»   » ಇತರ ಭಾಷೆಗಳಿಗೆ ರಿಮೇಕಾದ ಕನ್ನಡದ ಚಿತ್ರರತ್ನಗಳು - 5

ಇತರ ಭಾಷೆಗಳಿಗೆ ರಿಮೇಕಾದ ಕನ್ನಡದ ಚಿತ್ರರತ್ನಗಳು - 5

Posted By:
Subscribe to Filmibeat Kannada

ಇತ್ತೀಚೆಗೆ ಬರುತ್ತಿರುವ ಕನ್ನಡ ಚಿತ್ರಗಳು ರಿಮೇಕ್ ಚಿತ್ರಗಳು ಎನ್ನುವ ಕೂಗಿನ ನಡುವೆ, ನಮ್ಮ ಚಿತ್ರಗಳೂ ಇತರ ಭಾಷೆಗಳಿಗೆ ರಿಮೇಕಾದ ಉದಾಹರಣೆಗಳು ಬಹಳಷ್ಟಿವೆ. ಅದನ್ನು ನಮ್ಮ ಓದುಗರಿಗೆ ತಿಳಿಸುವ ಪ್ರಯತ್ನವಾಗಿ ಈ ಲೇಖನಗಳ ಸರಣಿಯನ್ನು ಆರಂಭಿಸಿ, ಇದುವರೆಗೆ ಇಪ್ಪತ್ತು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

ಮೊದಲ ಲೇಖನದಲ್ಲಿ ಮಲ್ಲಮ್ಮನ ಪವಾಡ, ನಾಗರಹಾವು, ಶಂಕರ್ ಗುರು, ಕಸ್ತೂರಿ ನಿವಾಸ ಮತ್ತು ಅನುರಾಗ ಅರಳಿತು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಮಾಹಿತಿ ನೀಡಿದ್ದೆವು.

ಎರಡನೇ ಲೇಖನದಲ್ಲಿ ಬಂಗಾರದ ಪಂಜರ, ಸ್ಕೂಲ್ ಮಾಸ್ಟರ್, ಮಾನಸ ಸರೋವರ, ಪಡುವಾರಹಳ್ಳಿ ಪಾಂಡವರು ಮತ್ತು ಬಂಧಮುಕ್ತ ಚಿತ್ರಗಳು ಯಾವ ಯಾವ ಭಾಷೆಗೆ ರಿಮೇಕಾದ ಬಗ್ಗೆ ಬರೆದಿದ್ದೆವು.

ಮೂರನೇ ಲೇಖನದಲ್ಲಿ ಪ್ರೇಮದ ಕಾಣಿಕೆ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಕಥಾ ಸಂಗಮ ಮತ್ತು ವಸಂತ ಗೀತ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಬಗ್ಗೆ ತಿಳಿಸಿದ್ದೆವು.

ನಾಲ್ಕನೇ ಲೇಖನದಲ್ಲಿ ಸಹೋದರರ ಸವಾಲ್, ಕುಂಕುಮ ರಕ್ಷೆ, ಸತ್ಯ ಹರಿಶ್ಚಂದ್ರ, ಅಮೃತಧಾರೆ ಮತ್ತು ಮರ್ಮ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಬಗ್ಗೆ ತಿಳಿಸಿದ್ದೆವು.

ಈ ಸರಣಿಯ ಐದನೇ ಲೇಖನದಲ್ಲಿ ಮತ್ತೆ ಐದು ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಸ್ಲೈಡಿನಲ್ಲಿ ನೋಡಿ

ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 4

ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 3

ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 2

ಬೇರೆ ಭಾಷೆಗೆ ರಿಮೇಕಾದ ಕನ್ನಡ ಚಿತ್ರಗಳ ಸರಣಿ - 1

ನಾನಿನ್ನ ಬಿಡಲಾರೆ

ಮಂಗಲ್ ಸೂತ್ರ (ಹಿಂದಿ)
ಮೂಲ ನಿರ್ದೇಶಕರು : ವಿಜಯ್
ಮೂಲ ತಾರಾಗಣದಲ್ಲಿ : ಅನಂತ್ ನಾಗ್, ಲಕ್ಷ್ಮಿ
ನಿರ್ದೇಶಕ : ವಿಜಯ್ ಬಿ
ತಾರಾಗಣದಲ್ಲಿ : ಅನಂತ್ ನಾಗ್, ರೇಖಾ, ಮದನ್ ಪುರಿ

