Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು
ಕನ್ನಡ ನಾಡು, ಭಾಷೆಯ ವಿಚಾರದಲ್ಲಿ ಯಾವುದೇ ಸಮಸ್ಯೆಯಾದರೂ ಒಗ್ಗಟ್ಟು ಪ್ರದರ್ಶನ ಮಾಡುವ ಸಿನಿತಾರೆಯರು ಈಗ ಕೊಡಗಿನ ಮಕ್ಕಳ ಕಣ್ಣೀರು ಒರೆಸಲು ಮುಂದಾಗಿದ್ದಾರೆ. ಯಾರಿಗೂ ಕಾಯದೇ ತಮ್ಮಿಂದ ಆಗುವ ಸಹಾಯವನ್ನ ಸ್ವ-ಇಚ್ಛೆಯಿಂದ ಮಾಡಿದ್ದಾರೆ.
ಇದು ಮತ್ತಷ್ಟು ಜನರಿಗೆ ಸ್ಫೂರ್ತಿಯಾಗಿದೆ ಮತ್ತು ಸ್ಫೂರ್ತಿಯಾಗಬೇಕಿದೆ. ಕೆಲವರು ತಮ್ಮ ಸಹಾಯವನ್ನ ಹಣದ ರೂಪದಲ್ಲಿ ಮಾಡಿದ್ದಾರೆ. ಮತ್ತೆ ಕೆಲವರು ಕೊಡಗಿನಲ್ಲಿ ಸದ್ಯ ನಿರಾಶ್ರಿತರಾಗಿರುವವರಿಗೆ ಅಗತ್ಯ ವಸ್ತುಗಳನ್ನ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ, ಜಗ್ಗೇಶ್, ಪ್ರಕಾಶ್ ರೈ, ಶಿವರಾಜ್ ಕುಮಾರ್, ದರ್ಶನ್ ಅಭಿಮಾನಿಗಳು, ಸುದೀಪ್ ಅಭಿಮಾನಿಗಳು, ಯಶ್ ಅಭಿಮಾನಿಗಳು, ಗಣೇಶ್ ಅಭಿಮಾನಿಗಳು, ಸೃಜನ್ ಲೋಕೇಶ್ ಹೀಗೆ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ಸ್ ಕೊಡಗಿಗೆ ನೆರವಾಗಿದ್ದಾರೆ. ಮುಂದೆ ಓದಿ......

ಸಂಯುಕ್ತಾ ಹೊರನಾಡು
ಕೊಡಗಿನ ಜನತೆಯ ಅಗತ್ಯ ವಸ್ತುಗಳನ್ನ ಪೂರೈಸುವ ಮೂಲಕ ನಟಿ ಸಂಯುಕ್ತ ಹೊರನಾಡು ನೆರವಾಗಿದ್ದಾರೆ. ಮೂಲಭೂತ ಅಗತ್ಯಕ್ಕೆ ಬೇಕಾದ ವಸ್ತುಗಳು, ಔಷಧಿಗಳು, ಹೀಗೆ ಮಿನಿ ಟ್ರಕ್ ಮೂಲಕ ವಸ್ತುಗಳನ್ನು ಕೊಡಗಿಗೆ ಕಳುಹಿಸಿದ್ದಾರೆ.

ಜಗ್ಗೇಶ್ ಸಹಾಯ
ನಟ ಜಗ್ಗೇಶ್ ಅವರು ಕೂಡ ಕೊಡಗಿನ ಜನತೆಗೆ ಬೇಕಾಗುವಂತಹ ಅಗತ್ಯ ವಸ್ತುಗಳನ್ನ, ಆಹಾರ, ಬಟ್ಟೆ ಮಕ್ಕಳಿಗೆ ಬೇಕಾಗುವ ತಿಂಡಿ-ತಿನಸುಗಳನ್ನ ಒಂದು ಟೆಂಪೋ ಮೂಲಕ ಕೊಡಗಿಗೆ ಕಳುಹಿಸಿ ಬೆಂಬಲ ನೀಡಿದ್ದಾರೆ.
ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

ಕೊಡಗಿಗೆ ಸಾಗಿದ 'ಯಶೋಮಾರ್ಗ'
ರಾಕಿಂಗ್ ಸ್ಟಾರ್ ಯಶ್ ಅವರ ಸಾರಥ್ಯದ 'ಯಶೋಮಾರ್ಗ' ಫೌಂಡೇಶನ್ ಮೂಲಕ ಕೊಡಗಿನ ಜನರಿಗೆ ಬೇಕಾಗುವ ಅಗತ್ಯವಸ್ತುಗಳನ್ನ ಟೆಂಪೋ ಮೂಲಕ ಕಳುಹಿಸಿಕೊಡಲಾಗಿದೆ.

