ಮೊದಲ ಬಾರಿಗೆ ಕರ್ನಾಟಕದಿಂದ ಹೊರ ನಡೆದ ಸತೀಶ್
ಅಯೋಗ್ಯನಾಗಿ ಮಂಡ್ಯ ತುಂಬಾ ಒಂದು ರೌಂಡ್ ಹಾಕಿ ಬಂದ ನಟ ನೀನಾಸಂ ಸತೀಶ್ ಇದೇ ಮೊದಲ ಬಾರಿಗೆ ಕರ್ನಾಟಕ ಬಿಟ್ಟು ಹೊರಗಡೆ ಹೋಗಿದ್ದಾರೆ. ಹೌದು ಸತೀಶ್ ತಮ್ಮ ವೃತ್ತಿ ಜೀವನದಲ್ಲಿ ಫಸ್ಟ್ ಟೈಂ ಸಿನಿಮಾ ಚಿತ್ರೀಕರಣಕ್ಕಾಗಿ ರಾಜ್ಯದಿಂದ ಹೊರಗಡೆ ಹೋಗಿದ್ದಾರೆ.
ಸತೀಶ್ ಕನ್ನಡ ಸಿನಿಮಾರಂಗಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇಲ್ಲಿಯ ವರೆಗೂ ಯಾವುದೇ ಸಿನಿಮಾವನ್ನ ಕರ್ನಾಟಕ ಬಿಟ್ಟು ಬೇರೆ ಕಡೆಗಳಲ್ಲಿ ಚಿತ್ರೀಕರಣ ಮಾಡಿರಲಿಲ್ಲ. ಸದ್ಯ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿದೆ.
ಗೋದ್ರಾ ಸಿನಿಮಾದ ಚಿತ್ರೀಕರಣದಲ್ಲಿ ಶ್ರದ್ದಾ ಮತ್ತು ಸತೀಶ್ ಜೊತೆಯಲ್ಲಿ ಮತ್ತೊಬ್ಬ ವಿಶೇಷ ಅಥಿತಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅದ್ಯಾರಪ್ಪಾ ಅಂದರೆ ಗಿಡುಗ ಹೌದು ಸತೀಶ್ ಕೇರಳದ ಚಿತ್ರೀಕರಣ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಪೋಟೋಗಳ ಜೊತೆಯಲ್ಲಿ ಗಿಡುಗ ಇದೆ.

ಗೋದ್ರಾ ವಿಭಿನ್ನ ಕಥಾಹಂದರ ಇರುವ ಸಿನಿಮಾ. ಕೆ ಎಸ್ ನಂದೀಶ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಜೇಕಬ್ ಫಿಲ್ಮ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರೀಕರಣದ ಕೊನೆಯಹಂತವನ್ನು ಮುಟ್ಟಿರುವ ಗೋದ್ರಾ ತಂಡ ಸದ್ಯ ಕೆಲವು ದಿನಗಳಿಂದ ಕೇರಳದಲ್ಲಿ ಬಿಡುಬಿಟ್ಟಿದೆ.

ಚಿತ್ರದ ಹಾಡಿನ ದೃಶ್ಯಗಳನ್ನ ಚಿತ್ರೀಕರಿಸುವುದರಲ್ಲಿ ಬ್ಯುಸಿ ಆಗಿರುವ ಟೀಂ ಆದಷ್ಟು ಬೇಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗುತ್ತಿದ್ದಾರೆ.


Click it and Unblock the Notifications