ಓಂ

ಓಂಕಾರಂ (ತೆಲುಗು), ಅರ್ಜುನ್ ಪಂಡಿತ್ (ಹಿಂದಿ)
ಮೂಲ ನಿರ್ದೇಶಕರು : ಉಪೇಂದ್ರ
ಮೂಲ ತಾರಾಗಣದಲ್ಲಿ : ಶಿವರಾಜ್ ಕುಮಾರ್, ಪ್ರೇಮಾ,
ನಿರ್ದೇಶಕ (ತೆಲುಗು) : ಉಪೇಂದ್ರ
ತಾರಾಗಣದಲ್ಲಿ (ತೆಲುಗು) : ರಾಜಶೇಖರ್, ಪ್ರೇಮಾ, ಭಾಗ್ಯಶ್ರೀ
ನಿರ್ದೇಶಕ (ಹಿಂದಿ) : ರಾಹುಲ್ ರಾವಲ್
ತಾರಾಗಣದಲ್ಲಿ (ಹಿಂದಿ) : ಸನ್ನಿ ಡಿಯೋಲ್, ಜೂಹಿ ಚಾವ್ಲಾ, ಅನ್ನು ಕಪೂರ್

ತಾಯಿಗೆ ತಕ್ಕ ಮಗ

ಮೇ ಇಂತಕಾಂ ಲೂಂಗಾ (ಹಿಂದಿ)
ಮೂಲ ನಿರ್ದೇಶಕರು : ವಿ ಸೋಮಶೇಖರ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಪದ್ಮಪ್ರಿಯಾ, ಸಾಹುಕಾರ್ ಜಾನಕಿ
ನಿರ್ದೇಶಕ : ಟಿ ರಾಮರಾವ್
ತಾರಾಗಣದಲ್ಲಿ : ಧರ್ಮೇಂದ್ರ, ರೀನಾ ರಾಯ್, ದಾರಾಸಿಂಗ್

ಅಣ್ಣತಂಗಿ

ಗೋರಿಂಟಕು (ತೆಲುಗು)
ಮೂಲ ನಿರ್ದೇಶಕರು : ಓಂ ಸಾಯಿಪ್ರಕಾಶ್
ಮೂಲ ತಾರಾಗಣದಲ್ಲಿ : ಶಿವರಾಜ್ ಕುಮಾರ್, ರಾಧಿಕಾ, ಶ್ರೀನಿವಾಸಮೂರ್ತಿ
ನಿರ್ದೇಶಕ : ವಿ ಆರ್ ಪ್ರಕಾಶ್
ತಾರಾಗಣದಲ್ಲಿ : ರಾಜಶೇಖರ್, ಮೀರಾ ಜಾಸ್ಮಿನ್

ಚಿಗುರಿದ ಕನಸು

ಸ್ವದೇಶ್ (ಹಿಂದಿ)
ಮೂಲ ನಿರ್ದೇಶಕರು : ಟಿ ಎಸ್ ನಾಗಾಭರಣ
ಮೂಲ ತಾರಾಗಣದಲ್ಲಿ : ಶಿವರಾಜ್ ಕುಮಾರ್, ವಿದ್ಯಾ ವೆಂಕಟೇಶ್, ಅನಂತನಾಗ್, ಅವಿನಾಶ್
ನಿರ್ದೇಶಕ : ಅಶುತೋಶ್ ಗೌರೀಕರ್
ತಾರಾಗಣದಲ್ಲಿ : ಶಾರೂಖ್ ಖಾನ್, ಗಾಯತ್ರಿ ಜೋಷಿ, ಕಿಶೋರಿ ಬಲ್ಲಾಳ್
ಕನ್ನಡ ಚಿತ್ರದ ಕಥೆ ಕದ್ದಿಲ್ಲ ಎನ್ನುವುದು ಸ್ವದೇಶ್ ಚಿತ್ರತಂಡದ ಮಾತು

English summary
List of five more Kannada movies remade it to other languages. Series - 5
Please Wait while comments are loading...