನ್ನಡದ ಎರಡು ಚಿತ್ರಗಳು ಸೇರಿದಂತೆ ಭಾರತದ ನಾಲ್ಕು ಚಿತ್ರಗಳು ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿವೆ.

    Kannada Films RangiTaranga and Care Of Footpath 2 eligible for 88th OSCAR Awards

    ಅಧಿಕೃತ ಎಂಟ್ರಿ ಯಾವುದು?: ಆಸ್ಕರ್ ಪ್ರಶಸ್ತಿಗಾಗಿ ಡಿ.2ರಿಂದ ಈ ನಾಮನಿರ್ದೇಶನ ಪ್ರಕ್ರಿಯೆ ಶುರುವಾಗಿತ್ತು..ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ವಿಭಾಗಕ್ಕೆ ಭಾರತದಿಂದ ಯಾವ ಚಿತ್ರ ಸ್ಪರ್ಧಿಸಬೇಕು ಎಂಬುದನ್ನು ಅಮೋಲ್ ಪಾಲೇಕರ್ ನೇತೃತ್ವದ ಸಮಿತಿ ನಿರ್ಧರಿಸಿದೆ.

    ಈ ಬಾರಿ ಮರಾಠಿ ಭಾಷೆಯ ‘ಕೋರ್ಟ್' ಚಿತ್ರ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ. ಚೊಚ್ಚಲ ನಿರ್ದೇಶಕರಾಗಿ ಚೈತನ್ಯ ತಮ್ಹಾನೆ ಮೊದಲ ಯತ್ನದಲ್ಲೇ ಆಸ್ಕರ್ ಗೆ ಲಗ್ಗೆ ಇಟ್ಟಿದ್ದಾರೆ. ವೀರ್ ಸಾಥಿದಾರ್ ಹಾಗೂ ವಿವೇಕ್ ಗೊಂಬೆರ್ ಚಿತ್ರದಲ್ಲಿದ್ದಾರೆ

    ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದ ಅತ್ಯಂತ ದುಬಾರಿ ಚಿತ್ರ 'ಬಾಹುಬಲಿ' ಜೊತೆಗೆ ವಿಶಾಲ್ ಭಾರದ್ವಾಜ್ ಅವರ 'ಹೈದರ್', ರಾಜಕುಮಾರ್ ಹಿರಾನಿ ಅವರ 'ಪಿಕೆ', ಅನುರಾಗ್ ಕಶ್ಯಪ್ ಅವರ 'ಅಗ್ಲಿ', ಒಮುಂಗ್ ಕುಮಾರ್ ಅವರ 'ಮೇರಿ ಕೋಮ್', ಮಸಾನ್ (ಹಿಂದಿ), ತಮಿಳಿನ ಕಾಕಾ ಮುಟ್ಟೈ ಚಿತ್ರಗಳು ಆಯ್ಕೆ ಸಮಿತಿ ಮುಂದಿತ್ತು.

    RangiTaranga is one of the 305 films short listed for OSCAR nominations. Congratulations to everyone who worked on the film and the audience who supported us.

    Posted by Anup Bhandari on 15 December 2015

    English summary
    Kannada Films RangiTaranga and Care Of Footpath 2 are among 305 films eligible for 88th OSCAR Awards nominations. These films received a ‘lateral’ entry at the prestigious awards.
    Wednesday, December 16, 2015, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X