'ಆಯುಷ್ಮಾನ್ ಭವ' ಬಿಡುಗಡೆಯಿಂದ ಮುಂದಕ್ಕೆ ಹೋದ ಹರಿಪ್ರಿಯಾ ಸಿನಿಮಾ
ಶಿವರಾಜ್ ಕುಮಾರ್ ನಟನೆಯ 'ಆಯುಷ್ಮಾನ್ ಭವ' ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಅದರಿಂದ ಕೆಲ ಸಿನಿಮಾಗಳಿಗೆ ಸಮಸ್ಯೆ ಆಗಿದೆ. 'ಆಯುಷ್ಮಾನ್ ಭವ' ದಿಂದ ಹರಿಪ್ರಿಯಾ ಅಭಿನಯದ ಸಿನಿಮಾದ ಬಿಡುಗಡೆ ದಿನಾಂಕ ಬದಲಾಗಿದೆ.
ಕನ್ನಡ ಭಾಷೆ ಬಗ್ಗೆ ಇರುವ 'ಕನ್ನಡ್ ಗೊತ್ತಿಲ್ಲ' ಸಿನಿಮಾ ನವೆಂಬರ್ 1 ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ, ಆ ಸಮಯಕ್ಕೆ 'ಆಯುಷ್ಮಾನ್ ಭವ' ಚಿತ್ರ ಬರಲು ಸಿದ್ಧವಾಯಿತು. ಹೀಗಾಗಿ, ಬಿಡುಗಡೆ ದಿನವನ್ನು ನವೆಂಬರ್ 15ಕ್ಕೆ ಮುಂದೆ ಹಾಕಿತ್ತು. ಆದರೆ, 'ಆಯುಷ್ಮಾನ್ ಭವ' ಸಿನಿಮಾ ಇದೀಗ ನವೆಂಬರ್ 15ಕ್ಕೆ ತೆರೆಗೆ ಬರಲು ಪ್ಲಾನ್ ಮಾಡಿದೆ.

ನವೆಂಬರ್ 15ಕ್ಕೆ 'ಕನ್ನಡ್ ಗೊತ್ತಿಲ್ಲ' ಬಿಡುಗಡೆ ಎಂದು ಚಿತ್ರತಂಡ ಎಲ್ಲ ಕಡೆ ಪ್ರಮೋಷನ್ ಮಾಡಿತ್ತು. ಆದರೆ, ಇದೀಗ ರಿಲೀಸ್ ಡೇಟ್ ಬದಲು ಮಾಡಲಾಗಿದೆ. ಈಗ ನವೆಂಬರ್ 22 ರಂದು ಸಿನಿಮಾ ತೆರೆ ಕಾಣುತ್ತಿದೆ. ಪದೇ ಪದೇ ದಿನಾಂಕ ಬದಲು ಆಗುವುದು, ಪ್ರೇಕ್ಷಕರಲ್ಲಿ ಗೊಂದಲ ಉಂಟಾಗಿರುವುದಂತು ನಿಜ.
ಕನ್ನಡ ಗೊತ್ತಿಲ್ಲ ಟ್ರೇಲರ್ ನೋಡುತ್ತಿದ್ದರೆ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ತಿಳಿಯುತ್ತದೆ. ಹರಿಪ್ರಿಯಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ, ಪವನ್ ನಟಿಸಿದ್ದಾರೆ. ಟೀಸರ್ ನಲ್ಲಿ ಧರ್ಮಣ್ಣ ಕಾಮಿಡಿ ಮಜಾ ನೀಡುತ್ತಿದೆ.
ಆರ್ ಜೆ ಮಯೂರ್ ರಾಘವೇಂದ್ರ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕುಮಾರ ಕಂಠೀರವ ನಿರ್ಮಾಣ ಮಾಡಿದ್ದಾರೆ.


Click it and Unblock the Notifications