5 ಲಕ್ಷ ನೀಡಿದ ಪ್ರಕಾಶ್ ರೈ
ಕೊಡಗು ಪ್ರವಾಹ ಪೀಡಿತರ ಕ್ಷೇಮಾಭಿವೃದ್ಧಿಗಾಗಿ ನಟ ಪ್ರಕಾಶ್ ರೈ 5 ಲಕ್ಷ ಹಣ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಲ್ಲೆಯ ಏಳಿಗಿಗೆ ಎಲ್ಲ ರೀತಿಯಲ್ಲೂ ಬೆಂಬಲವಾಗಿರುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ #justaskingfiundation ಮತ್ತು #prakashrajfiundation ಮೂಲಕ ಕೊಡಗನ್ನ ಕಟ್ಟುವ ಹಲವು ಯೋಜನೆಗಳನ್ನ ಮುಂದೆ ರೂಪಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ

ಸೃಜನ್ ಲೋಕೇಶ್
ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಅವರು ವೈಯಕ್ತಿಕವಾಗಿ ತಮ್ಮ 'ಮಜಾ ಟಾಕೀಸ್' ತಂಡದ ಜೊತೆ ಸೇರಿ ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಕೊಡಗು ಜನರಿಗೆ ಕಳುಹಿಸಿದ್ದಾರೆ.

ಧನ ಸಹಾಯ ಮಾಡಿದ ಶಿವಣ್ಣ
ಈಗಾಗಲೇ ಕೊಡಗು ಜನರ ಪಾಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ನೆರವಾಗಿದ್ದಾರೆ. ಅಗತ್ಯ ವಸ್ತುಗಳನ್ನ ಪೂರೈಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಇದೀಗ, ಸ್ವತಃ ಶಿವರಾಜ್ ಕುಮಾರ್ 10 ಲಕ್ಷ ಹಣವನ್ನ ಕೊಡಗು ಜನರ ಕ್ಷೇಮಾಭಿವೃದ್ಧಿಗಾಗಿ ನೀಡಲು ಮುಂದಾಗಿದ್ದಾರೆ.
ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್

ಕೊಡಗಿಗೆ ಹೋಗಿ ಬಂದ ಚಂದನ್ ಶೆಟ್ಟಿ
Rap ಸಿಂಗರ್ ಚಂದನ್ ಶೆಟ್ಟಿ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸ್ವತಃ ಕೊಡಗು ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಜನರ ಯೋಗಕ್ಷೇಮವನ್ನ ವಿಚಾರಿಸಿದ್ದಾರೆ. ಜೊತೆಗೆ ಅಗತ್ಯವಸ್ತುಗಳನ್ನ ಕೂಡ ಒದಗಿಸಿ ಬಂದಿದ್ದಾರೆ.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ

ಹರ್ಷಿಕಾ ಮತ್ತು ಭುವನ್ ಜೋಡಿ
ಕನ್ನಡ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಇಬ್ಬರು ಒಟ್ಟಿಗೆ ಕೊಡಗಿನ ಜನರ ಬೆಂಬಲಕ್ಕೆ ನಿಂತಿದ್ದಾರೆ. ಮೂಲತಃ ಕೊಡಗಿನವರಾದ ಇವರಿಬ್ಬರು ಬೆಂಗಳೂರಿನಿಂದ ಅಗತ್ಯವಸ್ತುಗಳನ್ನ ತೆಗೆದುಕೊಂಡು ಕೊಡಗಿಗೆ ಹೋಗಿ ಅಲ್ಲಿನ ಜನರಿಗೆ ನೆರವಾಗಿದ್ದಾರೆ.

ಸುದೀಪ್ ಮತ್ತು ದರ್ಶನ್ ಫ್ಯಾನ್ಸ್
ಇದಕ್ಕು ಮೊದಲ ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳು ತಮ್ಮ ನಟರು ಮಾಡಿದ ಮನವಿಯನ್ನ ಗೌರವಿಸಿ ಈ ಇಬ್ಬರು ನಟರು ಕೊಡಗಿನ ಜರಿಗೆ ಅಗತ್ಯ ವಸ್ತುಗಳನ್ನ ಪೂರೈಸಿ ಸಹಾಯವಾಗಿದ್ದಾರೆ.